ಬೆಂಗಳೂರು ನಗರಕ್ಕೆ ಸಾಲು ಸಾಲು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಿಡಿಎ ಸೈಟ್‌ ಖರೀದಿಗೆ ಮತ್ತೆ ಅವಕಾಶ ನೀಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ  ಬೆಂಗಳೂರಿನಲ್ಲಿ ಬರೋಬ್ಬರಿ 65 ಎಕರೆ ಟ್ರೀ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ಬೆಂಗಳೂರು (ಮಾ.15): ಬೆಂಗಳೂರು ನಗರಕ್ಕೆ ಸಾಲು ಸಾಲು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಿಡಿಎ ಸೈಟ್‌ ಖರೀದಿಗೆ ಮತ್ತೆ ಅವಕಾಶ ನೀಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಬರೋಬ್ಬರಿ 65 ಎಕರೆ ಟ್ರೀ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಕೆಂಪೇಗೌಡ ಸೇರಿದಂತೆ ಇತರೆ ಬಡಾವಣೆಗಳಲ್ಲಿ 2016-18ರ ಅವಧಿಯಲ್ಲಿ ಲೀಸ್‌ ಕಮ್‌ ಸೇಲ್‌ ಆಧಾರದ ಮೇಲೆ ನಿವೇಶನ ಹಂಚಿಕೆಯಾಗಿದ್ದು, ಹಣದ ಕೊರತೆಯಿಂದಾಗಿ ಕಂತುಗಳನ್ನು ಪಾವತಿಸಲು ವಿಫಲವಾದವರಿಗೆ ಪೂರ್ಣ ಹಣ ಪಾವತಿಸಿ ನಿವೇಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಿ ಸಚಿವ ಸಂಪುಟ ನಿರ್ಧಾರ ಮಾಡಿದೆ.

ರಿಂಗ್‌ ರೋಡ್‌, ಕಡಬಗೆರೆ ಮೆಟ್ರೋಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ, 15,611 ಕೋಟಿ ರೂ ವೆಚ್ಚ ಮೀಸಲು

ನಿವೇಶನ ಹಂಚಿಕೆಯಾದವರಲ್ಲಿ ಕೆಲವರು ಕಂತುಗಳನ್ನು ಪಾವತಿಸಿಲ್ಲ. ಕೆಲವರು ಅರ್ಧ ಪಾವತಿಸಿ ಸುಮ್ಮನಾಗಿದ್ದಾರೆ. ಆರ್ಥಿಕ ಶಕ್ತಿ ಇಲ್ಲದೆ ಹಂಚಿಕೆಯಾದ ನಿವೇಶನ ಕಳೆದುಕೊಂಡಿದ್ದಾರೆ. ಇದಕ್ಕೆ ಅವರಲ್ಲಿ ಆರ್ಥಿಕ ಶಕ್ತಿ ಇಲ್ಲದಿರುವುದು ಕಾರಣ. ಹೀಗಾಗಿ ಅಂತಹವರಿಗೆ ಶೇ.12ರಷ್ಟು ಬಡ್ಡಿದರದಲ್ಲಿ ದಂಡ ವಿಧಿಸಿ ನಿವೇಶನ ಪಡೆಯಲು ಮತ್ತೊಮ್ಮೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬರೋಬ್ಬರಿ 65 ಎಕರೆ ಟ್ರೀ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ: ಪೂರ್ವ ಬೆಂಗಳೂರಿಗರಿಗೆ ಮೂಲಸೌಕರ್ಯ ಒದಗಿಸಲು ಎನ್‌ಜಿಇಎಫ್‌ನ 100 ಎಕರೆ ಜಾಗದಲ್ಲಿ 65 ಎಕರೆಯಲ್ಲಿ ₹11 ಕೋಟಿ ವೆಚ್ಚದಲ್ಲಿ ಬೃಹತ್‌ ಟ್ರೀ ಪಾರ್ಕ್ ನಿರ್ಮಾಣಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

ಕೋಟ್ಯಂತರ ಸಾಲದಲ್ಲಿ ಮುಳುಗಿರುವ ಅನಿಲ್ ಅಂಬಾನಿಯ ಈ ಸಂಸ್ಥೆಗೆ ಶೀಘ್ರದಲ್ಲೇ 4000 ಕೋಟಿ ರೂ ಸಿಗಲಿದೆ!

1,500 ಕೋಟಿಗೂ ಹೆಚ್ಚು ಬೆಲೆ ಬಾಳುವ ಜಮೀನನ್ನು ಸಾರ್ಜನಿಕರ ಬಳಕೆಗೆ ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಈ ಜಾಗದಲ್ಲಿ ವಾಕಿಂಗ್ ಟ್ರ್ಯಾಕ್‌, ಸೈಕಲ್‌ ಟ್ರ್ಯಾಕ್‌, ಆಟದ ಮೈದಾನ ಸೇರಿದಂತೆ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುವುದು. ತನ್ಮೂಲಕ ಪೂರ್ವ ಭಾಗಕ್ಕೆ ಬೃಹತ್‌ ಉದ್ಯಾನವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.

ಇನ್ನೂ 40 ಎಕರೆ ಜಾಗ ಅಲ್ಲೇ ಉಳಿಯಲಿದ್ದು, ಅಲ್ಲಿ ಬೇರೆ ಬೇರೆ ನಿರ್ಮಾಣಗಳಿಗೆ ಉದ್ದೇಶಿಸಲಾಗುತ್ತಿದೆ. ಸ್ಕೈ ಡೆಕ್‌ ನಿರ್ಮಾಣ ಸೇರಿದಂತೆ ಬೇರೆ ಯಾವುದೇ ಪ್ರಸ್ತಾವನೆ ಗುರುವಾರ ಚರ್ಚೆಗೆ ಬರಲಿಲ್ಲ ಎಂದರು.