"

ಕಲಬುರಗಿ(ನ.16): ಗೆಳೆಯರ ನಿರ್ಲಕ್ಷ್ಯಕ್ಕೆ ಈಜುತ್ತಿದ್ದ ಯುವಕ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈಜಲೆಂದು ಬಂದಿದ್ದ ಯುವಕರಲ್ಲಿ ಜಾಫರ್ ಅಯೂಬ್ ಎಂಬಾತ ಈಜಾಡುತ್ತಿದ್ದಂತೆ, ಇನ್ನೇನು ತೀರ ಸೇರುವಷ್ಟರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

ಈಜಾಡುತ್ತಿದ್ದ ಸ್ನೇಹಿತ ಮುಳುಗುತ್ತಿದ್ದರೂ ರಕ್ಷಿಸದ ಗೆಳೆಯರು ನೋಡುತ್ತಾ ನಿಂತಿದ್ದಾರೆ. ಒಬ್ಬ ಯುವಕ ಮುಳುಗುವುದರ ವೀಡಿಯೋ ತೆಗೆಯುತ್ತಿದ್ದರೆ, ಮತ್ತೋರ್ವ ದಂಡೆಯ ಮೇಲೆ ಏನಾಯ್ತು ಎನ್ನುತ್ತ ಕಾಲಹರಣ ಮಾಡಿದ್ದಾನೆ. ಗೆಳೆಯರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದು, ಕಲಬುರಗಿಯ ರುಕ್ಮೊದ್ದೀನ್ ಕಲ್ಲಿನ ಖಣಿಯಲ್ಲಿ ಘಟನೆ ನಡೆದಿದೆ.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!

ಮಿಜುಗುರಿ ಬಡಾವಣೆಯ ಜಾಫರ್ ಅಯೂಬ್(22) ಮೃತ ದುರ್ದೈವಿ. ಜಾಫರ್ ಮತ್ತು ಆತನ ಸ್ನೇಹಿತರು ಈಜಾಡಲು ಹೋಗಿದ್ದರು. ಒಬ್ಬ ಮೇಲೆ ನಿಂತು ವೀಡಿಯೋ ತೆಗೆಯುತ್ತಿದ್ದ. ಜಾಫರ್ ಈಜುತ್ತಾ ದಂಡೆಯ ಸಮೀಪ ಬಂದಾಗ ಮುಳುಗತ್ತಿದ್ದ. ನೀರೊಳಗೆ ಮುಳುಗುತ್ತಿದ್ದರೂ ಸ್ನೇಹಿತರು ಕೈ ಹಿಡಿದು ದಂಡೆಗೆ ಎಳೆದಿಲ್ಲ. ನೋಡನೋಡುತ್ತಿದ್ದಂತೆಯೇ ಜಾಫರ್ ಜಲಸಮಾಧಿಯಾಗಿದ್ದಾನೆ.

ಮುಳುಗುತ್ತಿರುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ಪೊಲೀಸರು ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಮೃತದೇಹ ಹೊರ ತೆಗೆದಿದ್ದಾರೆ. ಕಲಬುರಗಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸ ಕಾಯಂ ಆಮಿಷ: ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