Koppal News: ಕನಕಾಚಲಪತಿ ರಥಬೀದಿಗೆ ತಪ್ಪದ ಡಾಂಬರು ತೇಪೆ

ಮಾ. 14ರಂದು ನಡೆಯುವ ಐತಿಹಾಸಿಕ ಕನಕಾಚಲಪತಿ ಜಾತ್ರೆ ನಿಮಿತ್ತ ಪಟ್ಟಣದ ರಾಜಬೀದಿಗೆ ಮತ್ತೆ ಡಾಂಬರ್‌ ತೇಪೆ ಕಾರ್ಯ ನಡೆಯುತ್ತಿದ್ದು, ಸ್ಥಳೀಯರಿಂದ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Kanakachalapati Rathbeedi unmistakable asphalt patch  at koppal rav

ಎಂ. ಪ್ರಹ್ಲಾದ

ಕನಕಗಿರಿ (ಮಾ.4) : ಮಾ. 14ರಂದು ನಡೆಯುವ ಐತಿಹಾಸಿಕ ಕನಕಾಚಲಪತಿ ಜಾತ್ರೆ ನಿಮಿತ್ತ ಪಟ್ಟಣದ ರಾಜಬೀದಿಗೆ ಮತ್ತೆ ಡಾಂಬರ್‌ ತೇಪೆ ಕಾರ್ಯ ನಡೆಯುತ್ತಿದ್ದು, ಸ್ಥಳೀಯರಿಂದ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

2021ರ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಕಲ್ಮಠದಿಂದ ವಾಲ್ಮೀಕಿ ವೃತ್ತದ ವರೆಗೆ ಸಿಸಿ ರಸ್ತೆ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭರವಸೆ ಹುಸಿಯಾಗಿದೆ. ರಾಜಬೀದಿಗೆ ಮತ್ತದೇ ಡಾಂಬರು ತೇಪೆ ಕಾರ್ಯ ಮುಂದುವರಿದಿದೆ. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

Karnataka election 2023: ಪಿಡಿಒ ವರ್ಗಾವಣೆ ವಿಚಾರಕ್ಕೆ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರ

600 ಮೀಟರ್‌ ಉದ್ದ, 60 ಅಡಿ ಅಗಲವನ್ನು ಹೊಂದಿರುವ ರಾಜಬೀದಿಯನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಈ ನಡುವೆ ಕಾಮಗಾರಿಗೆ ಅನುದಾನದ ಕೊರತೆ ಉಂಟಾದ ಪರಿಣಾಮ ಸದ್ಯಕ್ಕೆ ಈ ಯೋಜನೆ ಕೈಬಿಡಲಾಗಿದೆ. ರಾಜಬೀದಿಯನ್ನು ಲೋಕೋಪಯೋಗಿ ಇಲಾಖೆ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿದ್ದು, ವಿಧಾನಸಭೆ ಚುನಾವಣೆ ಆನಂತರ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ, ಕಲ್ಮಠದಿಂದ ವಾಲ್ಮೀಕಿ ವೃತ್ತದ ವರೆಗಿನ ರಸ್ತೆಯನ್ನು ಹಂಪಿ ಮಾದರಿ ಅಭಿವೃದ್ಧಿಪಡಿಸಬೇಕೆಂಬ ನಿಲುವು ಅಧಿಕಾರಿಗಳದ್ದಾಗಿದೆ.

