ಕಲಬುರಗಿ ಅಕ್ರಮ ಮದ್ಯ ಮಾರಾಟಾದ ಹಾಟ್‌ಸ್ಪಾಟ್?
ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಇರೋ ಮದ್ಯ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಬೇಕಷ್ಟೆ. ಆದರಿಲ್ಲಿ ಚಹಾ ಸೇವನೆ ಮಾಡೋ ರೀತಿಯಲ್ಲಿ ಖುಲ್ಲಂಖುಲ್ಲಾ ಆಗಿಯೇ ಮದ್ಯ ವ್ಯಸನಿಗಳು ಸರತಿಯಲ್ಲಿ ನಿಂತು ಮದ್ಯ ಸೇವನೆ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಜಾಣ ಕುರುಡಾಗಿರೋದು ದುರಂತ ಎನ್ನಲಾಗುತ್ತಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.20): ಜಿಲ್ಲಾದ್ಯಂತ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದಂತೆ ನಡೆದಿದೆ, ಅಬಕಾರಿ ಇಲಾಖೆ ಅಕ್ರಮಕ್ಕೆ ಮೂಗುದಾರ ಹಾಕಲು ಕ್ರಮ ಕೈಗೊಳ್ಳುತ್ತಿರದಾಗಿ ಹೇಳಿದರೂ ಕೂಡಾ ಅಬಕಾರಿ ಇಲಾಖೆಯ ಈಗಿನ ಯಾವ ಕ್ರಮಗಳು ಅಕ್ರಮ ಮದ್ಯದ ಹೊಳೆಗೆ ಮೂಗುದಾರ ಹಾಕಲು ಆಗುತ್ತಿಲ್ಲ. ಅಬಕಾರಿ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರವೇ ಹೇಳೋದಾದಲ್ಲಿ ಕಳೆದ 3 ವರ್ಷಗಳಲ್ಲಿ ಕಲಬುರಗಿ ಜಿಲ್ಲಾದ್ಯಂತ ಮದ್ಯದದ ಅಕ್ರಮ ಮಾರಾಟ ಭರ್ಜರಿ ಸಾಗಿದೆ.
ಅಬಕಾರಿ ಇಲಾಖೆ ಅಪರೂಪಕ್ಕೊಮ್ಮೆ ಎಂಬಂತೆ ಆಗಾಗ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದನ್ನೇ ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ, ಅಂತಹ ಅವುಗಳ ಸಂಖ್ಯಾಬಲದ್ಲಿಯೂ ವರ್ಷದಿಂದ ವರ್ಷಕ್ಕೆ ಏರುಗತಿ ಗೋಚರಿಸಿದೆ. ಕಲಬುರಗಿ ಅಕ್ರಮ ಮದ್ಯ ಮಾರಾಟದ ತವರಾಗುತ್ತಿರೋದಕ್ಕೆ ಈ ಅಂಕಿ- ಸಂಖ್ಯೆಯೇ ಕನ್ನಡಿ ಹಿಡಿದಿದೆ.
ಕಲಬುರಗಿ: ಹವಾ ಮಲ್ಲಿನಾಥ ಮುತ್ಯಾಗೆ 14 ದಿನ ನ್ಯಾಯಾಂಗ ಬಂಧನ!
ಮದ್ಯದ ಅಕ್ರಮಗಳ ಸುತ್ತಮುತ್ತ:
ಮದ್ಯ, ಬೀಯರ್, ಹೊರರಾಜ್ಯ ಮದ್ಯ, ಸೇಂದಿ, ಕಳ್ಳಭಟ್ಟಿ ಸೇರಿದಂತೆ ವರ್ಷ- 2020- 21ರಲ್ಲಿ 151 ಪ್ರಕರಣ ದಾಲಾದರೆ, 2021- 22 ರಲ್ಲಿ ಈ ಸಂಖ್ಯೆ 166 ಕ್ಕೆ ಹೆಚ್ಚಿದರೆ, 2022- 23 ರಲ್ಲಿ 330 ತಲುಪಿದೆ, ಪ್ರಸಕ್ತ ಸಾಲಿನಲ್ಲಿ ಅಂದೆರ- 2023- 24 ರಲ್ಲಿ ಇಲ್ಲಿಯವರೆಗೆ 101 ಪ್ರಕರಣ ಅದಾಗಲೇ ದಾಖಲಾಗಿವೆ. ಇವಿನ್ನೂ ಹೆಚ್ಚುವ ಸಾಧ್ಯತೆಗಳೇ ಅಧಿಕ, ಇವೆಲ್ಲವೂ ದಾಖಲಾದಂತಹ ಅಧಿಕೃತ ಪ್ರಕರಣಗಳಾದರೆ, ಇನ್ನು ಇಲಾಖೆಯ ಕಣ್ಣಿಗೆ ಮಣ್ಣೆರಚಿಯೋ, ದೋಸ್ತಿಯಲ್ಲೋ ಇಂತಹ ದುಪ್ಪಟ್ಟು ಪ್ರಕರಣಗಳು ದಿಲ್ಲೆಯಲ್ಲಿವೆ. ಹೀಗಾಗಿ ಕಲಬುರಗಿಯಲ್ಲಿ ಮದ್ಯದ ಅಕ್ರಮ ಮನಸೋ ಇಚ್ಚೆ ಸಾಗಿದೆ. ಇದರಿಂದಾಗಿ ಬಡವರು, ಮಧ್ಯಮ ವರ್ಗದವರು ಎಲ್ಲರೂ ಈ ಮದ್ಯದ ಹೊಳೆಯಲ್ಲಿ ಕೊಚ್ಚಿಕೊಂಡಜು ಹೋಗುತ್ತ ತೊಂದರೆ ಎದುರಿಸುತ್ತಿದ್ದಾರೆ.
