ಕೊರೋನಾ 2ನೇ ಅಲೆ ಭೀತಿ: ಕಲಬುರಗಿಯಲ್ಲಿ ಕಠಿಣ ರೂಲ್ಸ್ ಜಾರಿ..!

ಒಂದು ವರ್ಷದ ಹಿಂದೆ ಕೊರೋನಾದಿಂದ ಸಂಭವಿಸಿದ್ದ ಸಾವಿನ ಮೊದಲ ಪ್ರಕರಣ ಎಂಬ ಕಾರಣಕ್ಕೆ ದೇಶಾದ್ಯಂತ ಕಲಬುರಗಿ ನಗರ ಸುದ್ದಿಯಾಗಿತ್ತು. ಇದೀಗ ಮತ್ತೆ ಎರಡನೇ ಶುರುವಾಗಿದೆ. ಇದರಿಂದ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿ ಮಾಡಲಾಗಿದೆ.

Kalabaragi DC Orders Cancels all fairs In District For covid19 pandemic rbj

ಕಲಬುರಗಿ,(ಮಾ.10): ಕಲಬುರಗಿಯಲ್ಲಿ ಕೋವಿಡ್-19 ಸೋಂಕಿನಿಂದ ಸಾವಿನ ಪ್ರಕರಣ ಸಂಭವಿಸಿ 1 ವರ್ಷ ಕಳೆದಿದೆ. ಇದೀಗ ಕೋವಿಡ್ ಹಾವಳಿ ತಡೆಯಲು ಮತ್ತೆ ಬಿಗಿ ಕ್ರಮಗಳನ್ನು ಅನುಸರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಮತ್ತೆ ಜಾತ್ರೆ ಮತ್ತು ಉರೂಸ್ ಗಳಿಗೆ ನಿಷೇಧಿಸಿ ಆದೇಶಿಸಲಾಗಿದೆ‌.

ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ 2 ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಈಗಾಗಲೇ ಗಡಿಯಲ್ಲಿ 5 ಕಡೆ ಚೆಕ್‍ಪೋಸ್ಟ್ ಆರಂಭಿಸಿ ಕೋವಿಡ್ ಪರೀಕ್ಷೆ 72 ಗಂಟೆಗಳ ಅವಧಿಯೊಳಗಿನ ನೆಗೆಟಿವ್ ರಿಪೋರ್ಟ್ ಜೊತೆಗಿದ್ದರೆ ಮಾತ್ರ ಕಲಬುರಗಿ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಜಿಲ್ಲಾಡಳಿತ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂದಿನಿಂದ ಜಿಲ್ಲೆಯ ಎಲ್ಲಾ ಜಾತ್ರೆ- ಉರುಸ್ ನಿಷೇಧಿಸಿ ಆದೇಶ ಹೊರಡಿಸಿದೆ.

ದೇಶದ ಮೊದಲ ಕೋವಿಡ್ ಸಾವಿಗೆ ವರ್ಷ- ಸಾವಿನ ಅಪಖ್ಯಾತಿ ಪಡೆದ ಜಿಲ್ಲೆ ಕಲಬುರಗಿ

ಈ ಕುರಿತಂತೆ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಆದೇಶ ಹೊರಡಿಸಿದ್ದು ಕೋವಿಡ್ 2 ನೇ ಅಲೆ ಮಹಾರಾಷ್ಟ್ರದಲ್ಲಿ ಪ್ರಬಲವಾಗುತ್ತ ಸಾಗಿದೆ. ಮಹಾ ರಾಜ್ಯದ ಪಕ್ಕದಲ್ಲೇ ಕಲಬುರಗಿ ಇರೋದಿರಂದ, ಅಲ್ಲಿಂದ ಜಿಲ್ಲೆಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಿರೋದರಿಂದ ಇಂತಹ ಕ್ರಮ ಅಗತ್ಯವೆಂದು ಕೋವಿಡ್ ಸಮೀತಿ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದು ಇಂತಹ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತದ ಜಾತ್ರೆ- ಉರುಸ್ ನಿಷೇಧದ ಈ ಆದೇಶದ ಹಿನ್ನೆಲೆಯಲ್ಲಿ ಮತ್ತೆ ಈ ಬಾರಿಯೂ ಇಲ್ಲಿ ನಡೆಯಲಿರುವ ಐತಿಹಾಸಿಕ ಅಪ್ಪನ ಜಾತ್ರೆಯ ತೇರು, ಜಾತ್ರೆಗೆ ಕೋವಿಡ್ ಕರಿನೆರಳು ಕಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.

