ಬೆಂಗಳೂರು(ಜೂ. 18)   ಹಿರಿಯ  ಪತ್ರಕರ್ತರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.  ದಿನಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌರಿಪುರ ಚಂದ್ರು ನಿಧನರಾಗಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತ ಕಾಡುವುದು ಹೇಗೆ? 

54 ವರ್ಷದ ಹಿರಿಯ ಪತ್ರಕರ್ತರಿಗೆ ಹೃದಯಾಘಾತವಾಗಿದೆ. ಬೆಂಗಳೂರಿನ ವಿದ್ಯಾಪೀಠ ಬಳಿ ವಾಸವಿದ್ದ ಪತ್ರಕರ್ತ ಜ್ವರದಿಂದ ಬಳಲುತ್ತಿದ್ದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗೌರಿಪುರ ಚಂದ್ರು ಇಂಜಿನಿಯರಿಂಗ್ ಮಾಡಿದ್ದರೂ ಪತ್ರಕರ್ತರಾಗಿ ಜೀವನ ಕಂಡುಕೊಂಡಿದ್ದರು.

ಪತ್ರಕರ್ತ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.