Ramanagara: ಕರ್ ಸಿರಿ ಹೆಸರಿನಲ್ಲಿ ಮಾವು ಮಾರಾಟ ಮೇಳ ಆರಂಭ!

ಹಣ್ಣಿನ ರಾಜ ಮಾವು ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ರೇಷ್ಮೆಗೆ ಹೆಸರಾಗಿದ್ದ ರಾಮನಗರದಲ್ಲಿ ಈಗ ಮಾವಿನ ಬೆಳೆಯನ್ನ ಬೆಳೆಯುವವರು ಹೆಚ್ಚಾಗಿದ್ದಾರೆ. ಇಂತಹ ರೈತರಿಗೆ ಅನುಕೂಲ ಮಾಡಿಕೊಡಲು ಇಲಾಖೆ ಮುಂದಾಗಿದೆ.

Kar Siri Mango Fair Starts in Ramanagara gvd

ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಮೇ.13): ಹಣ್ಣಿನ ರಾಜ ಮಾವು (Mango) ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ರೇಷ್ಮೆಗೆ ಹೆಸರಾಗಿದ್ದ ರಾಮನಗರದಲ್ಲಿ (Ramanagara) ಈಗ ಮಾವಿನ ಬೆಳೆಯನ್ನ ಬೆಳೆಯುವವರು ಹೆಚ್ಚಾಗಿದ್ದಾರೆ. ಇಂತಹ ರೈತರಿಗೆ ಅನುಕೂಲ ಮಾಡಿಕೊಡಲು ಇಲಾಖೆ ಮುಂದಾಗಿದೆ. ಕರ್ ಸಿರಿ (Kar Siri) ಹೆಸರಿನಲ್ಲಿ ಮಾವು ಮಾರಾಟ ಮೇಳವನ್ನ (Mango Fair) ಆಯೋಜಿಸಿ ರೈತರಿಗೆ (Farmers) ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತು ಒಂದು ವರದಿ.

ಹೌದು! ಪ್ರತಿವರ್ಷ ರಾಮನಗರದಲ್ಲಿ ಮಾವು ಮೇಳವನ್ನ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಕೋವಿಡ್‌ನಿಂದ (Covid19) 2 ವರ್ಷ ಮಾವು ಮೇಳವನ್ನ ಆಯೋಜನೆ ಮಾಡಿರಲಿಲ್ಲ. ಹಾಗಾಗಿ ಈ ವರ್ಷ ಬೆಂಗಳೂರು - ಮೈಸೂರು ಹೆದ್ದಾರಿಯ ಶ್ರೀ ಕ್ಷೇತ್ರ ಕೆಂಗಲ್ ಬಳಿ ಕರ್ ಸಿರಿ ಹೆಸರಿನಲ್ಲಿ ತೋಟಗಾರಿಕೆ ಇಲಾಖೆ ಮಾವು ಮೇಳವನ್ನ ಆಯೋಜಿಸಿದೆ. ಭಾನುವಾರದವರೆಗೆ 3 ದಿನಗಳ ಕಾಲ ಮಾವು ಮೇಳ ಇರಲಿದೆ. ಯಾವುದೇ ಕಾರ್ಬೋಹೈಡ್ರೇಟ್ ಬಳಸಿಕೊಳ್ಳದೇ ಸಾವಯುವ ಕೃಷಿಕರೇ ಬೆಳೆದಿರುವ ರುಚಿಕರವಾದ, ಶುಚಿಯಾದ ಸಿಹಿಯಾದ ಮಾವಿನಹಣ್ಣುಗಳನ್ನ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. 

ಎಚ್‌ಡಿಕೆಗೆ ಶಾಕ್ ಕೊಟ್ಟ ಡಿಕೆ ಬ್ರದರ್ಸ್, ಚನ್ನಪಟ್ಟಣದ ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಸೇರ್ಪಡೆ

ಮಾವು ಮೇಳದಲ್ಲಿ ಮಾಲ್ಗೋಬಾ, ಸೆಂದೂರ, ಬಾದಾಮಿ, ರಸಪುರಿ, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವಿನ ಹಣ್ಣುಗಳು ಗ್ರಾಹಕರನ್ನ ಕೈಬೀಸಿ ಕರೆಯುತ್ತಿವೆ. ಅಂದಹಾಗೇ ಮಾವು ಬೆಳೆಯುವುದರಲ್ಲಿ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.  ಇಲ್ಲಿನ ಮಾವಿಗೆ ಬೇಡಿಕೆ ಇದೆ ಪ್ರತಿದಿನ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಜನಸಂದಣಿ ಜಾಸ್ತಿ ಇರುವುದರಿಂದ ಇಲಾಖೆ ಈ ಮಾವು ಮೇಳ ಆಯೋಜಸಿದೆ. ಸುಮಾರು 32 ಸ್ಟಾಲ್‌ಗಳನ್ನ ಹಾಕಲಾಗಿದೆ. ಕಳೆದ ಎರಡು ವರ್ಷದ ಹಿಂದೆ 40 ಟನ್ ಮಾವು ಮಾರಾಟವಾಗಿ 45 ಲಕ್ಷ ವಹಿವಾಟು ನಡೆದಿತ್ತು. 

Ramanagara Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಡಿಕ್ಕಿ: ಉಡುಪಿ‌ಯ ಮೂವರು ಸಾವು

ಬಾದಾಮಿ ಪ್ರತಿ ಕೆಜಿಗೆ 120, ರಸಪುರಿ -90, ಸೆಂದೂರ-60, ಮಲಗೋಬಾ 160, ತೋತಾಪುರಿ- 30 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರು ನಗರಕ್ಕಿಂತ ಕಡಿಮೆ ದರದಲ್ಲಿ ಮಾವಿನ ಹಣ್ಣುಗಳು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಹಕರು ಕೂಡ ಹೆಚ್ಚೆಚ್ಚು ಹಣ್ಣುಗಳನ್ನ ಖರೀದಿ ಮಾಡುತ್ತಿದ್ದಾರೆ. ಒಟ್ಟಾರೆ ಇಂದಿನಿಂದ ಮೇ 15ರವರೆಗೂ ಮಾವು ಮೇಳ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆಯಲಿದೆ. ಮಾವು ಮೇಳದಲ್ಲಿ ಲಕ್ಷಾಂತರ ಗ್ರಾಹಕರು ಭೇಟಿ ನೀಡುವ ಸಾಧ್ಯತೆ ಇದ್ದು, ಕಳೆದ ಬಾರಿಗಿಂತ ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

Latest Videos
Follow Us:
Download App:
  • android
  • ios