ಸಕ್ರೇಬೈಲಿನಲ್ಲಿ ಮಾವುತನನ್ನು ಅಟ್ಟಾಡಿಸಿದ ಪುಂಡಾನೆ: ಕೂದಲೆಳೆ ಅಂತರದಲ್ಲಿ ಮಾವುತ ಪಾರು
ಸಕ್ರೇಬೈಲಿನ ಸಕ್ರೇಬೈಲ್‌ನ ಪುಂಡಾನೆಯಂದೇ ಖ್ಯಾತಿ ಪಡೆದಿರುವ ಮಣಿಕಂಠ ಕಾಡಿಗೆ ಅಟ್ಟುವ ಸಮಯದಲ್ಲಿ ಹಠಾತ್ ಮಾವುತನ ಮೇಲೆ ದಾಳಿಗೆ ಯತ್ನಿಸಿದ್ದು, ಮಾವುತ ಆಶ್ಚರ್ಯಕರ ರೀತಿಯಲ್ಲಿ ಸ್ಕೂಟರ್ ರಸ್ತೆಯಲ್ಲೇ ಬಿಟ್ಟು ಓಡಿ ಹೋಗಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಶಿವಮೊಗ್ಗ (ಸೆ.13): ಸಕ್ರೇಬೈಲಿನ ಸಕ್ರೇಬೈಲ್‌ನ ಪುಂಡಾನೆಯಂದೇ ಖ್ಯಾತಿ ಪಡೆದಿರುವ ಮಣಿಕಂಠ ಕಾಡಿಗೆ ಅಟ್ಟುವ ಸಮಯದಲ್ಲಿ ಹಠಾತ್ ಮಾವುತನ ಮೇಲೆ ದಾಳಿಗೆ ಯತ್ನಿಸಿದ್ದು, ಮಾವುತ ಆಶ್ಚರ್ಯಕರ ರೀತಿಯಲ್ಲಿ ಸ್ಕೂಟರ್ ರಸ್ತೆಯಲ್ಲೇ ಬಿಟ್ಟು ಓಡಿ ಹೋಗಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಮಣಿಕಂಠ ಆನೆ ಮಾವುತನನ್ನು ಅಟ್ಟಾಡಿಸಿಕೊಂಡು ಬರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ವಲ್ಪ ಸಮಯ ಸಕ್ರೆಬೈಲಲ್ಲಿ ಆತಂಕ ಸೃಷ್ಟಿಯಾಗಿ ಮರೆಯಾಗಿದೆ. ಕಾವಾಡಿ ಇಮ್ರಾನ್ ಕಾಡಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾವುತ ಕಲೀಲ್ ಮಣಿಕಂಠನನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದರು. ಹಠಾತ್ ಸಿಟ್ಟಿಗೆದ್ದ ಮಣಿಕಂಠ ಆನೆ ಹಿಂದೆ ಬರುತ್ತಿದ್ದ ಮಾವುತನನ್ನು ಏಕಾಏಕಿ ಅಟ್ಟಾಡಿಸಿಕೊಂಡು ಹೋಗಿದೆ. ತಕ್ಷಣ ಮಾವುತ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದಾನೆ.
