ಬೆಳಗಾವಿ (ಏ.01): ಬೆಳಗಾವಿ ಲೋಕಸಭಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರು ನಾಮಪತ್ರ ಸಲ್ಲಿಕೆ ಬಗ್ಗೆ ಮರಾಠಿಯಲ್ಲಿ ವಿಡಿಯೋ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ಇದು ಕನ್ನಡಿಗರ ಆಕೋಶಕ್ಕೆ ಕಾರಣವಾಗಿದೆ. 

ಇದರಿಂದ ಮಂಗಲ ಅಂಗಡಿ ಅವರು ತಾವು ಮಾಡಿದ್ದ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. ಪೋಸ್ಟ್‌ ಮಾಡಿದ್ದ ವಿಡಿಯೋದಲ್ಲಿ ಅಂಗಲ ಅವರು, ಮಾ.30ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಎಲ್ಲ ಕಾರ್ಯಕರ್ತರು ಕೋವಿಡ್‌ ನಿಯಮ ಪಾಲಿಸಿ ಎಂದು ಮರಾಠಿಯಲ್ಲಿ ಮಾತನಾಡಿದ್ದರು. 

ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಎಷ್ಟು ಕೋಟಿ ಒಡತಿ..? ...

ಇದಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕನ್ನಡಿಗರೇ ಎಚ್ಚೆತ್ತುಕೊಳ್ಳಿ ಎಂಬ ಬರಹದಲ್ಲಿ ವಿಡಿಯೋ ಸ್ಟೇಟಸ್‌, ವಾಟ್ಸಾಪ್‌ ಸ್ಟೇಟಸ್‌, ಫೇಸ್‌ಬುಕ್‌ ಪೋಸ್ಟ್‌ ಹಾಕಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತದನಂತರ ಮಂಗಲ ಅವರು ಫೇಸ್‌ಬುಕ್‌ ಪೇಜ್‌ನಲ್ಲಿದ್ದ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.