Asianet Suvarna News Asianet Suvarna News

ಸಿದ್ದರಾಮಯ್ಯಗಿಲ್ಲ ಆಹ್ವಾನ : ಈಶ್ವರಪ್ಪ-ಎಚ್‌ಡಿಕೆ ಮುಖಾಮುಖಿ

  • ಕನಕ ಭವನ ನಿರ್ಮಾಣದ‌ ಗುದ್ದಲಿ ಪೂಜೆ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರು ಮಾಯ
  •  ಸಿದ್ದರಾಮಯ್ಯ ಹೆಸರು ಮಾಯವಾಗಿದ್ದು ಈ ಸಂಬಂಧ ಕೈ ಮುಖಂಡರಿಂದ ತೀವ್ರ ಅಸಮಾಧಾನ 
Kanaka Bhavan Foundation stone Program no  invitation for Siddaramaiah snr
Author
Bengaluru, First Published Oct 3, 2021, 9:50 AM IST

ಮಂಡ್ಯ (ಅ.03):  ಕನಕ ಭವನ (Kanaka Bhavan) ನಿರ್ಮಾಣದ‌ ಗುದ್ದಲಿ ಪೂಜೆ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ (Siddaramaiah) ಹೆಸರು ಮಾಯವಾಗಿದ್ದು ಈ ಸಂಬಂಧ ಕೈ ಮುಖಂಡರಿಂದ ತೀವ್ರ ಅಸಮಾಧಾನ ಎದುರಾಗಿದೆ. 

ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ಮೊಗನಕೊಪ್ಪದಲ್ಲಿ ಇಂದು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದ್ದು,  ಗುದ್ದಲಿ ಪೂಜೆಗೆ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಭಾಗಿಯಾಗಲಿದ್ದಾರೆ. 

ಸಚಿವ ಕೆಎಸ್ ಈಶ್ವರಪ್ಪ ಹಾಗು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ.   ಆದರೆ ಈ ಕಾರ್ಯಕ್ರಮದ  ಆಹ್ವಾನ ಪತ್ರಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಮಾತ್ರ ಮಾಯವಾಗಿದ್ದು ಕೈ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. 

ಸಿದ್ದು - ಎಚ್‌ಡಿಕೆ ಟಿಕೆಟ್‌ ಫೈಟ್‌ : ಮಾಜಿ ಸಿಎಂಗಳ ಜಟಾಪಟಿ

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.  ಕನಕ ಭವನ ನಿರ್ಮಾಣಕ್ಕೆ ಸಿದ್ದರಾಮಯ್ಯ ಎರಡು ಕೋಟಿ ಅನುಧಾನ ನೀಡಿದ್ದಾರೆ. ಭವನ ನಿರ್ಮಾಣ ಮಾಡಲು ಇದ್ದ ಜಾಗದ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.  ಹೀಗಿದ್ದರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ಯಾಕೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕಿತ್ತು. ಇದು ಅನ್ಯಾಯ ಎಂದು ಕೈ ಮುಖಂಡರು ಹೇಳಿದ್ದಾರೆ.

ಎರಡು ಬಾರಿ ಆಹ್ವಾನ : ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕನಕಭವನ  ನಿರ್ಮಾನ ಶಂಕುಸ್ಥಾಪನೆಗೆ ಎರಡು ಬಾರಿ ಅಹ್ವಾನಿಸಿದ್ದೇನೆ. ಆದರೂ ಅವರು ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂದು ಶಾಸಕ ಡಾ.ಕೆ ಅನ್ನದಾನಿ (Dr.K.Annadani) ತಿಳಿಸಿದರು. 

ಮಳವಳ್ಳಿ ಪಟ್ಟನದ ಪ್ರವಾಸಿ ಮಂದಿರದಲ್ಲಿ ಅ.3 ರಂದು ತಾಲುಕಿನ ಮೂಗನಕೊಪ್ಪಲು ಗ್ರಾಮದಲ್ಲಿ ನಡೆಯಲಿರುವ ಶ್ರೀ ಕನಕ ಸಮುದಾಯ ಭವನ ನಿರ್ಮಾಣದ ಶಂಕು ಸ್ಥಾಪನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಈ ವಿಚಾರ ತಿಳಿಸಿದರು. 

ಕನಕಭವನ ನಿರ್ಮಾನ ಶಂಕು ಸ್ಥಾಪನೆಗೆ  ಬರಬೇಕು ಎಂದು ಎರಡು ಬಾರಿ ಮನವಿ ಮಾಡಿದ್ದೆ. ಅದರೆ ಕೆಲವರು ಸಿದ್ದರಾಮಯ್ಯನವರು ಬಾರದೇ ಹೋದರೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು. 

ತಾಲುಕಿನಲ್ಲಿ ನನ್ನ ಮೇಲೆ ಟಿಕೆ ಮಾಡುತ್ತಿದ್ದಾರೆ. ಯಾವುದೇ ಸಮುದಾಯವನ್ನು ಎತ್ತಿಕಟ್ಟಿ ಕೆಲಸವನ್ನು ಎಂದಿಗೂ ಮಾಡಿಲ್ಲ. ತಾನು ಒಂದು ಸಮಯದಾಯಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲ ಸಮುದಾಯಕ್ಕೆ ಬೇಕಾದ ಮೂಲ ಸೌಲಭ್ ಹಾಗು ಸಮುದಾಯ ಭವನಗಳಿಗೆ ನಿವೇಶನ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು. 

Follow Us:
Download App:
  • android
  • ios