ಬೆಳಗಾವಿ(ಆ.28): ಯಡಿಯೂರಪ್ಪ ಮೂರ್ಖ, ಸಾರಿ, ಸಾರಿ.. ಈಶ್ವರಪ್ಪ ಮೂರ್ಖ. ಈಶ್ವರಪ್ಪ ಅವರಿಗೆ ನಾಲಿಗೆ ಮತ್ತು ಬ್ರೈನ್‌ಗೆ ಲಿಂಕ್‌ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾತನಾಡಿದ್ದಾರೆ. ಆಪರೇಶನ್ ಕಮಲದ ಜನಕ ಸಿದ್ದರಾಮಯ್ಯ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

'ಈಶ್ವರಪ್ಪಗೆ ಡಿಸಿಎಂ ಹುದ್ದೆ ನೀಡದಿದ್ದರೆ ಬಿಜೆಪಿಗೆ ಭಾರಿ ಹೊಡೆತ'

ಸರ್ಕಾರದ ಬಗ್ಗೆ ಮಾತನಾಡಿದ ಅವರು, 'ಜನರ ನಿಜವಾದ ಸಮಸ್ಯಗಳ ಬಗ್ಗೆ ಈ ರಾಜ್ಯ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಯಾರನ್ನಾದರೂ ಡಿಸಿಎಂ ಮಾಡಿಕೊಳ್ಳಲಿ. ನಾವು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡೋದು. ಯಡಿಯೂರಪ್ಪ ಪ್ರವಾಹ ಇರುವಾಗ ದಿಲ್ಲಿ, ಬೆಂಗಳೂರು ಅಲೆದಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಆಡಳಿತ ಅಮಿತ್ ಶಾ ಕೈಯಲ್ಲಿದೆ:

ಅಮಿತ್ ಶಾ ಯಡಿಯೂರಪ್ಪ ಅವರಿಗೆ ಭೇಟಿಗೆ ಅವಕಾಶ ಕೊಡಲ್ಲ. ರಾಜ್ಯದ ಆಡಳಿತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೈಯಲ್ಲಿದೆ. ಬಿಜೆಪಿ ಅವರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇಗ ನಡಿದಿರೋದೇನು ಎಂದು ಪ್ರಶ್ನಿಸಿದ್ದಾರೆ. ತಮಿಳುನಾಡು ಮಾದರಿಯಲ್ಲಿ ಕೊಟ್ಟಿದ್ದು 129 ಕೋಟಿ. ಅದರಂತೆ ರಾಜ್ಯಕ್ಕೆ ಕೊಟ್ಟಿದೆ. ಪ್ರವಾಹಕ್ಕೋಸ್ಕರ ಕೇಂದ್ರದಿಂದ ಇವರುಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದರು.

ಸಂಸದರು ಏನ್ಮಾಡ್ತಿದ್ದಾರೆ:

 25 ಜನ ಸಂಸದರು, ಎನು ಮಾಡುತ್ತಿದ್ದಾರೆ..? ನಮ್ಮ ಸಂಸದರು ಕಾಟಾಚಾರದ ಭೇಟಿ ನಿಡುತ್ತಿದ್ದಾರೆ. ರಾಜ್ಯಕ್ಕೆ ಎಕ್ಸಪರ್ಟ್ ಟಿಮ್ ಬರಬೇಕು ಅಂತ ಏನಿಲ್ಲ, ಇಗ ಮಾಡಿರುವ ಟಿಮ್ ಗಳ ವರದಿಯನ್ನ ಇಟ್ಟುಕ್ಕೊಂಡು‌ ಕೇಂದ್ರ ಪರಿಹಾರ ಕೊಡಬೇಕು ಎಂದರು.

'ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ಕಂಡರು': ಸಿದ್ದು ಸಿಡಿಮಿಡಿ..!

ಮದ್ಯಂತರ ಚುಣಾವನೆ ಬರಬೇಕಂತೆನಿಲ್ಲ. ಕುದುರೆ ವ್ಯಾಪಾರ ಮಾಡಿ ವಾಮ ಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದವರು. ಬಿಜೆಪಿ ಸಾಂದರ್ಭಿಕ ಶಿಶುವಾಗಿದೆ ಎಂದರು. ಅನರ್ಹ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶಾಸಕರಿಗೆ ತಕ್ಕ ಪಾಠ ಆಗಲಿ ಎಂದು ಅನರ್ಹ ಮಾಡಿದ್ದು. ಮುಂದಿನ ದಿನಗಳಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.