Karnataka Election : ಶೀಘ್ರ ಆಪ್ ಮೂರನೇ ಪಟ್ಟಿ
ಶಿಕ್ಷಣ, ಆರೋಗ್ಯವನ್ನೇ ಮುಖ್ಯ ಗುರಿಯಾಗಿಸಿಕೊಂಡು ತಮ್ಮ ಪಕ್ಷ ಕಣಕ್ಕಿಳಿಯಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ಬಿ.ಎಲ್….ವಿಶ್ವನಾಥ್ ತಿಳಿಸಿದರು.
ತುಮಕೂರು : ಶಿಕ್ಷಣ, ಆರೋಗ್ಯವನ್ನೇ ಮುಖ್ಯ ಗುರಿಯಾಗಿಸಿಕೊಂಡು ತಮ್ಮ ಪಕ್ಷ ಕಣಕ್ಕಿಳಿಯಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ಬಿ.ಎಲ್….ವಿಶ್ವನಾಥ್ ತಿಳಿಸಿದರು.
ಆಮ… ಆದ್ಮಿ ಪಕ್ಷದ ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೊದಲನೇ ಪಟ್ಟಿಯಲ್ಲಿ ಎಂಭತ್ತು ಮತ್ತು ಎರಡನೇ ಪಟ್ಟಿಯಲ್ಲಿ ಅರವತ್ತು ಅಭ್ಯರ್ಥಿಗಳನ್ನು ಅನೌನ್ಸ್ ಮಾಡಲಾಗಿದ್ದು ಈಗ ತುಮಕೂರು ಗ್ರಾಮಾಂತರ ಮತ್ತು ಕೊರಟಗೆರೆಗೂ ಘೋಷಿಸಲಾಗಿದೆ. ಮೂರನೇ ಪಟ್ಟಿಯಲ್ಲಿ ಉಳಿದ ಸ್ಥಾನಗಳನ್ನು ತುಂಬಲಾಗುತ್ತದೆ ಎಂದರು.
ಹೈಕೋರ್ಚ್ ವಕೀಲ ಹಾಗೂ ಪಕ್ಷದ ರಾಜ್ಯ ವಕ್ತಾರ ರಮೇಶ್ ನಾಯ್ಕ… ಎಲ… ಮಾತನಾಡಿ, ನಾವು ಒಂದು ರುಪಾಯಿ ಆಮಿಷವನ್ನು ಒಡ್ಡದೆ ಪ್ರಾಮಾಣಿಕವಾಗಿ ಜನರ ಬಳಿ ಹೋಗುತ್ತೇವೆ. ಇದನ್ನೇ ನಮ್ಮ ನಾಯಕ ಅರವಿಂದ್ ಕೇಜ್ರಿವಾಲ… ಕೂಡ ಹೇಳಿದ್ದಾರೆ. ಇಷ್ಟುದಿನ ಜನರ ಮುಂದೆ ಆಯ್ಕೆಗಳಿರಲಿಲ್ಲ. ಈಗ ಪರ್ಯಾಯವಾಗಿ ಆಮ… ಆದ್ಮಿ ಪಕ್ಷ ಬಂದಿದೆ ಎಂದರು.
ಸೊಗಡು ಶಿವಣ್ಣಗೆ ಆಹ್ವಾನ:
ಆಪ್ ಪಕ್ಷ ಸೇರಲು ಸೊಗಡು ಶಿವಣ್ಣ ಅವರಿಗೆ ಎರಡು ಬಾರಿ ಅಪೋ›ಚ್ ಮಾಡಿದ್ದೀನಿ. ಅವರು ಕಾಲಾವಕಾಶ ಕೇಳಿದ್ದಾರೆ ಕಾದು ನೋಡೋಣ. ಅವರು ಎಲ್ಲಾ ಸಮುದಾಯವನ್ನು ಒಳಗೊಂಡು ಹಾಗೂ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವುದಾದರೆ ನಾವು ಸ್ವಾಗತಿಸಲು ರೆಡಿ ಇದ್ದೇವೆ ಎಂದರು. ತುಮಕೂರು ನಗರಕ್ಕೆ ಅಟ್ಟಿಕಾ ಬಾಬು ಹೆಸರನ್ನು ಕಾರ್ಯಕರ್ತರೊಬ್ಬರು ನನ್ನ ಬಳಿ ತಂದಿದ್ದರು. ಹಣದೊಂದಿಗೆ ಬಂದವರು ಬೇಕಿಲ್ಲ. ಸಿದ್ಧಾಂತಕ್ಕಾಗಿ ಬಂದವರು ಇಲ್ಲಿ ಮುಖ್ಯ. ಅದೇ ನಮ್ಮ ಕಾರ್ಯಕರ್ತರಿಗೆ ಗೌರವ ಎಂದು ಹೇಳಿದ್ದೇವೆ ಎಂದರು.
ಆಪ್ ಪಕ್ಷದ ತುರುವೇಕೆರೆ ಅಭ್ಯರ್ಥಿ ಹಾಗೂ ನಟ ಟೆನ್ನಿಸ್ ಕೃಷ್ಣ ಮಾತನಾಡಿ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಧಿಕಾರದ ಆಸೆಗಾಗಿ ಬಿಜೆಪಿಗೆ ಹೋಗಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿಗೆ ಅವರಿಗೆ ವಯಸ್ಸಾಗಿರುತ್ತದೆಯಂತೆ ಎಂದು ಟೀಕಿಸಿದರು. ಈ ವೇಳೆ ಆಮ… ಆದ್ಮಿ ಪಕ್ಷದ ಪ್ರೇಮ… ಕುಮಾರ್ ಇದ್ದರು.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಭಾಷಿಕರ ಆಧಾರದ ಮೇಲೆ ಚುನಾವಣೆಗಳು ನಡೆದರೆ, ಕರ್ನಾಟದಲ್ಲಿ ಜಾತಿ ಮತ್ತು ಹಣದ ಮೇಲೆ ನಡೆಯುತ್ತಿದೆ. ಆದರೆ ನಾವು ಈ ಯಾವುದಕ್ಕೂ ಮಣೆ ಹಾಕದೆ ನಮ್ಮ ಪ್ರಗತಿ ಯೋಜನೆಗಳನ್ನಿಟ್ಟುಕೊಂಡು ಮನೆ ಮನೆಗೆ ಹೋಗುತ್ತೇವೆ.
ಡಾ.ಬಿ.ಎಲ್….ವಿಶ್ವನಾಥ್ ರಾಜ್ಯ ಉಪಾಧ್ಯಕ್ಷ, ಆಮ್ ಆದ್ಮಿ ಪಕ್ಷ