ರಾತ್ರಿ ಪಾಳಿ ಸೆಕ್ಯೂರಿಟಿ ಈಗ ಇನ್ಫೋಸಿಸ್ ಎಂಜಿನಿಯರ್‌!

ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. 

Karkala Security guard Is Now Infosys Engineer

ಕಾರ್ಕಳ [ಸೆ.02]: ರಾತ್ರಿ ಪಾಳಿಯಲ್ಲಿ ಕಾವಲುಗಾರನಾಗಿ ದುಡಿಯುತ್ತಿದ್ದ ವಿದ್ಯಾರ್ಥಿ ಈಗ ಎಂಜಿನಿಯರ್‌!

ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್‌. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಬಹುಪಾಲು ಜನರ ಕಣ್ಣಿಗೆ ಬಿದ್ದಿರಲಿಲ್ಲ. ಇತ್ತೀಚೆಗೆ ಈತ ಎಂಜಿನಿಯರ್‌ ಪದವಿ ಪೂರ್ತಿಗೊಳಿಸಿದ್ದಾರೆ. ಕ್ಯಾಂಪಸ್‌ ಇಂಟರ್‌ವ್ಯೂನಲ್ಲಿ ಪ್ರತಿಷ್ಠಿತ ಇಸ್ಫೋಸಿಸ್‌ ಸಂಸ್ಥೆಯಲ್ಲಿ ಉನ್ನತ ಹುದ್ದೆಯೊಂದಕ್ಕೆ ಆಯ್ಕೆಯಾಗಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದನ್ನು ತಿಳಿದ ಪ್ರಕೃತಿ ವಿದ್ಯಾಸಂಸ್ಥೆಯು, ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗಿರುವ ಅಂಕಿತ್‌ನ ಸಾಧನೆಯನ್ನು ಗೌರವಿಸುವ ಕಾರ್ಯಕ್ರಮ ಏರ್ಪಡಿಸಿತ್ತು. ಎಲ್ಲ ಸವಲತ್ತುಗಳಿದ್ದು, ವಿದ್ಯಾಭ್ಯಾಸ ಮಾಡದ ವಿದ್ಯಾರ್ಥಿಗಳ ನಡುವೆ ಆತನ ಸಾಧನೆ ಗಮನ ಸೆಳೆದಿದ್ದು, ಅದು ಇತರರಿಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿತ್ತು.

ಸಾಧಕ ಅಂಕಿತ್‌ ಮಾತನಾಡಿ, ತಂದೆ ಎಲ್‌ಐಸಿ ಉದ್ಯೋಗಿ, ಸಹೋದರಿ ಐಬಿಎಂ ಉದ್ಯೋಗಿ. ಆರ್ಥಿಕವಾಗಿ ಬಡತನವಿರಲಿಲ್ಲ. ಆದರೂ ಸಮಯ ವ್ಯರ್ಥ ಮಾಡಬಾರದೆಂಬ ಕಾರಣಕ್ಕೆ ರಾತ್ರಿ ಪಾಳಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡಿದ್ದೇನೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios