ಕಂಪ್ಲಿ(ಜೂ.10): ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿನ ಕೊರೋನಾ ಫೀವರ್‌ ಕ್ಲಿನಿಕ್‌ನಲ್ಲಿ ಪಟ್ಟಣದ ಪೊಲೀಸ್‌ ಠಾಣೆಯ 40 ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಲಾಯಿತು.

ಥರ್ಮಲ್‌ ರೆಸ್ಪಾನ್ಸರ್‌ ಗನ್‌ ಮೂಲಕ ಪೊಲೀಸ್‌ ಸಿಬ್ಬಂದಿ ಶರೀರ ಉಷ್ಣಾಂಶ ಪರೀಕ್ಷೆ, ನೇಸಲ್‌ ಸ್ವಾ ಬ್‌(ಮೂಗಿನ ದ್ರವ), ಸ್ಕ್ರೀನಿಂಗ್‌ ಮತ್ತು ಹಿಸ್ಟರಿ ಸಂಗ್ರಹಿಸಲಾಯಿತು.

ಬಸ್‌ಗೆ ನೀಡಲು ಹಣವೂ ಇಲ್ಲದೇ 70 ಇಳಿ ವಯಸ್ಸಿನಲ್ಲೂ 133 ಕಿಮೀ ನಡೆದೇ ಹೊರಟ ಅಜ್ಜ!

ಸಿಪಿಐ ಡಿ. ಹುಲುಗಪ್ಪ, ಪಿಎಸ್‌ಐಗಳಾದ ಮೌನೇಶ್‌ ರಾಥೋಡ್‌, ಟಿ.ಎಲ್‌. ಬಸಪ್ಪ ಸೇರಿ 6 ಜನ ಎಎಸ್‌ಐ, ಹದಿನಾಲ್ಕು ಮುಖ್ಯಪೇದೆ, 23 ಪೇದೆಗಳು ಹಾಗೂ ಇಬ್ಬರು ಮಹಿಳಾ ಪೇದೆ ಕೊರೋನಾ ವೈರಸ್‌ ಪರೀಕ್ಷೆಗೆ ಹಾಜರಾಗಿದ್ದರು. ದಂತ ವೈದ್ಯ ಡಾ. ಶ್ರೀನಿವಾಸರಾವ್‌, ಶುಶ್ರೂಷಾ​ಧಿಕಾರಿ ಡಿ. ದೇವಣ್ಣ, ಲ್ಯಾಬ್‌ ಟೆಕ್ನಿಷಿಯನ್‌ ಶೃತಿ ಕೋರಿ, ಸಮಾಲೋಚಕ ಮಂಜುನಾಥ, ಮುಕ್ಕಣ್ಣ ಇದ್ದರು.