ಮಾ. 14ಕ್ಕೆ ಕನಕಾಚಲಪತಿ ಜಾತ್ರೆ ನಡೆಯುವ ನಿಮಿತ್ತ 600 ಮೀಟರ್‌ ಉದ್ದ ಸಾಗುವ ರಥಬೀದಿಗೆ ಡಾಂಬರು ಹಾಕುವ ಕಾರ್ಯ ನಡೆಸಲಾಗಿದೆ. ಹೀಗಾಗಿ ಈ ಬಾರಿಯೂ ರಥದ ಚಕ್ರ ಹೂತುಹೋಗುವ ಆತಂಕ ಇದ್ದೇಇದೆ. ರಥ ಸರಿಸುಮಾರು ನೂರು ಟನ್‌ ಭಾರವಿದೆ. ಹಿಂದೊಮ್ಮೆ ರಸ್ತೆ ಕುಸಿದು ತೇರಿನ ಗಾಲಿಗಳು ಸಿಲುಕಿ ರಥ ಮುಂದೆ ಎಳೆಯಲು ಸಾಧ್ಯವಾಗದೆ ರಥೋತ್ಸವಕ್ಕೆ ಅರ್ಧಕ್ಕೆ ಮೊಟಕುಗೊಂಡಿತ್ತು. ಮರುದಿನ ಬೆಳಗ್ಗೆ ರಥವನ್ನು ಸ್ವಸ್ಥಾನಕ್ಕೆ ತರಲಾಗಿತ್ತು. ಇಂತಹ ಘಟನೆ ಮರುಕಳಿಸಬಾರದು ಎಂಬುದು ಭಕ್ತರ ಕಳಕಳಿ. ಈ ನಿಟ್ಟಿನಲ್ಲಿ ರಥಬೀದಿಯನ್ನು ಅಭಿವದ್ಧಿಪಡಿಸಬೇಕೆಂಬ ಒತ್ತಾಯ ಭಕ್ತರದ್ದಾಗಿದೆ.

Karnataka election: ದಿಲ್ಲಿ, ಪಂಜಾಬ್‌ ಮಾದರಿ ತಂತ್ರಗಾರಿಕೆಗೆ ಆಪ್‌ ಸಿದ್ಧತೆ

ಪಟ್ಟಣದ ಅಭಿವೃದ್ಧಿಯಲ್ಲಿ ಮುಖಂಡರು ರಾಜಕೀಯ ಮಾಡಬಾರದು. ಇಚ್ಛಾಶಕ್ತಿ ಇದ್ದಾಗ ಮಾತ್ರ ಪಟ್ಟಣ ಅಭಿವೃದ್ಧಿಯಾಗುತ್ತದೆ. ರಾಜಬೀದಿಗೆ ಡಾಂಬರು ತೇಪೆ ಕಾರ್ಯ ಅನಿವಾರ್ಯವಾಗಿದೆ. ಜಾತ್ರಾ ಸಂದರ್ಭದಲ್ಲಿ ಡಾಂಬರು ಹಾಕಿ ಬಿಲ್‌ ಎತ್ತುವಳಿ ಮಾಡುವುದು ಮುಂದುವರಿದಿದೆ. ಈ ವರ್ಷದ ರಥೋತ್ಸವ ಸಲಿಸಾಗಿ ಹೋಗಿ ಬರಲೆಂದು ಕನಕಾಚಲಪತಿಯಲ್ಲಿ ಪ್ರಾರ್ಥಿಸುತ್ತೇನೆ.

ದುರ್ಗಾದಾಸ ಯಾದವ್‌ ಹೋರಾಟಗಾರ

ಪಟ್ಟಣದ ರಥಬೀದಿ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ .2.2 ಕೋಟಿ ಅನುದಾನ ಮಂಜೂರಾಗಿದೆ. ಚುನಾವಣೆ ಆನಂತರ ಕಾಮಗಾರಿ ಆರಂಭಿಸಲಾಗುವುದು. ರಥಬೀದಿ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಜಾತ್ರೆ ನಿಮಿತ್ತ ರಥವು ಬೀದಿಯಲ್ಲಿ ಸಾಗುವುದಕ್ಕೆ ಡಾಂಬರು ತೇಪೆ ಕಾರ್ಯ ನಡೆಸುತ್ತಿದ್ದೇವೆ.

ದತ್ತಾತ್ರೇಯ ಹೆಗಡೆ ಪಪಂ ಮುಖ್ಯಾಧಿಕಾರಿ ಕನಕಗಿರಿ

Latest Videos
Follow Us:
Download App:
  • android
  • ios