ಕಲಬುರಗಿ, (ಏ.19): ಲಾಕ್‍ಡೌನ್ ಉಲ್ಲಂಘಿಸಿ ರಥೋತ್ಸವ ನಡೆದಿದ್ದ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮವನ್ನೇ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.

ಗ್ರಾಮದಿಂದ ಕೇವಲ ಮೂರು ಕಿ.ಮೀ. ಅಂತರದ ವಾಡಿ ಪಟ್ಟಣದಲ್ಲ ಕರೋನಾ ವೈರಸ್ ಮಗವಿನಲ್ಲಿ ಕಂಡು ಬಂದಿದ್ದರಿಂದ, ರಥೋತ್ಸವದಲ್ಲಿ ಜನರು ಸಾಮೂಹಿಕವಾಗಿ ಭಾಗವಹಿಸಿದ್ದರಿಂದ, ಮುಂಜಾಗ್ರತ ಕ್ರಮವಾಗಿ ಗ್ರಾಮದ ಮುಖ್ಯ ರಸ್ತೆ ಹೊರತು ಪಡಿಸಿ, ಗ್ರಾಮದ ಎಲ್ಲಾ ಸಣ್ಣ,ಪುಟ್ಟ ರಸ್ತೆಗಳನ್ನ ಮಳ್ಳು ಕಂಟಿ, ಬೇಲಿ ಹಾಕಿ ಮುಚ್ಚಲಾಗಿದ್ದು, ಗ್ರಾಮಸ್ಥರನ್ನು ತಮ್ಮ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.

ಲಾಕ್‌ಡೌನ್ ಮಧ್ಯೆಯೂ ನಡೆಯಿತು ಹನುಮಾನ್ ರಥೋತ್ಸವ..!

ಯಾವ ಗ್ರಾಮಸ್ಥರು ಹೊರಗೆ ಹೋಗದಂತೆ ನಿರ್ಭಂಧಿಸಲಾಗಿದೆ. ಗ್ರಾಮದಲ್ಲಿ ಒಂದು ಡಿಆರ್ ವ್ಯಾನ್, ಸ್ಥಳೀಯ ಪೆÇಲೀಸರು ಬಿಡುಬಿಟ್ಟಿದ್ದು, ಅಂಗಡಿ, ಹೊಟೇಲ್ ಎಲ್ಲಾ ಮುಚ್ಚಿದ್ದು, ಜನರು ಮನೆಯಿಂದ ಹೊರಕ್ಕೆ ಬರುತ್ತಿಲ್ಲ,

ಶುಕ್ರವಾರ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಭೇಟ್ಟಿ ನೀಡಿ, ಗ್ರಾಮದ ಪರಿಸ್ಥಿತಿಯನ್ನ ಅವಲೋಕಿಸಿ, ಈಗಾಗಲೇ ರಥೋತ್ಸವ ನಡೆಸಿದ್ದರಿಂದ 20 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಇನ್ನೂ 180 ಜನರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದು, ಈಗ ಪೊಲೀಸರು ಮಠದ 13 ಜನರನ್ನು ವಶಕ್ಕೆ ಪಡೆದಿದ್ದಾರೆ,

ಗ್ರಾಮಸ್ಥರು ರಥೋತ್ಸವ ನಿಮಿತ್ತ ಒಂದೆಡೆ ಸೇರಿದ್ದರಿಂದ ಸಂಪೂರ್ಣ ಗ್ರಾಮವನ್ನು ದಿಗ್ಬಂಧನ ಗೊಳಿಸಲಾಗಿದೆ. ಸಂಪೂರ್ಣ ಗ್ರಾಮಸ್ಥರಿಗೆ ತಪಾಸಣೆ ನಡೆಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಇಬ್ಬರು ವೈದ್ಯರ ನೇತೃತ್ವದಲ್ಲಿ 20 ಜನ ಆಶಾ ಕಾರ್ಯಕರ್ತರು, 10 ಜನ ಆರೋಗ್ಯ ಸಿಬ್ಬಂದಿ, ಪೆÇಲೀಸರ ಸಹಕಾರದೊಂದಿಗೆ ಶನಿವಾರ ಸುಮಾರು 100 ಜನರ ರಕ್ತ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕ ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್ ಹೇಳಿದ್ದಾರೆ.

16 ಶಾಖಾ ಮಠದವರು ಬಂದಿದ್ದರೆ ?
ಗುರುವಾರ ಲಾಕ್‍ಡೌನ ನಡುವೆಯೂ ಬೆಳಗ್ಗೆ ರಥೋತ್ಸವ ನಡೆದಿದ್ದು ಈ ರಥೋತ್ಸವಕ್ಕೆ ರಾವೂರ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದ 16 ಶಾಖಾ ಮಠದ ಪೂಜ್ಯರು, ಭಕ್ತರು ರಾಜ್ಯ, ಹೊರ ರಾಜ್ಯದಿಂದ ಬಂದಿದ್ದರು ಎನ್ನಲಾಗಿದ್ದು, ಇದು ನಿಜವಾದರೆ, ಜಿಲ್ಲಾ ಆಡಳಿತಕ್ಕೆ, ಆರೋಗ್ಯ ಇಲಾಖೆ, ಪೊಲೀಸರಿಗೆ ರಥೋತ್ಸವ ದೊಡ್ಡ ತಲೆನೋವಾಗಲಿದೆ.