ಮಂಡ್ಯ(ಮಾ.04): ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಪ್ತನ ಕುಟುಂಬಕ್ಕೆ ನೋಟಿಸ್ ನೀಡಲಾಗಿದೆ. ನಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಕ್ಕೆ ನೋಟಿಸ್ ಕಳುಹಿಸಲಾಗಿದೆ. ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಕುಟುಂಬದವರಿಗೆ ನೋಟೀಸ್ ಕಳುಹಿಸಲಾಗಿದೆ.

"

ನಾಲೆ ಜಾಗ ಒತ್ತುವರಿ ಕಾರಣಕ್ಕೆ ನೀರಾವರಿ ಇಲಾಖೆಯಿಂದ ನೋಟೀಸ್ ಕಳುಹಿಸಲಾಗಿದ್ದು, ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯ ಸರ್ವೇ ನಂ 129, 130 ಸೇರಿದಂತೆ ಬೂದನೂರು, ಗುತ್ತಲು ಗ್ರಾಮದಲ್ಲಿ ನಾಲೆ ಜಾಗ ಒತ್ತುವರಿ ಮಾಡಿಕೊಂಡಿರೋ ಕಾರಣಕ್ಕೆ ನೋಟೀಸ್ ನೀಡಲಾಗಿದೆ.

ಕೋಣ ಬಲಿ ತಡೆಯಲು ದೇವಸ್ಥಾನದಲ್ಲಿ ಕಾವಲು ಕುಳಿತ ಡಿಸಿ, ಎಸ್ಪಿ

ಆ ಭಾಗದ ವಿಶ್ವೇಶ್ವರಯ್ಯ ನಾಲೆ ಜಾಗದಲ್ಲಿ ನಾಲೆ ಮುಚ್ಚಿ ಜಾಗ ಅತಿಕ್ರಮಣ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಒತ್ತುವರಿ ಜಾಗದಲ್ಲಿ ಹೋಟೆಲ್, ಲೇಔಟ್ ನಿರ್ಮಾಣ ಮಾಡಿರುವ ಆರೋಪ ಸಾಬೀತು ಹಿನ್ನೆಲೆ ನೋಟೀಸ್ ಕಳುಹಿಸಲಾಗಿದೆ.

ನೀರಾವರಿ ಇಲಾಖೆ ತನಿಖೆ ನಡೆಸಿ ವರದಿ ಪಡೆದು ಇದೀಗ ನೋಟೀಸ್ ಜಾರಿ ಮಾಡಿದೆ. ಒತ್ತುವರಿ ಮಾಡಿಕೊಂಡಿರೋ ಜಾಗವನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದು, ಉದ್ಘಾಟನೆ ಹಂತದಲ್ಲಿರೋ ಅಮರಾವತಿ ಹೋಟೇಲ್‌ಗೆ ಕಂಟಕ ಎದುರಾಗಿದೆ. ಉಧ್ಘಾಟನೆಗೂ ಮುನ್ನವೇ ಅಮರಾವತಿ ಹೋಟೇಲ್ ಒಡೆಯುವ ಭೀತಿ ಎದುರಿಸಿದೆ.