Mysuru Dasara 2022 : ಗಜಪಡೆಗಳಿಗೆ ಸಿಡಿಮದ್ದು ತಾಲೀಮಿನ ಹೈಲೈಟ್ಸ್
ಸಕ್ರೇಬೈಲು ಆನೆ ಬಿಡಾರದಲ್ಲೇ ಇರುತ್ತಿದ್ದ ಈ ಪುಂಡಾನೆ ಮಣಿಕಂಠನನ್ನು ಕಾಡಿಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆ ಶನಿವಾರ ಆನೆಯನ್ನು ಮಾಮೂಲಿ ಜನ ಸಂಚಾರ ಮಾಡುವ ರಸ್ತೆ ಮಾರ್ಗವಾಗಿಯೇ ಕರೆದುಕೊಂಡು ಹೋಗಲಾಗುತ್ತಿತ್ತು. ಎದುರಿನಿಂದ, ಪಕ್ಷದಿಂದ ವಾಹನಗಳು ಸಂಚಾರ ಮಾಡುತ್ತಿದ್ದರೂ ತಲೆಕಡೆಸಿಕೊಳ್ಳದೇ ಆನೆ ಸಂಚಾರ ಮಾಡುತ್ತಿತ್ತು. ಆದರೆ, ಒಂದು ಹಂತದಲ್ಲಿ ಆನೆಯು ರಸ್ತೆಯ ಇನ್ನೊಂದು ಭಾಗದಲ್ಲಿ ಹೋಗಿ ನಿಂತಿದೆ. ಅಲ್ಲಿಂದ ಮುಂದೆ ಹೋಗಲು ನಿರಾಕರಿಸಿದೆ. ಪುನಃ ಬಂದ ದಾರಿಗೆ ವಾಪಸಾಗಿದೆ. ಬಂದಿದ್ದೆ ಸ್ಕೂಟರ್‌ನಲ್ಲಿದ್ದ ಇನ್ನೊಬ್ಬ ಮಾವುತನತ್ತ ಓಡಿ ಬಂದು ದಾಳಿಗೆ ಯತ್ನಿಸಿದೆ. ಆಗ ಮಾವುತ ರಸ್ತೆಯಲ್ಲೇ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆನೆ ಆತ ಹೋದ ಕಡೆಗಳಲ್ಲೆಲ್ಲ ಅಟ್ಟಾಡಿಸಿಕೊಂಡು ಹೋಗಿದೆ.
ಈ ಇದೇ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ಕಾರೊಂದು ನಿಂತದ್ದು, ಕಾರಿನಲ್ಲಿ ಮಹಿಳೆ ಸೇರಿ ಇಬ್ಬರು ವ್ಯಕ್ತಿಗಳಿದ್ದರು. ಆನೆಯನ್ನು ಕಂಡು ಜೀವ ಕೈಯಲ್ಲಿ ಹಿಡಿದು ಕುಳಿತಿದ್ದರು. ಅಕಸ್ಮಾತ್ ಮಣಿಕಂಠ ಕಾರಿನ ಮೇಲೆ ಎರಗಿದ್ದರೆ ಸಾವು ನೋವು ಆಗುವ ಸಾಧ್ಯತೆ ಹೆಚ್ಚಿತ್ತು. ಆನೆ ಬಿಡಾರದೊಳಗು ಮಣಿಕಂಠ ಮಾವುತನ ಮೇಲೆ ದಾಳಿಗೆ ಮುಂದಾಗಿದೆ. ಈ ಸಂದರ್ಭದಲ್ಲಿ ಬೇರೆ ಆನೆಗಳ ಸಹಾಯದಿಂದ ಮಣಿಕಂಠನನ್ನು ಸಿಬ್ಬಂದಿ ಸೆರೆ ಹಿಡಿದ್ದಾರೆ. ಮಣಿಕಂಠ ಆನೆ ಈ ರೀತಿಯಾಗಿ ವರ್ತಿಸಲು ಕಾರಣ ಏನೂ, ಹಿಂಬಾಲಿಸಿಕೊಂಡು ಬರುತ್ತಿದ್ದ ಮಾವುತನ ಮೇಲೆ ಏಕಾಏಕಿ ದಾಳಿಗೆ ಮುಂದಾಗಿದ್ದು ಏಕೆ ಎಂಬ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಯಿ ಆನೆ ನಿಧನ, ದನದ ಹಿಂಡಿನ ಜೊತೆ ಬಂದ ಅನಾಥವಾದ ಮರಿ ಆನೆ ರಕ್ಷಣೆ
ನಾಲ್ಕು ಬಾರಿ ದಾಳಿಗೆ ಯತ್ನ: ಮಣಿಕಂಠ ಆನೆ ಪುಂಡಾನೆಯಂದೇ ಕುಖ್ಯಾತಿ ಪಡೆದಿದೆ. ಆಕ್ರಮಣಕಾರಿ ಬುದ್ಧಿಯನ್ನು ಹೊಂದಿರುವ ಮಣಿಕಂಠ ಈವೆರೆಗೆ ನಾಲ್ಕು ಬಾರಿ ಮವುತ, ಕಾವಾಡಿಗಳ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಸಿಬ್ಬಂದಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆ. ಈ ಹಿಂದೆ ತುಂಗಾ ನದಿ ತೀರದಲ್ಲಿಯೇ ಮಾವುತನ ಮೇಲೆ ದಾಳಿಗೆ ಮಣಿಕಂಠ ಮುಂದಾಗಿದ್ದ ಎಂದು ತಿಳಿದು ಬಂದಿದೆ.