20202 ಮಾರ್ಚ್ 13 ರಿಂದಲೇ ಕಲಬುರಗಿಯಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು. ಅದೇ ದಿನ ಕಲಬುರಗಿ ಶರಮಬಸವೇಶ್ವರ ರಥೋತ್ಸವವೂ ಇತ್ತು. ಕಳೆದ ಬಾರಿಯೇ ಕೋವಿಡ್‍ನಿಂದಾಗಿ ಜಾತ್ರೆ ಗೊಂದಲದಲ್ಲೇ ನಡೆದು ಹೋಯ್ತು. ಈ ಬಾರಿ ಜಾತ್ರೆಗೆ ಇನ್ನೂ 2 ವಾರಗಳ ಕಾಲಾವಕಾಶ ಇರುವಾಗಲೇ ಜಿಲ್ಲಾಡಳಿತದಿಂದ ಇಂತಹ ಖಡಕ್ ಆದೇಶ ಹೊರಬಿದ್ದಿರೋದರಿಂದ ಈ ಬಾರಿಯೂ ಅಪ್ಪನ ಜಾತ್ರೆಗೆ ಕೋವಿಡ್ ಆತಂಕ ಬಂದೊದಗಿದಂತಾಗಿದೆ.

ಜಿಲ್ಲೆಯ ಜನತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೂ ಮುಂಬರುವ ಎಲ್ಲಾ ಜಾತ್ರೆ- ಉರುಸ್ ನಿಷೇಧಿಸಲಾಗುತ್ತಿದೆ. ವಿಪತ್ತು ನಿರ್ವಹಣಾ ಕಾಯಿದೆ 2005 ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಡಿಸಿ ಜ್ಯೋತ್ಸ್ನಾ ಹೇಳಿದ್ದಾರೆ.

ಕೊರೋನಾ 2 ನೇ ಅಲೆ ತಪ್ಪಿಸಲು ಈಗಾಗಲೇ ಆಳಂದ ತಾಲೂಕಿನ ಖಜೂರಿ, ಹೀರೋಳ್ಳಿ, ನಿಂಬಾಳ ಹಾಗೂ ಅಫಜಲ್ಪುರ ತಾಲೂಕಿನ ಬಳೂರಗಿ, ಮಾಶಾಳಗಳಲ್ಲಿ ಚೆಕ್‍ಪೆÇೀಸ್ಟ್ ಸ್ಥಾಪಿಸಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 72 ಗಂಟೆಗಳ ಅವದಿಯಲ್ಲಿನ ಆರ್ಟಿಪಿಸಿಆರ್ ನೆಗೆಟಿವ್ ರಿಪೆÇೀರ್ಟ್ ಇದ್ದರೆ ಮಾತ್ರಮಹಾರಾಷ್ಟ್ರದಿಂದ ಜಿಲ್ಲೆಗೆ ಎಂಟ್ರಿ, ಇಲ್ಲದೆ ಹೋದಲ್ಲಿ ಯಾವ ಕಾರಣಕ್ಕೂ ಜಿಲ್ಲೆಯ ಪ್ರವೇಶ ನೀಡಲಾಗುತ್ತಿಲ್ಲ.

Latest Videos
Follow Us:
Download App:
  • android
  • ios