Asianet Suvarna News Asianet Suvarna News

ಶಾಸ್ತ್ರೀಯ ಭಾಷೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ: ಶೆಟ್ಟರ್

ಕನ್ನ ಡ ಉಳಿಸಿ ಬೆಳೆಸುವ ಬಗೆ ್ಗ ಹಿರಿಯ ಸಂಶೋಧಕರಿಂದ ವಿಶೇಷ ಉಪನ್ಯಾಸ | ಭಾಷೆಯ ಸಂಶೋಧನೆ ಆಗದೇ ಭಾಷಾ ಅಭಿವ್ಯಕ್ತಿ ಅಸಾಧ್ಯ|ಕನ್ನಡಕ್ಕೆ ಅಳಿವಿಲ್ಲ, ಹಾಗಂತ ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು | ಕನ್ನಡವನ್ನು ಪ್ರೀತಿಯಿಂದ ಓದುವ ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಿ|

Historian Shettar Talks Over Classical language
Author
Bengaluru, First Published Feb 7, 2020, 9:44 AM IST

ಕಲಬುರಗಿ(ಫೆ.07): ಹತ್ತು ವರುಷಗಳ ಸತತ ಹೋರಾಟದ ನಂತರ ಕನ್ನಡಕ್ಕೆ ದೊರೆತ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಅಸಡ್ಡೆಯಿಂದ ನೋಡಲಾಗುತ್ತಿದೆ ಎಂದು ಖ್ಯಾತ ಇತಿಹಾಸಜ್ಞ ಷ. ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಪುರಾತನ ಭಾಷೆಯಾದ ಕನ್ನಡಕ್ಕೆ ಅನೇಕರ ಹೋರಾಟದ ಫಲವಾಗಿ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಿತು. ಅದಾಗಿ ಆರು ವರ್ಷಗಳಾದರೂ ಭಾಷಾ ಅಧ್ಯಯನಕ್ಕೆ ಬೇಕಾದ ಸಂಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಿಲ್ಲ. ಕೈಗೆ ಮಾಣಿಕ್ಕ ಕೊಟ್ಟರೂ ಮಣ್ಣಿಗೆ ಹಾಕುವ ಪ್ರವೃತ್ತಿ ನಮ್ಮದು. ಶಾಸ್ತ್ರೀಯ ಭಾಷಾ ಸಂಸ್ಥೆಯಿಲ್ಲದೇ ಇರುವುದರಿಂದ ಅಧ್ಯಯನಕ್ಕೆ ತೊಂದರೆಯಾಗಿದೆ. ಭಾಷೆಯ ಸಂಶೋಧನೆ ಆಗದೇ ಭಾಷಾ ಅಭಿವ್ಯಕ್ತಿ ಅಸಾಧ್ಯ ಎಂದು ಶೆಟ್ಟರ್ ಸಿಡಿಮಿಡಿಗೊಂಡರು. 

ನುಡಿ ಜಾತ್ರೆಯಲ್ಲಿ ಸಂಘ ಪರಿವಾರಕ್ಕೆ ನೀಲಾ ಚಾಟಿ: ಸರ್ಕಾರದ ಪರ ಗುರಾಣಿ

ಕನ್ನಡಕ್ಕೆ ಅಳಿವಿಲ್ಲ. ಹಾಗಂತ ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು. ಆಪತ್ತು ಒದಗಿಬರುವುದಕ್ಕೆ ಬಿಡಬಾರದು. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕನ್ನಡವನ್ನು ಎಷ್ಟು ಸಾಧ್ಯವೋ ಅಷ್ಟು ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ಸಂಶೋಧಕ ಷ.ಶೆಟ್ಟರ್ ಅಭಿಪ್ರಾಯಪಟ್ಟರು. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಕನ್ನಡ ಉಳಿಸಿ ಬೆಳೆಸುವ ಬಗೆ’ ವಿಶೇಷ ಉಪನ್ಯಾಸ ಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು. ಕನ್ನಡವನ್ನು ಪ್ರೀತಿಯಿಂದ ಓದುವ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡುವುದು, ಕನ್ನಡವನ್ನು ಅಕ್ಕರೆಯಿಂದ ಬೋಧಿಸುವ ಅಧ್ಯಾಪಕರಿಗೆ ಹೆಚ್ಚಿನ ಅನುಕೂಲಗಳನ್ನು ನೀಡುವುದನ್ನು ಮಾಡಬೇಕು. ಆಗ ಕನ್ನಡದ ಅಭಿವೃದ್ಧಿ ಸಾಧ್ಯ ಎಂದು ಶೆಟ್ಟರ್ ಹೇಳಿದರು.

ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

ಮಕ್ಕಳು ಕನ್ನಡ ಕಲಿಯಬೇಕು ಎಂದು ಒತ್ತಾಯಿಸುವುದರ ಜೊತೆಗೇ ಅಧ್ಯಾಪಕರೂ ಬೋಧಿಸಲಿಕ್ಕೆ ಬೇಕಾದ ಅಧ್ಯಯನದಲ್ಲಿ ನಿರತರಾಗಬೇಕು. ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳಬೇಕು. ಒಂದು ಕಾಲದಲ್ಲಿ ಮೇಷ್ಟರ ಬಗ್ಗೆ ಮಕ್ಕಳಿಗೆ ಭಕ್ತಿಭಾವ ಇರುತ್ತಿತ್ತು. ನಾವೆಲ್ಲ ಕನ್ನಡದಲ್ಲೇ ಕಲಿತು ವಿಶ್ವಮಟ್ಟದಲ್ಲಿ ಅಲ್ಪಸಾಧನೆ ಮಾಡಿದ್ದರೆ ಅದಕ್ಕೆ ಕನ್ನಡದ ಮೇಲಿನ ಪ್ರೀತಿ ಅಭಿಮಾನಗಳೇ ಕಾರಣ. ಅಭಿಮಾನ ಯಾವತ್ತೂ ಆರಾಧನೆ ಆಗಬಾರದು ಎಂದು ಶೆಟ್ಟರ್ ಮನವಿ ಮಾಡಿಕೊಂಡರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿದ್ಯಾರ್ಥಿಗಳ ಗುಣಮಟ್ಟ ಕಡಿಮೆ ಆಗುತ್ತಿದೆ. ಅಧ್ಯಾಪಕರ ಗುಣಮಟ್ಟವೂ ಕಡಿಮೆ ಆಗಿದೆ. ಕನ್ನಡದ ಕಲಿಕೆಗೆ ತಾಯಿ-ತಂದೆ, ಗುರು, ಸ್ನೇಹಬಳಗ-ಹೀಗೆ ಮೂರು ಕನ್ನಡ ಕೇಂದ್ರಗಳಿವೆ. ಕೆಲವರು ಮನೆಯಲ್ಲಿ ಕನ್ನಡ ಮಾತಾಡುತ್ತಾರೆ, ಬೀದಿಯಲ್ಲಿ ಇಂಗ್ಲಿಷ್ ಮಾತಾಡುತ್ತಾರೆ. ಅದು ಅವರ ಕೀಳರಿಮೆ ತೋರಿಸುತ್ತದೆ ಎಂದು ಶೆಟ್ಟರ್ ವಿಷಾದಿಸಿದರು. ಇಂಗ್ಲಿಷನ್ನು ಜೀರ್ಣಿಸಿಕೊಂಡು ಕನ್ನಡ ಕಲಿಯಬೇಕು. ಇಂಗ್ಲಿಷನ್ನು ಚೆನ್ನಾಗಿ ಬಲ್ಲವನು ಕನ್ನಡವನ್ನೂ ಚೆನ್ನಾಗಿ ಕಲಿಯುತ್ತಾನೆ ಎಂದು ಅರ್ಥ. ನಮ್ಮ ಬಹುತೇಕ ಲೇಖಕರು, ಕವಿಗಳು ಇಂಗ್ಲಿಷ್ ಅಧ್ಯಾಪಕರು. ಆದರೆ, ಕನ್ನಡದಲ್ಲೇ ಬರೆದರು ಎಂದು ಶೆಟ್ಟರ್ ಹೇಳಿದರು.

Follow Us:
Download App:
  • android
  • ios