ಕಲಬುರಗಿ, (ಫೆ.20): ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ವಿವಾದಕ್ಕೀಡಾಗಿದ್ದಾರೆ.

 ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಶಹಬಾದ್ ನಗರದಲ್ಲಿ ಬುಧವಾರ ಸಂಜೆ ಮರಾಠ ಯುವಕ ಮಂಡಳಿ ವತಿಯಿಂದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಬಸಬರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ  ಭಾಷಣ ಮಾಡುತ್ತಿರುವ ವೇಳೆ ಮಹಾರಾಷ್ಟ್ರಕ್ಕೆ ಜೈಕಾರ ಎಂದಿದ್ದಾರೆ.

ಕರ್ನಾಟಕದ ಶಾಸಕರಿಗೆ ಮರಾಠಿ ಆಸ್ಮಿತೆ ಹೆಚ್ಚಾಯ್ತಾ? ಅಂದು ಸಾಹುಕಾರ್, ಇಂದು ಹೆಬ್ಬಾಳ್ಕರ್!

ಸಿ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಜಯಶ್ರೀ, ಭಾಷಣದ ಕೊನೆಯಲ್ಲಿ ಜೈ ಶಿವಾಜಿ ಹೇಳಿ ಬಳಿಕ ಜೈ ಕರ್ನಾಟಕ ಅನ್ನೋ ಬದಲು ಜೈ ಮಹಾರಾಷ್ಟ್ರ ಎಂದು ಹೇಳಿದ್ದಾರೆ. ಇದು ಕನ್ನಡಿಗರ ಕಣ್ಣು ಕೆಂಪಾಗಿಸಿದೆ. 

ಕೊನೆಗೂ ಕ್ಷಮೆಯಾಚಿಸಿದ ಜಯಶ್ರೀ
ಜೈ ಮಹಾರಾಷ್ಟ್ರ ಎಂಬ ಹೇಳಿಕೆ ವೀಡಿಯೋ ವೈರಲ್ ಆಗುತ್ತಿದ್ದಂತೆ, ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆಯೇ ಜಯಶ್ರೀ ಕ್ಷಮೆಯಾಚಿಸಿದ್ದಾರೆ.

ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಿ ಮರಾಠಿಯಲ್ಲಿ ಘರ್ಜಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ನಾನು ಉದ್ದೇಶಪೂರ್ವಕವಾಗಿ ಅಂದಿಲ್ಲ. ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಮಾತನಾಡುತ್ತಿದ್ದೆ. ಕೊನೆಯಲ್ಲಿ ಜೈ ಕರ್ನಾಟಕ ಅನ್ನೋ ಬದಲು ಬಾಯಿ ತಪ್ಪಿ ಜೈ ಮಹಾರಾಷ್ಟ್ರ ಎಂದು ಹೇಳಿದ್ದೇನೆ. ಈ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಎಲ್ಲಿ ಹೋದರೂ ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದು  ಜಯಶ್ರೀ ಮತ್ತಿಮೂಡ ಸಮಜಾಯಿಸಿ ನೀಡಿದರು.