ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಇತಿಹಾಸ ಬರೆದ ಸುಧಾಕರ್

  •  ಚಿಕ್ಕಬಳ್ಳಾಪುರ ವಿದಾನಸಾ ಕ್ಷೇತ್ರದಿಂದ ಎರಡನೇ ಬಾರಿಗೆ  ಮಂತ್ರಿಯಾದ ಕೀರ್ತಿಗೆ ಸಚಿವ ಸುಧಾಕರ್
  •  ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಇತಿಹಾಸವನ್ನು ಬರೆದ ಸುಧಾಕರ್
K Sudhakar creates History in chikkaballapura Politics snr

 ವರದಿ : ಕಾಗತಿ ನಾಗರಾಜಪ್ಪ 

ಚಿಕ್ಕಬಳ್ಳಾಪುರ (ಜು.05): ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ  ಮಂತ್ರಿಯಾದ ಕೀರ್ತಿಗೆ ಸಚಿವ ಸುಧಾಕರ್ ಸೇರಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಇತಿಹಾಸವನ್ನು ಬರೆದಿದ್ದಾರೆ. 

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಹಿನ್ನೋಟವನ್ನು ಒಮ್ಮೆ ತಿರುಗಿ ನೋಡಿದರೆ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಸರ್ಕಾದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು ಬರೀ ಇಬ್ಬರೇ ವ್ಯಕ್ತಿಗಳು. ಒಂದು ಕಾಂಗ್ರೆಸ್  ಪಕ್ಷದಿಂದ  ಮಹಿಳಾ ಶಾಸಕಿಯಾಗಿದ್ದ ರೇಣುಕಾ ರಾಜೇಂದ್ರನ್, ಮತ್ತೊಬ್ಬರು ಜನತಾ ಪಕ್ಷದ ಕೆಎಂ ಮುನಿಯಪ್ಪ ಮಾತ್ರ. 

ಬೊಮ್ಮಾಯಿ ಸಂಪುಟಕ್ಕೆ 6 ಇನ್, 7 ಔಟ್, 29 ಜಾಕ್‌ಪಾಟ್..!

ರೇಣುಕಾ ರಾಜೆಂದ್ರನ್  ಹಾಗು ಕೆಎಂ ಮುನಿಯಪ್ಪ  ಒಮ್ಮೆ ಮಾತ್ರ ಸಚಿವರಾಗಿದ್ದು ಕ್ಷೇತ್ರದಿಂದ  ಶಾಸಕರಾಗಿ ಆಯ್ಕೆಗೊಂಡಿರುವ ಡಾ. ಕೆ ಸುಧಾಕರ್ ಮಾತ್ರ ಎರಡನೇ ಬಾರಿಗೆ ಮಂತ್ರಿಯಾದ ಕೀರ್ತಿಗೆ ಪಾತ್ರರಾಗಿದ್ದಾರೆ. 1980 ದಶಕದಲ್ಲಿ  ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಸರ್ಕಾರದಲ್ಲಿ ಶಾಸಕರಾಗಿದ್ದ ರೇಣುಕಾ ರಾಜೇಂದ್ರನ್  ಯುವಜನ ಸಬಲೀಕರಣ ಸಚಿವರಾಗಿದ್ದರು. 

ಜನತಾ ಪಕ್ಷದ ರಾಮಕೃಷ್ಣ ಹೆಗಡೆ  ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಮುನಿಯಪ್ಪ 1998ರ ಸಂದರ್ಭದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

Latest Videos
Follow Us:
Download App:
  • android
  • ios