Asianet Suvarna News Asianet Suvarna News

ಕಲಬುರಗಿ: ಕೊನೆಗೂ ಬಿಜೆಪಿ ಮುಖಂಡ ಗಡಿಪಾರು, ರವಿಕುಮಾರ ಆದೇಶ

ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಒಂದು ವರ್ಷ ಕಾಲ ಗಡಿಪಾರು ಮಾಡಿ ನಗರ ಪೊಲೀಸ್‌ ಆಯುಕ್ತ ಡಾ. ವೈ.ಎಸ್‌. ರವಿಕುಮಾರ ಆದೇಶ 

Kalaburagi City Police Commissioner Dr YS Ravikumar Order to BJP Leader Manikanth Exile grg
Author
First Published Oct 5, 2022, 2:31 AM IST

ಕಲಬುರಗಿ(ಅ.05): ಮಹತ್ವದ ಬೆಳವಣಿಗೆಯೊಂದರಲ್ಲಿ ಇಲ್ಲಿನ ಪೊಲೀಸರು ಕೊನೆಗೂ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಕಲಬುರಗಿಯಿಂದ ದೂರದ ಶಿವಮೊಗ್ಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಒಂದು ವರ್ಷ ಕಾಲ ಗಡಿಪಾರು ಮಾಡಿ ನಗರ ಪೊಲೀಸ್‌ ಆಯುಕ್ತ ಡಾ. ವೈ.ಎಸ್‌. ರವಿಕುಮಾರ ಆದೇಶ ಹೊರಡಿಸಿದ್ದಾರೆ.

ಅಕ್ರಮ ಪಡಿತರ ಅಕ್ಕಿ ಸಾಗಣೆ, ಜೀವ ಬೆದರಿಕೆ ಹಾಕಿರುವುದು ಸೇರಿದಂತೆ ಮೂರು ಜಿಲ್ಲೆಗಳ ಹಲವಡೆ ವಿವಿಧ ಪ್ರಕರಣಗಳನ್ನು ಮಣಿಕಂಠ ರಾಠೋಡ ಎದುರಿಸುತ್ತಿದ್ದಾರೆ. ಕೋರ್ಚ್‌ನಲ್ಲಿ ಜಾಮೀನು ಪಡೆದು ಹೊರಬಂದ ನಂತರವು ಮತ್ತೆ ಹಳೆ ಚಾಳಿ ಮುಂದುವರೆಸಿದ್ದರು. ಇವರನ್ನು ಗಡಿಪಾರು ಮಾಡಬೇಕೆಂದು ಹಲವು ದಿನಗಳಿಂದ ಸಂಘಟನೆಗಳು ಆಗ್ರಹಿಸಿದ್ದವು.

ಕಲಬುರಗಿ: ಪುಟ್ಟ ಕಂದಮ್ಮನಿಗೆ ಹೃದಯ ಕಾಯಿಲೆ, ಪೋಷಕರಿಗೆ ಅಲೆಯುವಂತೆ ಮಾಡಿದ್ರಾ ಜಿಮ್ಸ್‌ ವೈದ್ಯರು!?

ತೀವ್ರ ಗಮನ ಸೆಳೆದಿತ್ತು ಪ್ರಕರಣ:

ಇತ್ತೀಚೆಗೆ ಎಡಿಜಿಪಿ ಅಲೋಕ್‌ ಕುಮಾರ್‌ ಕಲಬುರಗಿ ನಗರಕ್ಕೆ ಆಗಮಿಸಿದಾಗ ದಲಿತ ಸಂಘಟನೆ ಮುಖಂಡರು ಮಣಿಕಂಠ ರಾಠೋಡ ಗಡಿಪಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ತೀವ್ರ ಸುದ್ದಿಗೆ ಗ್ರಾಸವೂ ಆಗಿತ್ತು. ಅಲೋಕ ಕುಮಾರ್‌ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಪ್ರಸ್ತಾಪವೂ ಆಗಿತ್ತು. ಇದಾದ ನಂತರ ಮಣಿಕಂಠನನ್ನು ಗಡಿಪಾರು ಮಾಡುವಂತೆ ಗಡುವು ನೀಡಿದ್ದ ಎಡಿಜಿಪಿ ಅಲೋಕ ಹೇಳಿಕೆಯನ್ನು ಪ್ರಶ್ನಿಸಿ ಹಾಗೂ ಗಡಿಪಾರು ಬೇಡವೆಂದು ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರೊಬ್ಬರು, ಹಿಂದು ಸಮಾಜದ ಪ್ರಭಾವಿ ಸ್ವಾಮೀಜಿ ಹಾಗೂ ಬಂಜಾರಾ ಸಮುದಾಯದ ಹಲವಾರು ಸ್ವಾಮೀಜಿಗಳ ಜೊತೆಗೂಡಿ ನಿಯೋಗದಲ್ಲಿ ಬೆಂಗಳೂರಿಗೆ ತೆರಳಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಎಂ ಬೊಮ್ಮಾಯಿಯವರನ್ನು ಕೋರಿದಾಗ ಸದರಿ ಪ್ರಕರಣ ತೀವ್ರ ಗಮನ ಸೆಳೆದಿತ್ತು.

ಇದಾದ ನಂತರ ಸ್ಥಳೀಯವಾಗಿ ಪೊಲೀಸರು ಮಣಿಕಂಠನ ವಿರುದ್ಧ ಪ್ರಕಣಗಳ ಲೆಕ್ಕ ಹಾಕಲು ತೊಡಗಿ ಅಗತ್ಯ ದಾಖಲೆ ಪತ್ರ ಸಂಗ್ರಹಕ್ಕೂ ಮುಂದಾಗಿದ್ದರು. ಈಚೆಗೆ ನಡೆದ ಎಸ್ಸಿ ಎಸ್ಟಿಅಹವಾಲು ಆಲಿಕೆ ಸಭೆಯಲ್ಲಿಯೂ ಮಣಿಕಂಠ ಗಡಿಪಾರು ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದ್ದನ್ನು ಇಲ್ಲಿ ಮರಿಸಬಹುದು.

ಪ್ರಿಯಾಂಕ್‌ ಖರ್ಗೆ ವಿರುದ್ಧ ಫೈಟ್‌ಗೆ ಆಸಕ್ತಿ:

ಮಣಿಕಂಠ ರಾಠೋಡ ರಾಜಕೀಯವಾಗಿ ಬೆಳೆಯಲು ಬಿಜೆಪಿ ನಾಯಕರ ಆಶೀರ್ವಾದ ಇತ್ತು ಎಂಬುದು ಗುಟ್ಟೇನಲ್ಲ. ಇದಕ್ಕೆ ಪೂರಕ ಎಂಬಂತೆ ಮಣಿಕಂಠ ತಮ್ಮ ಫೇಸ್ಬುಕ್‌ ಖಾತೆಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿ ಅನೇಕ ನಾಯಕರ ಜೊತೆಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಗಡಿಪಾರು ವಿಚಾರ ಮುನ್ನೆಲೆಗೆ ಬಂದಾಗ ಖುದ್ದು ಕಲಬುರಗಿಯ ಬಿಜೆಪಿ ಪ್ರಮುಖರೊಬ್ಬರೂ ಮಣಿಕಂಠ ಪರ ಬ್ಯಾಟಿಂಗ್‌ ಮಾಡಿದ್ದು ಗಮನ ಸೆಳೆದಿತ್ತು.
 

Follow Us:
Download App:
  • android
  • ios