Asianet Suvarna News Asianet Suvarna News

ಪೋಕ್ಸೋ ಕೇಸಲ್ಲಿ ಬಂಧಿತ ಪತಿ ಪರ ಸತ್ಯ ಹೇಳಲು ಬಂದ ಗರ್ಭಿಣಿಯನ್ನು ಆಸ್ಪತ್ರೆಗೆ ಕಳುಹಿಸಿದ ಜಡ್ಜ್!

ಬಾಲ್ಯವಿವಾಹವಾಗಿ, ಗರ್ಭಿಣಿಯಾಗಿದ್ದ ಮಹಿಳೆಯ ಪತಿಯನ್ನು ಆಸ್ಪತ್ರೆ ದೂರಿನ ಆಧಾರದಲ್ಲಿ ಬಂಧಿಸಿದ್ದು, ಸತ್ಯ ಹೇಳಲು ಕೋರ್ಟಿಗೆ ಬಂದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಬೆಂಗಳೂರು ಹೈ ಕೋರ್ಟ್ ಜಡ್ಜ್ ಸೂಚಿಸಿದ್ದಾರೆ.

judge sent the pregnant woman to the hospital who came to the court  in bengaluru grg
Author
First Published Jul 11, 2024, 11:52 AM IST | Last Updated Jul 11, 2024, 12:34 PM IST

ವೆಂಕಟೇಶ್ ಕಲಿಪಿ 

ಬೆಂಗಳೂರು(ಜು.11):  ಅಪ್ರಾಪ್ತೆಯಾಗಿದ್ದ ತನ್ನನ್ನು ವಿವಾಹವಾದ ಕಾರಣ ಅತ್ಯಾಚಾರ, ಅಪಹರಣ ಆರೋಪ ಮತ್ತು ಪೋಕೋ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಪತಿಯ ಪರ 'ಸತ್ಯಾಂಶ' ನುಡಿಯಲು ಬಂದ ತುಂಬು ಗರ್ಭಿಣಿಯನ್ನು (ಸಂತ್ರಸ್ತೆ) ಕಂಡು ಆಘಾತ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನೆಮ್ಮದಿಯಿಂದ ಮಗುವಿಗೆ ಜನ್ಮ ನೀಡಲು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ ಅಪರೂಪದ ಘಟನೆ ಹೈಕೋರ್ಟ್‌ಲ್ಲಿ ಇತ್ತೀಚೆಗೆ ನಡೆದಿದೆ.

ನ್ಯಾಯಮೂರ್ತಿಗಳ ಸೂಚನೆಯಂತೆ ಗರ್ಭಿಣಿಯನ್ನು ಪೋಷಕರು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಬಂಧನಕ್ಕೆ ಒಳಗಾಗಿರುವ ಸಂತ್ರಸ್ತೆಯ ಪತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಪ್ರಾಪ್ತಿಯನ್ನು ಮದುವೆಯಾಗಿ, ಗರ್ಭಿಣಿ ಮಾಡಿದ ಕಾರಣಕ್ಕೆ ವಿವಿಧ ಆರೋಪದ ಮೇಲೆ ಬಾಲ್ಯ ವಿವಾಹ ತಡೆ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ನಗರದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಬಂಧಿತಸಲ್ಲಿಸಿದ್ದ ಅರ್ಜಿ ಹೈಕೋಟ್ ೯ನಲ್ಲಿ ವಿಚಾರಣೆಗೆ ಬಂದಾಗ ಸಂತ್ರಸ್ತೆ ಸಹ ಹಾಜರಾಗಿದ್ದರು.

