ವಿಧಾನಸಭಾ ಚುನಾವಣೆ ಹಿನ್ನೆಲೆ. ಲೈಸನ್ಸ್ ಹೊಂದಿದ ರಿವಾಲ್ವರ್ ಪಿಸ್ತೂಲ್ ಬಂದೂಕು ಇನ್ನಿತರ ಶಸ್ತ್ರಾಸ್ತ್ರಗಳನ್ನು ಆಯಾ ಠಾಣೆಗಳಲ್ಲಿ ಠೇವಣಿ ಮಾಡುವಂತೆ ಆದೇಶ ಹೊರಡಿಸಲಾಗಿದೆ. 

ಬೆಂಗಳೂರು (ಏ.4) : ವಿಧಾನಸಭಾ ಚುನಾವಣೆ ಹಿನ್ನೆಲೆ. ಲೈಸನ್ಸ್ ಹೊಂದಿದ ರಿವಾಲ್ವರ್ ಪಿಸ್ತೂಲ್ ಬಂದೂಕು ಇನ್ನಿತರ ಶಸ್ತ್ರಾಸ್ತ್ರಗಳನ್ನು ಆಯಾ ಠಾಣೆಗಳಲ್ಲಿ ಠೇವಣಿ ಮಾಡುವಂತೆ ಆದೇಶ ಹೊರಡಿಸಲಾಗಿದೆ. 

ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆದೇಶ ಹೊರಡಿಸಲಾಗಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಪರವಾನಗಿ ಹೊಂದಿರುವವರು ಶಸ್ತ್ರಾಸ್ತ್ರಗಳನ್ನು ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್‌ ಠಾಣೆಗಳಿಗೆ ಒಪ್ಪಿಸಬೇಕು. ಚುನಾವಣೆ ಪ್ರಕ್ರಿಯೆಗಳು ಮುಗಿಯುವವರೆಗೂ ಬಳಸದಿರುವಂತೆ ಸೂಚಿಸಲಾಗಿದೆ.

Udupi: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಶಸ್ತಾಸ್ತ್ರಗಳ ಠೇವಣಿಗೆ ಜಿಲ್ಲಾಧಿಕಾರಿ ಸೂಚನೆ

 ಚುನಾವಣಾ ಘೋಷಿತ ಯಾವುದೇ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ,ಬಂದೂಕು ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ವಿಧಾನಸಭಾ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಗಳು ಮುಕಾಯಗೊಳ್ಳುವವರೆಗೆ ಜಾರಿಯಲ್ಲಿರುತ್ತವೆ 

ಗನ್ ಪಿಸ್ತೂಲ್ ಇಟ್ಟುಕೊಳ್ಳಲು ವಿನಾಯಿತಿ:

42 ಜನರಿಂದ ಗನ್ ಪಿಸ್ತೂಲ್ ಬಂದೂಕು ಇಟ್ಟುಕೊಳ್ಳಲು ವಿನಾಯತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್‌ಗೆ ಅರ್ಜಿ. ರಾಜಕಾರಣಿಗಳು, ಬ್ಯಾಂಕ್ ಮ್ಯಾನೇಜರ್, ಉದ್ಯಮಿಗಳಿಂದ ಮನವಿ. ಆತ್ಮ ರಕ್ಷಣೆ ಹಾಗೂ ವ್ಯಾಪಾರ ವಹಿವಾಟು ದೃಷ್ಟಿಯಿಂದ ಮನವಿ.