ಮಂಡ್ಯ (ಸೆ.14) : ಕೋವಿಡ್‌ 19ನಿಂದ ಕೆ.ಆರ್‌.ಪೇಟೆ ತಾಲೂಕಿನ ಕನ್ನಡಪ್ರಭ ಪತ್ರಿಕೆ ವರದಿಗಾರ ಸಿಂ.ಕಾ.ಸುರೇಶ್‌(45) ಶನಿವಾರ ರಾತ್ರಿ ನಿಧನರಾಗಿದ್ದಾರೆ. 

ಮೃತರಿಗೆ ಪತ್ನಿ ಉಮಾ, ಪುತ್ರ ಸುಹಾಸ್‌ ಇದ್ದಾರೆ. ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್‌ರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. 

ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಸಿಂಗನಹಳ್ಳಿಯಲ್ಲಿ ಕೋವಿಡ್‌ ನಿಯಮದಂತೆ ಪಿಎಫ್‌ಐ ಸ್ವಯಂ ಸೇವಕರು ನೆರವೇರಿಸಿದರು.

ಕರ್ನಾಟಕದಲ್ಲಿ ನಿಲ್ಲದ ಕೊರೋನಾ ರಣಕೇಕೆ: ಇಲ್ಲಿದೆ ಭಾನುವಾರದ ಅಂಕಿ-ಸಂಖ್ಯೆ ...

 ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ. ದಿನದಿನವೂ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಎರುತ್ತಿದೆ. 

ರಾಜ್ದಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಕೊರೋನಾ ಪ್ರಕರಣಗಳಿಂದ ಸಾವಿಗೀಡಾದವರ ಸಮಖ್ಯೆಯೂ ಇದೀಗ ಸಾವಿರ ಸಾವಿರ ವರದಿಯಾಗುತ್ತಿದೆ. ಈ ನನಿಟ್ಟಿನಲ್ಲಿ ಜನರು ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೆಐಗೊಂಡು ಆರೋಗ್ಯದ ಬಗ್ಗೆ ಸಂಪೂರ್ಣ ನಿಗಾ ವಹಿಸುವ ಅಗತ್ಯವಿದೆ.