Asianet Suvarna News Asianet Suvarna News

ಮರಾಠಿಗರಿಗೆ ಒಂದಂಗುಲ ನೆಲ ಬಿಟ್ಟುಕೊಡುವುದಿಲ್ಲ; ಇದು ಕನ್ನಡಿಗರ ಶಪಥ: ಡಾ.ದೊಡ್ಡರಂಗೇಗೌಡ

ಒಂದೆಡೆ ಮರಾಠಿಗರು ಆಕ್ರಮಣ ಮಾಡುತ್ತಿದ್ದಾರೆ ಕನ್ನಡದ ನೆಲವನ್ನು ತಮ್ಮದು ಎಂದು ಹೇಳುತ್ತಿದ್ದಾರೆ. ಇವತ್ತು ನಾವೆಲ್ಲ ಶಪಥ ಮಾಡಬೇಕಿದೆ. ಕನ್ನಡ ನಾಡಿನ ಅಂಗುಲಂಗುಲದ ನೆಲವನ್ನು ಕೂಡ ನಾವು ಮರಾಠಿಗರಿಗೆ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಕಾರ್ಯತಂತ್ರವಾಗಬೇಕು ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಹೇಳಿದರು.

Kannadigas have swear that they will not give up an inch of land to the Maratha says Doddarange Gowda rav
Author
First Published Jan 6, 2023, 10:56 AM IST

ದಾವಣಗೆರೆ (ಜ.6) : ಕನ್ನಡ ಮಧುರ ಹಾಗೂ ಕನ್ನಡ ಮಾನವೀಯ ನೆಲೆಯುಳ್ಳ ಭಾಷೆ. ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರವನ್ನು ಕನ್ನಡದಲ್ಲಿ ಹೇಳಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ತಿಳಿಸಿದರು.

ಹಾವೇರಿ(Haveri)ಯಲ್ಲಿ ಆರಂಭವಾಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahitya sammelana)ದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಹಾವೇರಿಗೆ ಹೋಗುವ ಮಾರ್ಗದಲ್ಲಿ ದಾವಣಗೆರೆಯ ಕುವೆಂಪು ಕನ್ನಡ ಭವನ(Kuvempu kannada Bhavana)ಕ್ಕೆ ಗುರುವಾರ ಆಗಮಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳಿಂದ ಹಾಗೂ ಕನ್ನಡ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈದ್ಯಕೀಯ ಶಾಸ್ತ್ರವನ್ನು ಕನ್ನಡದಲ್ಲಿ ಹೇಳಿದ ಮಹನೀಯರಿದ್ದಾರೆ. ವಿಜ್ಞಾನವನ್ನು ಕನ್ನಡದಲ್ಲಿ ಸುಲಿದ ಬಾಳೆಯ ಹಣ್ಣಿನಂತೆ ಹೇಳುವ ವಿದ್ವಾಂಸರು ನಮ್ಮಲ್ಲಿದ್ದಾರೆ. ಹಿಂಜರಿಕೆ ಬೇಡ ಕನ್ನಡಿಗರು ಯಾವತ್ತೂ ಎದೆ ಸೆಟೆಸಿ ಮುಂದೆ ಹೋಗಬೇಕು ಎಂದು ಹೇಳಿದರು. ಇಂದು ಕನ್ನಡ ನಾಡಿನ ಮೇಲಾಗುವ ದೌರ್ಜನ್ಯಗಳನ್ನು ಹಿಮ್ಮೆಟ್ಟಿಸಲು ಪ್ರತಿಯೊಬ್ಬ ಕನ್ನಡಿಗನಿಗೆ ಈ ಸಾಲುಗಳು ಬಲ ತುಂಬ ಬಲ್ಲವು. ಈಗ ಇಂತಹ ಶಕ್ತಿಯ ಪ್ರದರ್ಶನ ಆಗಬೇಕಿದೆ. ಇಂದು ನನ್ನ ಅಂತರಾಳದ ಮಾತನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದರು.

