ಕಾರ್ಕಳ ಅತ್ಯಾಚಾರ ರಾಜ್ಯವೇ ತಲೆ ತಗ್ಗಿಸುವ ಕೃತ್ಯ: ಶಾಸಕ ವೇದವ್ಯಾಸ್ ಕಾಮತ್
ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಅಲ್ತಾಫ್ ಎಂಬ ದುರುಳ ರೇಪ್ ನಡೆಸಿ ಅಟ್ಟಹಾಸ ಮೆರೆದಿದ್ದು, ಇಂತಹ ವಿಕೃತ ಮನಸ್ಥಿತಿಗೆ ಯಾವುದೇ ಕರುಣೆ ತೋರದೇ ಇಡೀ ದೇಶಕ್ಕೆ ಮಾದರಿಯಾಗುವಂತಹ ಗಲ್ಲುಶಿಕ್ಷೆಯಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.
ಮಂಗಳೂರು (ಆ.25): ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಅಲ್ತಾಫ್ ಎಂಬ ದುರುಳ ರೇಪ್ ನಡೆಸಿ ಅಟ್ಟಹಾಸ ಮೆರೆದಿದ್ದು, ಇಂತಹ ವಿಕೃತ ಮನಸ್ಥಿತಿಗೆ ಯಾವುದೇ ಕರುಣೆ ತೋರದೇ ಇಡೀ ದೇಶಕ್ಕೆ ಮಾದರಿಯಾಗುವಂತಹ ಗಲ್ಲುಶಿಕ್ಷೆಯಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು. ಇಡೀ ರಾಜ್ಯವೇ ತಲೆತಗ್ಗಿಸುವಂತಹ ಘಟನೆ ಕಾರ್ಕಳದಲ್ಲಿ ನಡೆದಿದ್ದು ಕರ್ನಾಟಕದಲ್ಲೀಗ ಭ್ರಷ್ಟಾಚಾರ, ಕೊಲೆ, ದರೋಡೆ, ಬಿಟ್ಟರೆ ಅತ್ಯಾಚಾರಗಳೇ ದೈನಂದಿನ ಚಟುವಟಿಕೆಯಾಗಿದೆ. ಅದರಲ್ಲೂ ಹಿಂದೂ ಸಮಾಜವೇ ಇಲ್ಲಿ ಹೆಚ್ಚಿನ ಬಲಿಪಶುವಾಗುತ್ತಿರುವುದು ದುರಂತ.
ಸ್ವತಃ ರಾಜ್ಯ ಸರ್ಕಾರವೇ ಓಲೈಕೆ ರಾಜಕಾರಣಕ್ಕಾಗಿ ಬೆನ್ನಿಗೆ ನಿಂತು ಅಮಾಯಕ ಬ್ರದರ್‌ಗಳು ಎನ್ನುತ್ತಿದ್ದರೆ ಇನ್ನೇನಾಗುತ್ತದೆ? ಕರಾವಳಿಯಲ್ಲಿ ಈಗಾಗಲೇ ವ್ಯವಸ್ಥಿತ ಡ್ರಗ್ಸ್ ಜಾಲ ಹೆಚ್ಚುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರವನ್ನು ನಂಬಿ ಕೂರದೇ ಸ್ವತಃ ಪ್ರತಿಯೊಬ್ಬ ಮನೆಯವರೂ ಜಾಗೃತರಾಗಿರಬೇಕು. ಪೊಲೀಸ್ ಇಲಾಖೆ ಈ ಜಾಲದ ಹೆಡೆಮುರಿ ಕಟ್ಟುವ ಮೂಲಕ ಮುಂದಾಗಲಿರುವ ಅನಾಹುತವನ್ನು ತಪ್ಪಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಸಿಎಂ ರಾಜಿನಾಮೆಗೆ ಬಿಜೆಪಿ ಶಾಸಕರಿಬ್ಬರ ಒತ್ತಾಯ: ಮೈಸೂರಿನ ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಶಾಸಕರಿಬ್ಬರು ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮತ್ತು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮೈಸೂರು ಮೂಡಾ, ವಾಲ್ಮೀಕಿ ಹಗರಣ ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿದೆ. ಅದಕ್ಕಾಗಿ ಸಿಎಂ ರಾಜಿನಾಮೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೋರಾಟ ಹಮ್ಮಿಕೊಂಡಿತ್ತು.
ತಂದೆ ಕನಸಿನಂತೆ ಸಿಇಟಿ, ನೀಟ್ ತರಬೇತಿ ಕೇಂದ್ರ ಪ್ರಾರಂಭಿಸಿದೆ: ಶಾಸಕ ದರ್ಶನ್ ಧ್ರುವನಾರಾಯಣ್
ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜಿನಾಮೆ ನೀಡಿ ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಆರೋಪ ಸಾಬೀತಾದ ಬಳಿಕ ರಾಜಿನಾಮೆ ನೀಡಿದರೆ, ಇರುವ ಸ್ವಲ್ಪ ಗೌರವವನ್ನೂ ಅವರು ಕಳೆದುಕೊಳ್ಳಬೇಕಾಗುತ್ತದೆ ಎಂದರು. ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಭ್ರಷ್ಟಾಚಾರ ಇದೆ. ಕಾಂಗ್ರೆಸ್ ನಾಯಕರಾದ ಸುರ್ಜೇವಾಲಾ, ವೇಣುಗೋಪಾಲ್ ಕೂಡ ಸಿಎಂ ಜೊತೆ ನಿಲ್ಲುವಂತೆ ರಾಜ್ಯ ಕಾಂಗ್ರೆಸಿಗರಿಗೆ ಸೂಚನೆ ನೀಡಿದ್ದಾರೆ. ಇದು ಕಾಂಗ್ರೆಸ್ ಭ್ರಷ್ಟಾಚಾರವನ್ನು ಪೋಷಿಸುತ್ತಿರುವುದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸುವುದಾಗಿ ಅವರು ಹೇಳಿದರು.