ದ್ವೇಷ ಭಾಷಣ: ಯತ್ನಾಳ, ಶೋಭಾ ವಿರುದ್ಧದ ಅರ್ಜಿ ವಜಾ, ಇದು ರಾಜಕೀಯ ಉದ್ದೇಶ ಎಂದ ಹೈಕೋರ್ಟ್‌

ಈ ನಡುವೆ ಪ್ರಕರಣದಲ್ಲಿ ತಾವು ಹೇಳಿದ ಮಾದರಿಯಲ್ಲಿಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸ್ವ ಇಚ್ಛೆ ಹೇಳಿಕೆ ನೀಡುವಂತೆ ಸಂತ್ರಸ್ತೆಗೆ (ಅರ್ಜಿದಾರನ ಪತ್ನಿ) ಪೊಲೀಸರು ಒತ್ತಡ ಹೇರುತ್ತಿದ್ದಾರೆ ಆರೋಪಿಸಿದ್ದರು. ಈ ಕುರಿತು ಸತ್ಯಾಂಶ ನುಡಿಯಲು ಸಂತ್ರಸ್ತೆಯನ್ನು ಕೋರ್ಟ್‌ ಕರೆ ತರಲಾಗಿತ್ತು. ಸಂತ್ರಸ್ತೆಯು 9 ತಿಂಗಳ ತುಂಬು ಗರ್ಭಿಣಿ ಯಾಗಿದ್ದು, ಒಂದೆರಡು ದಿನದಲ್ಲೇ ಹರಿಗೆ ಯಾಗುವುದಾಗಿ ವೈದ್ಯರು ತಿಳಿಸಿರುವ ವಿಚಾರ ನ್ಯಾ.ಎಂ.ನಾಗಪ್ರಸನ್ನ ಅಭಿಯೋಜಕರಿಗೆ, ಇಲ್ಲದ ಸಮಸ್ಯೆ ಅವರು, ಪೊಲೀಸರ ಪರ ಹಾಜರಿದ್ದ ಸರ್ಕಾರಿ ಸೃಷ್ಟಿಸಬಾರದು. ನಿಜವಾಗಿಯೂ ಅಪರಾಧ ಕೃತ್ಯ ನಡೆದಿದ್ದರೆ ಕ್ರಮ ಜರುಗಿಸಬೇಕು. ಸುಮ್ಮನೆ ಆರೋಪ ಮಾಡಬಾರದು. ಸ್ವ ಇಚ್ಛೆ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ದಾಖಲಿಸಲಿ, ಸಂತ್ರಸ್ತೆ ಏನು ದಾಖಲಿಸಬೇಕೋ, ಅದನ್ನು ಹೇಳುತ್ತಾರೆ. ಆದರೆ, ಸಂತ್ರಸ್ತೆಗೆ ಎರಡು ಮೂರು ದಿನದಲ್ಲಿ ಹೆರಿಗೆಯಾಗುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಹಂತದಲ್ಲಿ ತುಂಬು ಗರ್ಭಿಣಿಗೆ ತೊಂದರೆ ನೀಡಿದರೆ ಹೇಗೆ? ಆಕೆಯನ್ನು ಏಕೆ ಕರೆದು ಕೊಂಡು ಬರಲಾಗಿದೆ ಈ ಓಡಾಟದಿಂದ ಮಗುವಿಗೆ ಏನಾಗಬೇಕು ಪ್ರಶ್ನಿಸಿದರು.

ಅನ್ನಭಾಗ್ಯ ಅಕ್ಕಿ ಹೋಟೆಲ್‌ಗೆ ಮಾರುವ ಅಯೋಗ್ಯರನ್ನು ಶಿಕ್ಷಿಸಿ: ಹೈಕೋರ್ಟ್

ನಂತರ ಕೂಡಲೇ ಸಂತ್ರಸ್ತೆಯನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಬೇಕು. ಹೆರಿಗೆ ನಂತರ ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್ ಮುಂದೆ ಸ್ವ ಇಚ್ಛೆ ಹೇಳಿಕೆ ನೀಡಬೇಕು. ಹೆರಿಗೆ ವರದಿ ಮತ್ತು ಡಿಎನ್ಎ ವರದಿಯನ್ನು ಮುಂದಿನ ವಿಚಾರಣೆ ವೇಳೆಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿಗಳು ಮುಂದೂಡಿದರು.

ಪ್ರಕರಣದ ವಿವರ

ಅರ್ಜಿದಾರ ಮತ್ತು ಸಂತ್ರಸ್ತೆ 1 ವರ್ಷದ ಹಿಂದೆ ಪೋಷಕರು ನಿಶ್ಚಯಿಸಿದಂತೆ ವಿವಾಹವಾಗಿದ್ದರು. ಆ ವೇಳೆ ಸಂತ್ರಸ್ತೆಗೆ 17 ವರ್ಷ 11 ತಿಂಗಳಾಗಿತ್ತು. ಸದ್ಯ 9 ತಿಂಗಳ ತುಂಬು ಗರ್ಭಿಣಿಯಾಗಿರುವ ಸಂತ್ರಸ್ತೆ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದರು. 2024ರ ಜೂ.10 ರಂದು ಆಕೆಯನ್ನು ತಪಾಸಣೆ ವೇಳೆ ವೈದ್ಯರಿಗೆ ನೀಡಿದ್ದ ಆಧಾ‌ರ್ ಕಾರ್ಡ್‌ ನಲ್ಲಿ ನಮೂದಿಸಿದ್ದ ವಯಸ್ಸಿನ ಪ್ರಕಾರ ಮದುವೆ ಯಾದಾಗ ಸಂತ್ರಸ್ತೆ ಅಪ್ರಾಪ್ತಯಾಗಿದ್ದರು ಎಂಬುದು ಮನ ಗಂಡ ವೈದ್ಯರು ಪೊಲೀಸರಿಗೆ ತಿಳಿಸಿದ್ದರು. ಆಸ್ಪತ್ರೆಗೆ ತೆರಳಿದ್ದ ಪೊಲೀಸರು ವೈದ್ಯರ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ನಂತರ ದೂರು ದಾಖಲಿಸಿ ಆಕೆಯ ಪತಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ಪತಿ ಕೇಸ್ ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದು ಇತ್ತೀಚೆಗೆ ವಿಚಾರಣೆಗೆ ಬಂದಿತ್ತು.

Latest Videos
Follow Us:
Download App:
  • android
  • ios