Chikkamagaluru: ಪತ್ರಕರ್ತರು ಪೂರ್ವಗ್ರಹ ಪೀಡಿತರಾಗದಿರಲಿ: ಶೋಭಾ ಕರಂದ್ಲಾಜೆ
ಪತ್ರಕರ್ತರು ಯಾವುದೇ ಪಕ್ಷಕ್ಕೆ ಸೀಮಿತವಾಗದಿದ್ದರೆ ನಿಷ್ಪಕ್ಷವಾಗಿ ಸಮಾಜದ ಓರೆ ಕೋರೆಗಳನ್ನು ಬರೆಯುತ್ತಾರೆ. ಪ್ರಜಾ ಪ್ರಭುತ್ವದಲ್ಲಿ ಪತ್ರಿಕೆಗೆ ಮಹತ್ವದ ಸ್ಥಾನವಿರುತ್ತದೆ. ಪತ್ರಕರ್ತರು ಪೂರ್ವಾಗ್ರಹ ಪೀಡಿತರಾಗಿ ವರದಿ ಮಾಡಬಾರದು ಎಂದು ಸಂಸದೆ ಶೋಭ ಕರಾಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅಜ್ಜಂಪುರ (ಜ.13) : ಪತ್ರಕರ್ತರು ಯಾವುದೇ ಪಕ್ಷಕ್ಕೆ ಸೀಮಿತವಾಗದಿದ್ದರೆ ನಿಷ್ಪಕ್ಷವಾಗಿ ಸಮಾಜದ ಓರೆ ಕೋರೆಗಳನ್ನು ಬರೆಯುತ್ತಾರೆ. ಪ್ರಜಾ ಪ್ರಭುತ್ವದಲ್ಲಿ ಪತ್ರಿಕೆಗೆ ಮಹತ್ವದ ಸ್ಥಾನವಿರುತ್ತದೆ. ಪತ್ರಕರ್ತರು ಪೂರ್ವಾಗ್ರಹ ಪೀಡಿತರಾಗಿ ವರದಿ ಮಾಡಬಾರದು ಎಂದು ಸಂಸದೆ ಶೋಭ ಕರಾಂದ್ಲಾಜೆ ಅಭಿಪ್ರಾಯ ಪಟ್ಟರು.
ಅಜ್ಜಂಪುರ ತಾಲೂಕು ಪತ್ರಕರ್ತರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು. ನಮ್ಮಿಂದ ಆದ ಈ ಕಾರ್ಯ ಪೂರ್ಣಗೊಂಡು, ಭ ವನದ ಉದ್ಘಾಟನೆಗೂ ನಾವೆ ಬರುವಂತಾಗಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಇದರ ನಿರ್ಮಾಣಕ್ಕೆ ನಮ್ಮ ಅನುದಾನದಲ್ಲಿ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಜನರಿಗೆ ಕೇಂದ್ರ,ರಾಜ್ಯ ಸರ್ಕಾರದ ಸಾಧನೆ ತಿಳಿಸಲು ಶೋಭಾ ಕರಂದ್ಲಾಜೆ ಕರೆ
ಜಿಲ್ಲಾ ಅಧ್ಯಕ್ಷ ರಾಜಶೇಖರ್ ಮಾತಣಾಡಿ, ಪತ್ರಕರ್ತರ ಭವನ ಸಾರ್ವಜನಿಕವಾಗಿದ್ದು ರಾಜಕಾರಣಿಗಳ ಸಂಘಸಂಸ್ಥೆಗಳ ವಿಷಯಗಳನ್ನು ಹಂಚಿಕೊಳ್ಳುವ ಒಂದು ವೇದಿಕೆಯಾಗುತ್ತದೆ. ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದಿದ್ದು ದಾನಿಗಳ ಸಹಕಾರ ಬೇಕೆಂದು ಕೋರಿದರು. ಶಾಸಕರಾದ ಡಿ.ಎಸ್.ಸುರೇಶ್ ಬರುವ ಪೆಬ್ರವರಿಯಲ್ಲಿ ಭವನ ನಿರ್ಮಾಣಕ್ಕೆ ಸಾಕಷ್ಟುಅನುದಾನ ನೀಡುತ್ತೇನೆ ಎಂದು ವಾಗ್ದಾನ ನೀಡಿದರು.
ಅಜ್ಜಂಪುರ ಪತ್ರಕರ್ತರ ಸಂಘದ ಅಧ್ಯಕ್ಷ ಎಂಸಿ.ಮಂಜುನಾಥ್ ರವರು ಸಂಸದರು ಹಾಗೂ ಶಾಸಕರಿಗೆ ಮನವಿ ಅರ್ಪಿಸಿದರು. 2011ನೇ ಸಾಲಿನಲ್ಲಿ ಅಜ್ಜಂಪುರ ಗ್ರಾಮ ಪಂಚಾಯ್ತಿಯ ವರು ಈ ಸೈಟನ್ನು ನೀಡಿದ್ದರು. ಅದಕ್ಕೆ ಅಂದಿನ ಅಧ್ಯಕ್ಷರಾದ ಅನ್ನಪೂರ್ಣಮ್ಮ, ಪ್ರದೀಪ್‌ಕುಮಾರ್, ಜೈಯಣ್ಣ ರವರಿಗೆ ಗೌರವಿಸಲಾಯಿತು. ಉಳಿದ ಆ ಸಾಲಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಚೀನಾ ವಶದಲ್ಲಿರುವ ವ್ಯಾಪಾರ ಸ್ಥಾನ ಭಾರತ ಪಡೆಯಬೇಕು: ಸಚಿವೆ ಶೋಭಾ
ತರೀಕೆರೆ ತಾಲೂಕು ಅಧ್ಯಕ್ಷರು ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಅಜ್ಜಂಪುರ ಹಿರಿಯ ಪತ್ರಕರ್ತರಾದ ಹನುಮಂತರಾವ್, ಪಿ.ಜಿ.ಶ್ರೀನಿವಾಸ್ ಗುಪ್ತ, ಕೆ.ರಾಜೇಂದ್ರ, ಎನ್ ವೆಂಕಟೇಶ್‌ನ್ನು ಅನೇಕ ಪತ್ರಕರ್ತರು ಈ ಕಾರ್ಯಕ್ರಮದಲ್ಲಿ ಆಗಮಿಸಿ ಶುಭಕೋರಿದರು. ಕಾಂಗ್ರೆಸ್ ಪಕ್ಷದ ಕೆ.ಆರ್.ಧೃವಕುಮಾರ್, ತಾಳಿಕಟ್ಟೆಲೋಕೇಶ್. ಓ.ಜಿ ಶಶಾಂಕ್ ಶುಭ ಕೋರಿದರು. ಪತ್ರಕರ್ತ ಜೆ.ಓ ಉಮೇಶ್ ಸ್ವಾಗತಿಸಿದರು. ಎ.ಎಲ್ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.