ಅಧಿಕಾರಿಗಳ ನಿರ್ಲಕ್ಷ್ಯ; ಮುದಗಲ್ನಲ್ಲಿ ಮತದಾನಕ್ಕಾಗಿ ವೃದ್ಧರ ಪರದಾಟ!
ರಾಜ್ಯ ಚುನಾವಣಾ ಆಯೋಗ ಈ ಬಾರಿ ಚುನಾವಣೆಯ ಕೆಲವೊಂದು ನಿಯಮಗಳನ್ನು ಜಾರಿಗೆ ತರುವ ಆದೇಶ ತಂದಿದ್ದರೂ ಕೂಡ ಅಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಮುದಗಲ್ (ಮೇ.11) : ರಾಜ್ಯ ಚುನಾವಣಾ ಆಯೋಗ ಈ ಬಾರಿ ಚುನಾವಣೆಯ ಕೆಲವೊಂದು ನಿಯಮಗಳನ್ನು ಜಾರಿಗೆ ತರುವ ಆದೇಶ ತಂದಿದ್ದರೂ ಕೂಡ ಅಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಚುನಾವಣಾ ಆಯೋಗವು(Karnataka election commission) ಈ ಬಾರಿ ಮತದಾನ ಹೆಚ್ಚಿಸಲು 80 ವಯೋಮಾನ ದಾಟಿದವರಿಗೆ ಮನೆಯಲ್ಲಿಯೇ ಮತದಾನ(Vote form home) ಮಾಡುವಂತೆ ಆದೇಶ ನೀಡಲಾಗಿತ್ತು. ಅಧಿಕಾರಿಗಳು ಕುಳಿತಲ್ಲಿಯೇ ಕುಳಿತು 80ರ ನಂತರ ವಯೋಮಾನದ ಯಾದಿಯನ್ನು ರಚಿಸಿ ಸ್ಥಳೀಯ ಬಿಎಲ್‌ಓಗಳಿಗೆ ನೀಡಿದ್ದಾರೆ ಎಂದು ಬಿಎಲ್‌ಓ ಮಾಹಿತಿ ನೀಡಿದ್ದಾರೆ. ಆದರೆ, ಸ್ಥಳೀಯವಾಗಿ 80 ರಿಂದ 95ರ ವಯೋಮಾನದ ವಯೋವೃದ್ಧರಿಗೆ ಮನೆಗೆ ತೆರಳಿ ಮತದಾನ ಮಾಡಲು ಅವಕಾಶ ನೀಡದೆ ಇರುವದರಿಂದ ಇಂದು ಮತದಾನ ಕೇಂದ್ರದ ಮುಂದೆ ವಯೋವೃದ್ಧರು ಮತದಾನಕ್ಕೆ ಅಲೆದಾಡುವಂತಹ ಪರಿಸ್ಥಿತಿ ಕಂಡು ಬಂದಿತು
ರಾಯಚೂರು: ಮತಗಟ್ಟೆ ಬಳಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಗಲಾಟೆ
ಪಟ್ಟಣದ ಕಿಲ್ಲಾದಲ್ಲಿ 88 ವಯೋಮಾನದ ವೃದ್ಧೆ, 85ರ ವಿಕಲಚೇತನ (ಕುರುಡು) ಮತ್ತು ಹಳೆಪೇಟೆಯಲ್ಲಿ 88ರ ವಯೋವೃದ್ಧೆ (ಕಿವುಡು) ಮತದಾನ ಮಾಡಲು ಮತಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಲು ಪರಿತಪಿಸಬೇಕಾಗ ಪರಿಸ್ಥಿತಿ ಕಂಡು ಬಂದಿತು. ಬಿಸಿಲಿನ ಬೇಗೆಗೆ ಬೆಂದ ಹಳೆಪೇಟೆ ಕೇಂದ್ರದಲ್ಲಿ ವೃದ್ಧೆ ಬಾಯಾರಿಕೆಯಾಗಿ ಧಮ್ಮಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ ಮಾಧ್ಯಮದವರು ಕುಡಿಯುವ ನೀರನ್ನು ಸರಬರಾಜು ಮಾಡಲು ಸಿಬ್ಬಂದಿಗೆ ಸೂಚಿಸಿದ ಪ್ರಸಂಗ ಕೂಡ ಕಂಡು ಬಂದಿತು. ಆದರೆ, ಮತದಾನಕ್ಕಾಗಿ ಮಾತ್ರ ವೃದ್ಧೆಯೋರ್ವಳು ಘಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಕಂಡು ಬಂದಿತು. ಚುನಾವಣಾ ಆಯೋಗದ ಆದೇಶಕ್ಕೆ ಕವಡ ಕಾಸಿನ ಕಿಮ್ಮತ್ತು ಇಲ್ಲವೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತು. ಇಂತಹ ಘಟನೆಳು ಮುದಗಲ್ಲ ಪಟ್ಟಣವಲ್ಲದೇ ಬೊಮ್ಮನಾಳ ಸೇರಿದಂತೆ ಮುದಗಲ್ಲ ಭಾಗದ ಗ್ರಾಮೀಣ ಭಾಗದಲ್ಲಿ ಕಂಡು ಬಂದಿರುವದು ಸಹಜವಾಗಿತ್ತು. ಆದರೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗ ಕ್ರಮ ಕೈಕೊಳ್ಳಲ್ಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮತದಾನಕ್ಕೆ ಬಂದ ಮಹಿಳೆ ಅಪಘಾತದಲ್ಲಿ ಸಾವು, ತಂದೆ, ಮಕ್ಕಳಿಗೆ ಗಾಯ
ಮುದಗಲ್: ಮತದಾನ ಮಾಡಿ ಮರಳಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮುದಗಲ್ ಪಟ್ಟಣದ ಹೊರ ವಲಯದಲ್ಲಿ ದ್ವೀಚಕ್ರ ವಾಹನ ಅಪಘಾತವಾಗಿ ಸ್ಥಳದಲ್ಲಿಯೇ ಮಹಿಳೆಯೋರ್ವಳು ಸಾವನ್ನಪ್ಪಿದರೆ, ಇಬ್ಬರು ಮಕ್ಕಳು, ತಂದೆಗೆ ಗಾಯವಾದ ಘಟನೆ ಇಂದು ಜರುಗಿದೆ.
'ಕಳ್ಳಕಾಕರ ಜೊತೆ ನಾನು ಹೋಗಲು ಸಾಧ್ಯವಿಲ್ಲ': ಜೆಡಿಎಸ್‌ಗೆ ಬಹುಮತ ನೀಡಿ ಎಂದ ಹೆಚ್‌ಡಿಕೆ
ಮತದಾನಕ್ಕೆ ಕುಟುಂಬ ಸಮೇತ ಮುಳ್ಳೂರ ಗ್ರಾಮಕ್ಕೆ ತೆರಳಿದ್ದು, ಮರಳಿ ಗುರುಗುಂಟಾ ಸಮೀಪದ ಟಣಮಕಲ್‌ಗೆ ತೆರಳುತ್ತಿರುವ ಮಾರ್ಗ ಮಧ್ಯೆ ಮುದಗಲ್ಲ ಪಟ್ಟಣದ ಹೊರ ವಲಯದಲ್ಲಿ ಲಿಂಗಸುಗೂರು ರಸ್ತೆಯಲ್ಲಿ ದ್ವಿಚಕ್ರ ವಾಹನದ ಟೈರ್ ಹೊಡೆದಿದ್ದರಿಂದ ಮಹಿಳೆಗೆ ತಲೆಗೆ, ಮುಖಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಮೃತ ದುರ್ದೈವಿ ದೇವಮ್ಮ (40) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಗರುಡಪ್ಪ, ಇಬ್ಬರು ಚಿಕ್ಕ ಮಕ್ಕಳು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಆಸ್ಪತ್ರೆಗೆ ಕಳಿಸಲಾಗಿದೆ.