ಬೆಳಗಾವಿ (ಏ.07): ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಲಖನ್ ಜಾರಕಿಹೊಳಿಗೆ ಬೇಸರ ತಂದಿದೆ. 

ಗೋಕಾಕ್‌ನಲ್ಲಿ ಲಖನ್ ಬಿಜೆಪಿ ಪರ ಕೆಲಸ ಮಾಡಲಿದ್ದಾರೆ. ಅವರ ಮನೆಗೆ ಹೋಗಿ ಮಾತನಾಡಿದ್ದೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. 

ಬೈ ಎಲೆಕ್ಷನ್ ನಡುವೆಯೇ ಅಚ್ಚರಿ ನಿರ್ಧಾರ ಕೈಗೊಂಡ ರಮೇಶ್‌ ಜಾರಕಿಹೊಳಿ ಸಹೋದರ ...

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಸುರೇಶ್ ಅಂಗಡಿ ಪತ್ನಿ ಮಂಗಲ ಅಂಗಡಿ ಸ್ಪರ್ಧೆ ಮಾಡಿದ್ದಾರೆ. 

ಇನ್ನು ಕೆಲ ದಿನಗಳ ಹಿಂದಷ್ಟೇ ಲಖನ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೇ ಕಾಂಗ್ರೆಸ್ ಮುಖಂಡರ  ವಿರುದ್ಧವೂ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲೂ ಹೈ ಕಮಾಂಡ್ ಇದೆ ಎಂದಿದ್ದರು.