ಸಾಹಿತ್ಯದ ಓಟಕ್ಕೆ ಕೊನೆ ಇಲ್ಲ..  ಹೊಸ ಹೊಸ ಪುಸ್ತಕಗಳು ಕನ್ನಡ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಲೇ ಇವೆ. ಕನ್ನಡದ ಪುಸ್ತಕ ಪ್ರಪಂಚಕ್ಕೆ 3 ಪುಸ್ತಕಗಳು ಸೇರ್ಪಡೆಯಾಗುತ್ತಿವೆ. ಪುಸ್ತಕ ಬಿಡುಗಡೆಗೆ ಆಹ್ವಾನವೂ  ಇಲ್ಲಿದೆ.

ಬೆಂಗಳೂರು[ನ.29]  ‘ತಡವಾಗಿ ಕರೆಯುತ್ತಿರುವುದಕ್ಕೆ ಕ್ಷಮೆಯಿರಲಿ. ಬದಲಾದ ದಿನಾಂಕ ಹೊಂದಿಸುವುದು ಕೊಂಚ ಕಷ್ಟವೇ ಆಯಿತು. ಪುಸ್ತಕಗಳ ಬಿಡುಗಡೆಗೆ ಅರ್ಧ ಗಂಟೆ ಮೊದಲೇ ಬಂದರೆ ನಾವೆಲ್ಲ ಜೊತೆಗೆ ಬಿಸಿಬಿಸಿ ಕಾಫಿ ಕುಡಿಯಬಹುದು, ಶಾವಿಗೆ ಬಾತ್ ತಿನ್ನಬಹುದು. ಬೋಂಡವಂತೂ ಈ ಸೀಸನ್ನಿಗೆ ಬೇಕೇ ಬೇಕು. ಸಕ್ಕರೆ ಗರಿಗರಿಯಾಗಿ ಬೆರತ ಕೇಸರೀಬಾತ್ ಮಾಡಿಸುತ್ತೇನೆ ಅಂತ ಅಂಕಿತ ಪುಸ್ತದ ಪ್ರಕಾಶ್ ಮಾತು ಕೊಟ್ಟಿದ್ದಾರೆ’

’ಶನಿವಾರವೆಂದರೆ ಭಾನುವಾರದ ಮುನ್ನುಡಿ, ಶುಕ್ರವಾರದ ಬೆನ್ನುಡಿ. ಒಂಚೂರು ಮಾತು, ಒಂದಷ್ಟು ನಗು, ಸಚಿನ್ ತೀರ್ಥಹಳ್ಳಿ, ಶರತ್ ಭಟ್ ಸೇರಾಜೆ, ಎಂಬ ಇಬ್ಬರು ಅಖಂಡ ಬ್ರಹ್ಮಚಾರಿಗಳ ಸಾಂಗತ್ಯ, ಹರೀಶ್ ಕೇರಾ, ವಿಕಾಸ್ ನೇಗಿಲೋಣಿ ಎಂಬೀರ್ವ ಕನಸುಗಾರರ ಕಥಾಸ್ವಾರಸ್ಯ ಮತ್ತು ಆನ್ ದಿ ಟಾಪ್ ಆಫ್ ಇಟ್ ಕೆಜಿಎಫ್ ಸಿನಿಮಾದ ಮೂಲಕ ಇಡೀ ಇಂಡಿಯಾವನ್ನೇ ಗೆಲ್ಲಲು ಹೊರಟಿರುವ ನಮ್ಮ ಪ್ರೀತಿಯ ಯಶ್ ಜೊತೆ ಮಾತುಕತೆ’ 

ದಕ್ಷಿಣ ಏಷ್ಯಾದಲ್ಲೆಲ್ಲ ಮೊಳಗಿದ ಕನ್ನಡದ ಕಾಯ್ಕಿಣಿ ಹೆಸರು

ಹೌದು ಈ ಸಾಲುಗಳನ್ನು ಲೇಖಕ ಜೋಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂಕಿತ ಪುಸ್ತಕ ಪ್ರಕಾಶನ 3 ಪುಸ್ತಕಗಳನ್ನು ಹೊರತರುತ್ತಿದೆ. ಶನಿವಾರ ಅಂದರೆ ಡಿಸೆಂಬರ್ 1 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಿಕ್ಕಿಯಾಗಿದೆ.

ಬಸವನಗುಡಿ ಬಿಪಿ ವಾಡಿಯಾ ರಸ್ತೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್ ಸಭಾಂಗಣದಲ್ಲಿ ಸಾಹಿತ್ಯ ಲೋಕ ಸೃಷ್ಟಿಯಾಗಲಿದೆ. ರಾಕಿಂಗ್ ಸ್ಟಾರ್ ಯಶ್ ಸಹ ಕಾರ್ಯಕ್ರಮದಲ್ಲಿ ಎಲ್ಲರ ಜತೆಗೆ ಇರಲಿದ್ದಾರೆ.

ಬಿಡುಗಡೆಯಾಗಲಿರುವ ಪುಸ್ತಕಗಳು

1. ನವಿಲು ಕೊಂದ ಹುಡುಗ-ಸಚಿನ್ ತೀರ್ಥಹಳ್ಳಿ

2. ಬಾಗಿಲು ತೆರೆಯೇ ಸೇಸಮ್ಮ-ಶರತ್ ಭಟ್ ಸೇರಾಜೆ

3. ಸಲಾಂ ಬೆಂಗಳೂರು-ಜೋಗಿ