ಕಿರಾಣಿ ಮಳಿಗೆ, ಪಾನ್‌ಶಾಪ್‌ಗಳಲ್ಲೂ ಮದ್ಯ ಲಭ್ಯ:
ಗ್ರಾಮೀಣ ಕಲಬುರಗಿಯಂತೂ ಅಕ್ರಮ ಮದ್ಯದ ಹಾಟ್‌ಸ್ಪಾಟ್ ಎಂಬಂತಾಗಿದೆ. ಏಕೆಂದರೆ ಜಿಲ್ಲೆಯ ಕೆಲವು ಗ್ರಾಮಗಳಲ್ಲಂತೂ (ಅದರಲ್ಲೂ ಗಡಿಯಲ್ಲಿರುವ ಊರುಗಳು) 1 ಪರವಾನಿಗೆಯ ಮಳಿಗೆ ಇದ್ದರೆ ನಾಲ್ಕು ಪರವಾನಿಗೆ ಇಲ್ಲದ, ದಿನಸಿ ಮಳಿಗೆ, ಪಾನ್‌ಶಾಪ್‌ಗಳೇ ಮದ್ಯದ ಅಂಗಡಿಗಳಾಗಿ ಜನರಿಗೆ ಯಥೇಚ್ಚ ಮದ್ಯ ಪೂರೈಸುತ್ತಿರೋದು ಕಟು ವಾಸ್ತವ. ಹೀಗೆ ಮದ್ಯದ ಯಥೇಚ್ಚ ಸರಬರಾಜು ಅಕ್ರಮವಾಗಿ, ವಾಮ ಮಾರ್ಗದಲ್ಲಿ ಜಿಲ್ಲಾದ್ಯಂತ ಸಾಗಿರೋದರಿದಂಲೇ ಮಹಿಳೆಯರ, ಮಕ್ಕಳು, ಅಪ್ರಾಪ್ತರ ಪ್ರತಿ ಲೈಂಗಿಕ ಹಿಂಸೆಗಳು, ಅತ್ಯಾಚಾರ, ಅನಾಚಾರದ ಪ್ರಕರಣಗಳು ಜಿಲ್ಲೆಯಲ್ಲಿ ಹಿದಿಂಗಿತಿಂಲೂ ಹೆಚ್ಚಿಗೆ ವರದಿಯಗುತ್ತಿವೆ. ಈಚೆಗಿನ ದಿನಗಳಲ್ಲಿ ಅಪ್ರಾಪ್ತರು ಪಾನಮತ್ತರಾಗಿ ಅನೇಕ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರೋದು ಸುದ್ದಿಯಾಗಿ ಜಿಲ್ಲೆಯೇ ತಲ್ಲಣಗೊಂಡಿದ್ದು ಯಾರೂ ಮರೆತಿಲ್ಲ. ಅಕ್ರಮ ಮದ್ಯದ ಹೊಳೆಗೆ ಕಡಿವಣ ಹಾಕದ ಹೋದಲ್ಲಿ ದುರಂತಗಳು ಮಿತಿ ಮೀರೋದರಲ್ಲಿ ದೂಸ್ರಾ ಮಾತಿಲ್ಲ.
