ಬೆಳಗಾವಿ (ಅ.12): ಖ್ಯಾತ ಚಲನಚಿತ್ರ ಗೀತ ರಚನೆಕಾರ ಕೆ.ಕಲ್ಯಾಣ್‌ ದಾಂಪತ್ಯದಲ್ಲಿ ಕಲಹಕ್ಕೆ ಕಾರಣ ಹಾಗೂ ಲಕ್ಷಾಂತರ ರು. ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಮಂತ್ರವಾದಿ ಶಿವ​ನಾಂದ ವಾಲಿ ಒಡೆತನದಲ್ಲಿದ್ದ 9 ಮ್ಯಾಕ್ಸಿಕ್ಯಾಬ್‌ಗಳನ್ನು ನಗರದ ಮಾಳಮಾರುತಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕಲ್ಯಾಣ್‌ ಪತ್ನಿ ಅಶ್ವಿನಿ, ಅತ್ತೆ, ​ಮಾವರನ್ನು ಅಪಹರಿಸಿ, ಪುಸಲಾಯಿಸಿ ಹಣ​, ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕಲ್ಯಾಣ್‌ ಮನೆ ಕೆಲಸದಾಕೆ ಗಂಗಾ, ವಾಲಿ ವಿರುದ್ಧ ದೂರು ನೀಡಿದ್ದರು.

ಕವಿ ಕಲ್ಯಾಣ್‌ ಜೀವನದಲ್ಲಿ ನಿಜಕ್ಕೂ ನಡೆದದ್ದೇನು? ..

 ಈ ಹಿನ್ನೆಲೆಯಲ್ಲಿ ಬಾಗಲಕೋಟೆಯ ವಾಲಿಯನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಲ್ಯಾಣ್‌ ಪತ್ನಿ, ಅತ್ತೆ​, ಮಾವನ ಅಕೌಂಟ್‌ನಿಂದ ಸುಮಾರು 45 ಲಕ್ಷ ರು. ಹಾಗೂ ಕೋಟ್ಯಂತರ ರು. ಆಸ್ತಿ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಹಣದಿಂದ ಶಿವಾನಂದ ಖರೀದಿಸಿದ್ದ 9 ಮ್ಯಾಕ್ಸಿಕ್ಯಾಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.