ಕಲಬುರಗಿ(ಫೆ.07):  ಇಂದು ಕನ್ನಡ ಆತಂಕದಲ್ಲಿರುವುದು ರಾಜ್ಯ ರಾಜಧಾನಿ ಬೆಂಗಳೂರಲ್ಲೇ ಹೊರತು, ಗಡಿನಾಡಲ್ಲಿ ಅಲ್ಲ. ಕಲಬುರಗಿ ಸಮ್ಮೇಳನಕ್ಕೆ ಸಿಕ್ಕಿರುವ ಜನಸ್ಪಂದನವೇ ಇದಕ್ಕೆ ಸಾಕ್ಷಿ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರ ಪರ ಮಾತನಾಡಿದ ಅವರು, ಗಡಿನಾಡಲ್ಲಿ ಕನ್ನಡ ಸತ್ತು ಹೋಗುತ್ತಿದೆ. ಗಡಿನಾಡಲ್ಲಿ ಕನ್ನಡ ಇಲ್ಲ, ಗಡಿನಾಡಲ್ಲಿ ಮರಾಠಿ, ತೆಲುಗು ಪ್ರಭಾವ ಇದೆ, ಕನ್ನಡ ಆತಂಕದಲ್ಲಿದೆ ಎಂದು ಹೇಳುತ್ತಿರುತ್ತೇವೆ. ಆದರೆ ಇಲ್ಲಿ ಬಂದು ನೋಡಿದರೆ ತಿಳಿಯುತ್ತದೆ. ಕನ್ನಡ ಆತಂಕದಲ್ಲಿರುವುದು ಗಡಿನಾಡಲ್ಲಿ ಅಲ್ಲ, ರಾಜಧಾನಿ ಬೆಂಗಳೂರಲ್ಲಿ ಎಂದು. ಮಹಾನಗರಗಳಿಗೆ ಹೋಲಿಕೆ ಮಾಡಿದಲ್ಲಿ ಇಂತಹ ಪ್ರದೇಶದಲ್ಲಿ ಕನ್ನಡ ಬೆಳೆಯಲು ಇಂದಿಗೂ ಅವಕಾಶಗಳು ವಿಫುಲವಾಗಿವೆ ಎಂದರು. 

ಶಾಸ್ತ್ರೀಯ ಭಾಷೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ: ಶೆಟ್ಟರ್

ಗುಲ್ಬರ್ಗಾ, ಬೀದರ್‌ಗಳನ್ನು ಯಾವಾಗಲೂ ಹಿಂದುಳಿದ ಜಿಲ್ಲೆ ಎಂದು ಹೇಳುತ್ತಿರುತ್ತೇವೆ. ಆದರೆ ಇಂದು ಕನ್ನಡಕ್ಕೆ ಪ್ರೀತಿ ತೋರಿಸುವಲ್ಲಿ, ಕನ್ನಡಕ್ಕೆ ಬಲ ಎಲ್ಲದಕ್ಕಿಂತ ಮುಂದಿರುವ ಜಿಲ್ಲೆ ಕಲಬುರಗಿ ಎಂದು ಇದೀಗ ಸಾಬೀತಾಗಿದೆ ಎಂದು ಹೇಳಿದರು.

ರವಿ ಹೆಗಡೆಗೆ ಸನ್ಮಾನ, ಹಾವೇರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ

ಕಲಬುರಗಿ, ಬೀದರ್, ಯಾದಗರಿ ಸೇರಿದಂತೆ ಕಲ್ಯಾಣ ಕರ್ನಾಟಕದಿಂದ ಕನ್ನಡ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದೆ. ಇಂದು ಕಲಬುರಗಿಯಲ್ಲಿ ಎಲ್ಲೆಡೆ ಟ್ರಾಫಿಕ್ ಜಾಮ್ ಎಂಬ ಮಾತು ಕೇಳಿ ಬರುತ್ತಿದೆ. ಒಂದು ಒಳ್ಳೆಯ ಕಾರ್ಯಕ್ಕಾಗಿ ಟ್ರಾಫಿಕ್ ಜಾಂ ಆಗುವುದಿದ್ದರೆ ಇನ್ನೂ ಇಂತಹ ಹತ್ತು ಟ್ರಾಫಿಕ್ ಜಾಮ್ ಆಗಲಿ. ಇಲ್ಲಿನ ಕಲಬುರಗಿ ಸಾಹಿತ್ಯ ಸಮ್ಮೇಳನ ಮುಂದಿನ ಎಲ್ಲ ಕನ್ನಡ ಸಮ್ಮೇಳನಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು. 

ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದ ವಿವಿಧ ಕ್ಷೇತ್ರಗಳ ಗಣ್ಯರು: 

ರವಿ ಹೆಗಡೆ, ಡಾ.ತೇಜಸ್ವಿನಿ ಅನಂತಕುಮಾರ್, ಅಭಿನಯ, ಪ್ರದೀಪ ಬಹರೇನ್, ಶ್ರೀನಿವಾಸ ಶರ್ಮ, ವಿಠ್ಠಲ ದೊಡ್ಮನಿ, ಎಲ್.ಮುತ್ತುರಾಜ್, ಎಂ.ಎಸ್.ನರಸಿಂಹಮೂರ್ತಿ, ಎಸ್.ಜಿ.ಭಾರತಿ, ಮೋಹನ ಸೀತನೂರ್, ಅಬೂಬಕ್ಕರ್ ಮಂಟಗೋಳಿ, ಕೆ.ಸಿ.ಜಗನ್ನಾಥ್, ಎಸ್.ಎನ್.ಹೆಗಡೆ, ಸಂಜಯ ಅಡಿಗ, ಪಿ.ವೈ.ರಾಜೇಂದ್ರ ಕುಮಾರ್, ಚನ್ನಬಸಪ್ಪ ಬಸಲಿಂಗಪ್ಪ ನಾವದಗಿ, ಚಿದಾನಂದ ಸೊಲ್ಲಾಪುರ, ಪಿ.ಶಿವರಾಜ, ಕಿರಣ ದೇಸಾಯಿ, ಶಿವಕುಮಾರ್ ದೀನೆ, ಡಿ.ಜಿ. ಬಡಿಗೇರ್, ಹೇಮಾವತಿ ಸೊನಳ್ಳಿ, ಕೆ.ಎಲ್.ಶ್ರೀನಿವಾಸ, ಡಾ.ಎಂ.ರಾಘು, ಡಾ. ಶಾಮನೂರ ಶಿವಶಂಕರಪ್ಪ, ಪ್ರದೀಪ್ ಶೆಟ್ಟಿ, ಡಾ.ಚನ್ನವೀರ ಶಿವಚಾರ್ಯರು, ಶಿವಾನಂದ ತಗಡೂರ, ಎಸ್ಕೆ ಕಾಂತಾ, ರಾಘವೇಂದ್ರ ಪಾಟೀಲ್, ಬಾಬೂರಾವ ದೇಶಮಾನೆ, ಎಂ.ಕೆ. ಜೈನಾಪೂರ, ಕೂಡ್ಲಿ ಗುರುರಾಜ್, ಎಸ್.ಕೆ.ಶೇಷಚಂದ್ರಿಕಾ, ಶಂಕ್ರಯ್ಯ ಉಕ್ಕಲಿ, ಶಶಿಧರ ಹೆಬ್ಬಾಳ, ಕೆ.ಪಿ.ಪುತ್ತೂರಾಯ್, ಡಾ.ಟಿ.ಸಿ ಪೂರ್ಣಿಮಾ, ರಾಜಯೋಗಿನಿ ಬಿ.ಕೆ.ವಿಜಯಾ, ಕೆ.ಎಲ್.ನಟರಾಜ್, ಬಿ.ಗಂಗಾಧರ್, ಎನ್.ಜಿ.ರಾಮಾಪೂರ, ಎಸ್.ಪದ್ಮನಾಭ್ ಭಟ್, ಸಂಗಣ್ಣ ಹೋತಪೇಟೆ, ಬಿ.ಎಂ.ರಘು, ಟಿ.ಆರ್.ಮುನಿನಾರಾಯಣ, ಗುರುರಾಜ ಕುಲಕರ್ಣಿ, ಪ್ರೊ.ಸಿ.ಉಪೇಂದ್ರ ಸೋಮಯಾಜಿ.