ಕಲಬುರಗಿ, (ಏ.21): ಜಿಲ್ಲೆಯಲ್ಲಿ  ಮತ್ತೆ ಮೂರು ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30 ಕ್ಕೆ ಹೆಚ್ಚಿದೆ, ನಾಲ್ವರು ಸಾವನ್ನಪ್ಪಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮೂವರಿಗೆ ಕೊರೋನಾ ಸೋಂಕು ಮಂಗಳವಾರ ಧೃಢಪಟ್ಟಿದ್ದು,ಇಎಸ್‍ಐಸಿ ಎಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರಗಿಯಲ್ಲಿ 4ನೇ ಸಾವು
ದೇಶದಲ್ಲೇ ಕೊರೋನಾ ಸೋಂಕಿನಿದಾಗಿ ಮೊದಲ ಸಾವು ಸಂಭವಿಸಿದ್ದ ಕಲಬುರಗಿಯಲ್ಲಿ ಬರೋಬ್ಬರಿ 41 ದಿನಗಳಲ್ಲೇ 4ನೇ ಸಾವು ಸೋಮವಾರ ರಾತ್ರಿ ಆಗಿರುವುದು ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ.

ಸೋಂಕು ಯಾವ ದಿಕ್ಕಿನಿಂದ ಪ್ರವೇಶಿಸುತ್ತೆ? ನಿಮ್ಮ ಮನೆ ಸೇಫಾ?

ನ್ಯಾಷನಲ್ ಚೌಕ್ ನಿವಾಸಿ, 80 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಸೋಮವಾರ ರಾತ್ರಿ ಸಾವನ್ನಪ್ಪಿದ್ದು ಈತನಿಗೆ ಕೋವಿಡ್-19 ಸೋಂಕು ಇರೋದು ಮಂಗಳವಾರ ಖಚಿತವಾಗಿದೆ. 

ಪಾರ್ಕಿನ್ಸನ್ ನಿಂದ ಬಳಲುತ್ತಿದ್ದ ಈತ ಕಳೆದ 3 ವರ್ಷಗಳಿಂದ ಹಾಸಿಗೆಹಿಡಿದಿದ್ದ, ರವಿವಾರ ಮಧ್ಯ ರಾತ್ರಿ ಜ್ವರ ಕಂಡು ಬಂದದ್ದರಿಂದ ವೃದ್ಧದನ್ನು ಕಲಬುರಗಿಯ ಇಎಸ್‍ಐಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಿಲ್ಲಾಡಳಿತದ ನಿದ್ದೆಗೆಡಿಸಿದ  4ನೇ ಸಾವು
ಹೌದು.. ವೃದ್ದನಿಗೆ ಯಾವುದೇ ಪ್ರಯಾಣ ಹಿಸ್ಟರಿ (ಟ್ರಾವೆಲ್ ಹಿಸ್ಟರಿ) ಇಲ್ಲ. ದೆಹಲಿಯಿಂದ ಮರಳಿದ ತಬ್ಲಿಘಿಗಳು ಸೇರಿದಂತೆ ಯಾರೊಂದಿಗೂ ಈ ವೃದ್ಧ ಸಂಪರ್ಕಕ್ಕೆ ಬಂದ ಮಾಹಿತಿ ಕೂಡ ಲಭ್ಯವಾಗಿಲ್ಲ. ಹೀಗಾಗಿ ವೃದ್ದನಿಗೆ ಸೋಂಕು ಹೇಗೆ ತಗುಲಿತು ಅನ್ನೋದನ್ನು ಜಿಲ್ಲಾಡಳಿತಕ್ಕೆ ಮತ್ತು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದ್ದು, ಈ  ಬಗ್ಗೆ ತನಿಖೆ ನಡೆಸಿದ್ದಾರೆ. 