Haveri : ಸಾಹಿತ್ಯ ಸಮ್ಮೇಳನದಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ ವೈಭವ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ನಾಡಿನ ಹಿರಿಯ ಸಾಹಿತಿಗಳು ಚಿಂತಕರು ಆದ ಡಾ.ದೊಡ್ಡ ರಂಗೇಗೌಡರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಹೆಮ್ಮೆ. ಕನ್ನಡ ನಾಡಿಗೆ ಇವರು ಸಾಹಿತ್ಯದ ಕೃಷಿಯ ಮೂಲಕ ಬಹುದೊಡ್ಡ ಕೊಡುಗೆಯನ್ನ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿ.ರುದ್ರಯ್ಯ, ಮಾಜಿ ಅಧ್ಯಕ್ಷ ಎ.ಆರ್‌. ಉಜ್ಜನಪ್ಪ, ಬಿ ದಿಳ್ಳಪ್ಪ,ರೇವಣಸಿದ್ದಪ್ಪ ಅಂಗಡಿ, ಕೆ.ರಾಘವೇಂದ್ರ ನಾಯರಿ, ಸಿ.ಜಿ.ಜಗದೀಶ್‌ ಕೂಲಂಬಿ, ಜಿಗಳಿ ಪ್ರಕಾಶ್‌, ಬಾಮ ಬಸವರಾಜಯ್ಯ, ಎಚ್‌.ಬಿ.ಮಂಜುನಾಥ್‌, ಕೆ.ಬಿ.ಕೊಟ್ರೇಶ್‌, ಜಿಲ್ಲಾ ಪದಾಧಿಕಾರಿಗಳಾದ ರುದ್ರಾಕ್ಷಿ ಬಾಯಿ,ಬೈರೇಶ್‌, ಮಧುಕುಮಾರ್‌ ಎಲ್‌ಜಿ, ಪತ್ರಕರ್ತ ರವಿ ಬಾಬು, ವಿವೇಕ್‌, ಸಿಂಗಾಪುರದ ಪರಮೇಶ್ವರಪ್ಪ, ಮಾರುತಿ ಸಂತೆಬೆನ್ನೂರು ಹಾಗೂ ಶಾಲಾ ಕಾಲೇಜು ಮಕ್ಕಳು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನ: ಸಾಮರಸ್ಯದ ಭಾವ-ಕನ್ನಡದ ಜೀವ ಸೇರಿ ಇಂದು ಹಲವು ಗೋಷ್ಠಿ

ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು

ಒಂದೆಡೆ ಮರಾಠಿಗರು ಆಕ್ರಮಣ ಮಾಡುತ್ತಿದ್ದಾರೆ ಕನ್ನಡದ ನೆಲವನ್ನು ತಮ್ಮದು ಎಂದು ಹೇಳುತ್ತಿದ್ದಾರೆ. ಇವತ್ತು ನಾವೆಲ್ಲ ಶಪಥ ಮಾಡಬೇಕಿದೆ. ಕನ್ನಡ ನಾಡಿನ ಅಂಗುಲಂಗುಲದ ನೆಲವನ್ನು ಕೂಡ ನಾವು ಮರಾಠಿಗರಿಗೆ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಕಾರ್ಯತಂತ್ರವಾಗಬೇಕು. ಇದಕ್ಕೆ ಬೇಕಾದಷ್ಟುಆಧಾರಗಳಿವೆ. ನೀವೆಲ್ಲ ಮಹಾಜನ್‌ ವರದಿಯನ್ನು ಓದಬೇಕು. ಮಹಾಜನ್‌ ವರದಿ ಹೇಳುವ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು. ಬೆಳಗಾವಿ ಮುಕ್ಕಾಗಬಾರದು ಬೆಳಗಾವಿ ಕನ್ನಡನಾಡಿಗೆ ಬೇಕು. ಬೆಳಗಾವಿ ನಿಜವಾಗಿಯೂ ಕನ್ನಡಿಗರದ್ದೇ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ತಿಳಿಸಿದರು.

Follow Us:
Download App:
  • android
  • ios