ಉಡುಪಿ(ಫೆ.27): ಮೂಡು​ಬಿ​ದಿ​ರೆಯ ಅರಮನೆ ಬಾಗಿಲು ಬಳಿಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಕಂಬಳದ ಚಿನ್ನದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಬುಧವಾರ ಆರ್ಥಿಕ ನೆರವನ್ನು ನೀಡಿದ್ದಾರೆ.

ಶಾಲೆಯ ಮುಖ್ಯಸ್ಥ ಪ್ರಕಾಶ್‌ ಶೆಟ್ಟಿಗಾರ ಅವರು ಮಕ್ಕಳ ಜತೆಗೂಡಿ ಶಾಲೆಯ ವತಿಯಿಂದ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿದ್ದಾರೆ. ನ್ಯೂ ಪಡಿವಾಳ್ಸ್ ಕೋಣಗಳ ಯಜಮಾನ ಹರ್ಷವರ್ಧನ ಪಡಿವಾಳ್‌, ಕಂಬಳ ಓಟಗಾರ ರಾಜೇಶ್‌ ಮಾರ್ನಾಡ್‌, ಗೆಳೆಯರಾದ ದಿನೇಶ್‌ ಅಳಿಯೂರು, ಯತೀಶ್‌ ಶೆಟ್ಟಿ, ಸತ್ತಾರ್‌ ಮತ್ತಿತರರು ಇದ್ದ​ರು.

ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ!

ಕಂಬಳ ಕ್ರೀಡೆಯಲ್ಲಿ ದಾಖಲೆ ವೇಗದಲ್ಲಿ ಓಡಿ ಭಾರತದ ಉಸೇನ್‌ ಬೋಲ್ಡ್‌ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಮೂಡಿಬಿದರೆಯ ಶ್ರೀನಿವಾಸಗೌಡ ಅವರಿಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ತಮ್ಮ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದ ವತಿಯಿಂದ 1 ಲಕ್ಷ ಆರ್ಥಿಕ ನೆರವು ಘೋಷಿಸಿದ್ದರು.