Asianet Suvarna News Asianet Suvarna News

ಕರ್ನಾಟಕ ಬ್ಯಾಂಕ್‌ನ ಚೀಫ್‌ ಕಂಪ್ಲೇಟ್‌ ಆಫೀಸರ್‌ ವಾದಿರಾಜ್‌ ಸಾವು: ಕತ್ತು ಸೀಳಿದ ಸ್ಥಿತಿಯಲ್ಲಿ ದೇಹ ಪತ್ತೆ

ಕರ್ಣಾಟಕ ಬ್ಯಾಂಕಿನ ಮಂಗಳೂರು ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಅಧಿಕಾರಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

Karnataka Bank Mangalore branch Chief Complete Officer Vadiraj body found with throat slit sat
Author
First Published Nov 9, 2023, 6:21 PM IST

ಮಂಗಳೂರು (ನ.09): ಕರ್ಣಾಟಕ ಬ್ಯಾಂಕಿನ ಮಂಗಳೂರು ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಅಧಿಕಾರಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಮಂಗಳೂರಿನ ಬೊಂದೇಲ್ ನಲ್ಲಿರುವ ಅಪಾರ್ಟೆಂಟಿನ ಬಾಡಿಗೆ ಮನೆಯಲ್ಲಿ ಬೆಳಗ್ಗೆ ಕತ್ತು ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪಂಪ್‌ವೆಲ್ ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದ ವಾದಿರಾಜ (51) ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗ್ಗೆ 10 ಗಂಟೆ ವೇಳೆಗೆ ವಾದಿರಾಜ್‌ ಅವರ ಪತ್ನಿ ತಮ್ಮ ಮಗುವಿನೊಂದಿಗೆ ಶಾಲೆಯಲ್ಲಿ ಪೇರೆಂಟ್ ಮೀಟಿಂಗ್ ಇದೆಯೆಂದು ತೆರಳಿದ್ದರು. ನಂತರ ಮನೆಯಲ್ಲಿ ವಾದಿರಾಜ್‌ ಒಬ್ಬರೇ ಇದ್ದರು. ಬ್ಯಾಂಕಿನ ವಾಹನ ಚಾಲಕ ವಾದಿರಾಜ್ ಕೆಳಗೆ ಬರುತ್ತಾರೆಂದು ಕಾಯುತ್ತ ಕುಳಿತಿದ್ದರು. ವಾದಿರಾಜ್ ಇನ್ನೂ ಬಂದಿಲ್ಲವೆಂದು ಚಾಲಕ ಮೇಲೆ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ ಗೆ ಕೂದಲು ಸಿಲುಕಿ ಮಹಿಳೆ ಸಾವು!

ಇನ್ನು ಕಾರು ಚಾಲಕ ಕೂಡಲೇ ಸ್ಥಳೀಯರನ್ನು ಸೇರಿಸಿ ಬ್ಯಾಂಕ್ ಅಧಿಕಾರಿ ವಾದಿರಾಜ್‌ ಅವರನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಅದಾಗಲೇ ಬಹಳಷ್ಟು ರಕ್ತ ಹೋಗಿದ್ದರಿಂದ ಆಸ್ಪತ್ರೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ವಾದಿರಾಜ್ ಕುಟುಂಬ ಬೋಂದೇಲ್ ಅಪಾರ್ಟೆಂಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಗಳೂರು ನಗರದ ಪಂಪ್‌ವೆಲ್ ನಲ್ಲಿರುವ ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ವಾದಿರಾಜ್ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈಗ ಏಕಾಏಕಿ ಸಾವನ್ನಪ್ಪಿರುವುದು ಅನುಮಾಕ್ಕೆ ಕಾರಣವಾಗಿದೆ.

ಕರ್ನಾಟಕ ಬ್ಯಾಂಕ್ ನ ಜನರಲ್ ಮ್ಯಾನೇಜರ್ ವಾದಿರಾಜ ಸಾವು ಪ್ರಕರಣ ಕುರಿತು ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅವರು, ವಾದಿರಾಜ ಆಚಾರ್ಯ ಒಂದು ವರ್ಷದಿಂದ ಇಲ್ಲಿ ಬಾಡಿಗೆ ಮನೆಯಲ್ಲಿದ್ದರು. ಕರ್ನಾಟಕ ಬ್ಯಾಂಕ್ ನಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದರು. ನಾಲ್ಕು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದರು. ವಾದಿರಾಜ ಅವರ ಹೆಂಡತಿ ಮಕ್ಕಳ ಜೊತೆ ಶಾಲೆಯಲ್ಲಿ ಪೋಷಕರ ಸಭೆಗೆ ತೆರಳಿದ್ದರು. ವಾದಿರಾಜ ಒಬ್ಬರೇ ಮನೆಯಲ್ಲಿದ್ದರು. ಕಾರು ಚಾಲಕ ಮನೆಗೆ ಬಂದು ನೋಡಿದಾಗ ವಾದಿರಾಜ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅಪಾರ್ಟ್ಮೆಂಟ್ ನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅಂಕೋಲಾ ಏರ್ಪೋರ್ಟ್‌ ನಿರ್ಮಾಣಕ್ಕೆ ಭೂಮಿ ಕೊಟ್ಟವರಿಗೆ ಪರ್ಯಾಯ ಭೂಮಿ: ಸಚಿವ ಮಂಕಾಳ್‌ ವೈದ್ಯ ಭರವಸೆ

ವಾದಿರಾಜ ಮನೆಯವರು ನೀಡುವ ದೂರಿನ ಮೇಲೆ ಎಫ್.ಐ.ಆರ್ ದಾಖಲು ಮಾಡುತ್ತೇವೆ. ಮರಣೋತ್ತರ ಪರೀಕ್ಷೆ ನಡೆಯುವುದಕ್ಕೂ ಬಾಕಿಯಿದೆ. ಆ ಬಳಿಕ ಯಾವ ಕಾರಣಕ್ಕೆ ಈ ಸಾವಾಗಿದೆ ಎಂದು ಹೇಳಬಹುದು. ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಕೊಯ್ದಿರುವ ಗಾಯವಿದೆ. ದೂರಿನ ಆಧಾರದಲ್ಲಿ ತನಿಖೆ ಮಾಡುತ್ತೇವೆ. ಸಿಸಿಟಿವಿ ಫೂಟೇಜ್ ಎಲ್ಲಾ ಚೆಕ್ ಮಾಡಿದ್ದೇವೆ. ಆ ಸಂದರ್ಭ ಫೋನ್ ನಲ್ಲಿ ಯಾರೆಲ್ಲಾ ಮಾತನಾಡಿದ್ದಾರೆ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ತಿಳಿಸಿದರು.

Follow Us:
Download App:
  • android
  • ios