ವೈನ್‌ಶಾಪ್‌ಗಳಲ್ಲೇ ಚಹಾ ಸೇವಿಸುವ ರೀತಿ ಮದ್ಯ ಸೇವನೆ:
ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಇರೋ ಮದ್ಯ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಬೇಕಷ್ಟೆ. ಆದರಿಲ್ಲಿ ಚಹಾ ಸೇವನೆ ಮಾಡೋ ರೀತಿಯಲ್ಲಿ ಖುಲ್ಲಂಖುಲ್ಲಾ ಆಗಿಯೇ ಮದ್ಯ ವ್ಯಸನಿಗಳು ಸರತಿಯಲ್ಲಿ ನಿಂತು ಮದ್ಯ ಸೇವನೆ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಜಾಣ ಕುರುಡಾಗಿರೋದು ದುರಂತ ಎನ್ನಲಾಗುತ್ತಿದೆ. ಪರವಾನಿಗೆಯಂತೆಯೇ ನಿಯಮಗಳ ಪಾಲನೆಯಾಗಬೇಕಲ್ಲವೆ? ಅದ್ಯಾವುದು ಆಗದೆ ಹಾಡುಹಗಲೇ ಮದ್ಯ ಮಳಿಗೆಗಳೇ ಮಿನಿ ಬಾರ್ ತರಹ ಕೆಲಸ ಮಾಡುತ್ತಿದ್ದರೂ ಅದನ್ನ ನೋಡಿಯೋ ನೆಡದರಂತೆ ಅಬಕಾರಿ ಇಲಾಖೆಯವರು ಮೌನ ಧಾರಿಗಳಾಗಿದ್ದಾರೆ. ಹೀಗಾಗಿಪಾನಮತ್ತರ ಹಾವಳಿ ಜಿಲ್ಲೆಯ ರಿಂಗ್ ರಸ್ತೆ, ಪ್ರಮುಖ ವೃ-ತ್ತಗಳಲ್ಲಿ ಹೆಚ್ಚುತ್ತಿದ್ದು ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ.
ವಿಶ್ವಗುರು ಬಸವಣ್ಣ ತತ್ವ ಮನೆ-ಮನೆ ಮುಟ್ಟಿಸೋಣ: ಶಾಸಕ ಅಜಯ್ ಸಿಂಗ್
ರಸ್ತೆ ಪಕ್ಕದಲ್ಲೇ ಮದ್ಯ ಸೇವನೆ- ಪೊಲೀಸರೂ ಮೌನ:
ಕಲಬುರಗಿ ರಿಂಗ್ ರಸ್ತೆ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಮದ್ಯ ವ್ಯಸನಿಗಳು ರಸ್ತೆ ಪಕ್ಕದಲ್ಲೇ ತಮ್ಮೆಲ್ಲ ಪರಿಕರಗಳೊಂದಿಗೆ ಕುಳಿತು ಎಲ್ಲರು ನೋಡುಂತೆ ರಾಜಾರೋಶಷವಾಗಿ ಮದ್ಯಪಾನ ಮಾಡುವುದರಲ್ಲಿ ಮಗ್ನರಾಗಿದ್ದರೂ ಸಹ ಇದನ್ನು ತಪ್ಪಿಸಬೇಕಾದಂತಹ ಪೊಲೀಸ್ ವ್ಯವಸ್ಥೆಯೂ ಇದಕ್ಕೆಲ್ಲ ಜಾಣ ಕುರುಡಾಗಿದೆ, ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಹೆಚ್ಚುತ್ತಿದೆ. ಇದು ರಸ್ತೆಗಳಲ್ಲಿ ಡ್ರಿಂಕ್- ಡ್ರೈವ್ ದುರಂತಗಳಿಗೋ, ಕಿರಿಕಿರಿಗಳಿಗೂ ಕಾರಣವಾಗುತ್ತಿದೆ.
ಸದನದಲ್ಲೂ ಸದ್ದು ಮಾಡಿದ ಮದ್ಯದ ಹಾವಳಿ!
ವಿಧಾನಸಭೆಯಲ್ಲಿ ಅಕ್ರಮ ಮದ್ಯದ ಹಾವಳಿ ಕುರಿತಂತೆ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ, ಅಕ್ರಮದ ಹಾವಳಿ ಗಮನಕ್ಕೆ ಬಂದಿದೆ. ವಲಯ ವ್ಯಾಪ್ತಿ ರೂಟ್‌ಗಳನ್ನು ಹೆಚ್ಚಿಸಿ ಗಸ್ತು ಮಾಡಲಾಗುತ್ತಿದೆ. ಪೊಲೀಸ್, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರೆ ಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮಗಳನ್ನು ಹತ್ತಿಕ್ಕುತ್ತೇವೆ, ಡಿಸಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಭೆ ನಡೆಸಿ ಕ್ರಮಕ್ಕೆ ಮುಂದಾಗುತ್ತೇವೆಂದಿದ್ದಾರೆ. ಸಚಿವರ ಈ ಭರವಸೆ ಆದಷ್ಟು ಬೇಗ ಕಾರ್ಯಗತಗೊಳ್ಳಬೇಕು ಎಂದು ಕಲಬುರಗಿ ಜಿಲ್ಲೆಯ ಜನತೆ ಆಗ್ರಹಿಸುತ್ತಿದ್ದಾರೆ.