ಈವರೆಗಿನ ಸಾವಿನ ಹಿಸ್ಟರಿ 
ಮೆಕ್ಕಾ ಯಾತ್ರೆ ಪೂರೈಸಿ ಕಲಬುರಗಿಗೆ ಮರಳಿದ್ದ 67 ರ ವೃದ್ಧ ನ್ಯೂಮೋನಿಯಾದಿಂದ ಬಳಲಿ ಮಾ. 10 ಕ್ಕೆ ಸಾವನ್ನಪ್ಪಿದ್ದ, ಈತನ ಸಾವಿಗೆ ಕೋವಿಡ್- 19 ಸೋಂಕು ಕಾರಣವೆಂದು ಮಾ. 12 ರಂದು ಧೃಢಪಟ್ಟಾಗ ಈತನ ಸಾವೇ ಭಾರತ ದೇಶದ ಮೊದಲ ಕೊರೋನಾ ಸೋಂಕಿನ ಸಾವಾಗಿ ದಾಖಲಾಗಿದ್ದು ಇತಿಹಾಸ. ಈ ಸಾವಿನ ನಂತರ ಕಲಬುರಗಿಯಲ್ಲಿ ಮತ್ತೆ ಮೂವರು ಕೊರೋನಾ ಸೋಂಕಿಗ ಬಲಿಯಾಗಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿದ್ರೆ ರೌಡಿ ಶೀಟರ್ ಕೇಸ್, ಕಲಬುರಗಿ ಮಂದಿಗೆ ಡಬಲ್ ಶಾಕ್!

ಇಲ್ಲಿನ ಸಿಟಿ ಬಸ್  ನಿಲ್ದಾಣ ಪ್ರದೇಶದಲ್ಲಿ ಬಾಳೆಹಣ್ಣು ಮಾರುತ್ತಿದ್ದ ವರ್ತಕ ದೆಹಲಿಯಿಂದ ಬಂದವರ ಸಂಪರ್ಕಕ್ಕ ಬಂದು ಜ್ವರ- ಶೀತದಿಂದ ನರಳಿ ಕೋವಿಡ್- 19 ಸೋಂಕು ಧೃಢ ಪಡುತ್ತಿದ್ದಂತೆಯೇ ಏ.7ಕ್ಕೆ ಸಾವನ್ನಪ್ಪಿದ್ದ. 55  ವರ್ಷದ ಬಟ್ಟೆ ವರ್ತಕವಿಗೆ ದೆಹಲಿ ನಂಟಿನ ಹಿನ್ನೆಲೆಯಲ್ಲಿಯೇ ಸೋಂಕು ಬಂದು ಏ.14 ರಂದೇ ಸಾವನ್ನಪ್ಪಿದ್ದನ್ನು ಸ್ಮರಿಸಬಹುದು. ಇದೀಗ 80 ರ ವಯೋವೃದ್ಧನ ಸಾವು ಸಹ ಕೋವಿಡ್- 19 ನಿಂದಲೇ ಸಂಭವಿಸಿದ್ದರಿಂದ ಜಿಲ್ಲಾಡಳಿತ ಈ ಅಜ್ಜನಿಗೆ ಸೋಂಕು ತಗುಲಿದ್ದು ಹೇಗೆಂಬುದರ ಪತ್ತೆಗೆ ಮುಂದಾಗಿದೆ.

ಕಲಬುರಗಿಯಲ್ಲಿ ಇದುವರೆಗೂ 1, 116 ಜನರ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದ್ದು 816 ಜನರಿಗೆ ನೆಗೆಟಿವ್ ಬಂದಿದೆ. 776 ಜನರ ವರದಿ ನಿರೀಕ್ಷಿಸಲಾಗುತ್ತಿದೆ, 30 ಜನರ ವರದಿ ಪಾಸಿಟಿವ್ ಬಂದಿದ್ದು ಈ ಪೈಕಿ 4 ಜನ ಸಾವನ್ನಪ್ಪಿದ್ದರೆ, ಮೂವರು ಗುಣಮುಖರಾಗಿ ಮನೆ ಸೇರಿದ್ದಾರೆ.