ರಾಜ್ಯದಲ್ಲಿ ಉಪ ಚುನಾವಣೆ ರಂಗು ಜೋರಾಗಿದೆ. ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ಒಟ್ಟಿಗೆ ಪ್ರಚಾರ ನಡೆಸಿದ್ದಾರೆ
ಬೆಳಗಾವಿ (ಏ.01): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ಒಟ್ಟಿಗೆ ಪ್ರಚಾರ ನಡೆಸಿದ್ದಾರೆ. ಹೆಬ್ಬಾಳ್ಕರ್ ಅವರು ಹನುಮಾನ ನಗರದಲ್ಲಿರುವ ಸತೀಶ್ ಮನೆಗೆ ಭೇಟಿ ನೀಡಿದರು.
ಈ ವೇಳೆ ಚುನಾವಣಾ ಪ್ರಚಾರದ ಕುರಿತು ಮಾತುಕತೆ ನಡೆಸಿದರು. ಬಳಿಕ ಸತೀಶ್ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರಿನಲ್ಲಿ ಪ್ರಯಾಣ ಬೆಳೆಸಿ ಪ್ರಚಾರಕ್ಕೆ ತೆರಳಿದರು.
2 ವರ್ಷದಲ್ಲಿ ಸತೀಶ್ ಆಸ್ತಿ ಭಾರಿ ಏರಿಕೆ : ಹೆಚ್ಚಳವಾಗಿದ್ದೆಷ್ಟು..? ..
ಬೆಳಗಾವಿ ಗ್ರಾಮೀಣ ಕ್ಷೇತ್ರವಾದ ಉಚಗಾಂವ ಗ್ರಾಮಕ್ಕೆ ಪ್ರಚಾರಕ್ಕಾಗಿ ಸತೀಶ್ ಹಾಗೂ ಲಕ್ಷ್ಮಿ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ವಾದ್ಯಮೇಳ ನುಡಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಸತೀಶ್ ಪರ ಜೈಘೋಷ ಕೂಗಿದರು. ನಂತರ ಉಭಯ ಮುಖಂಡರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮತಯಾಚನೆ ಮಾಡಿದರು.
Last Updated Apr 1, 2021, 9:08 AM IST