Asianet Suvarna News Asianet Suvarna News

ಚೀನಾ ವಶದಲ್ಲಿರುವ ವ್ಯಾಪಾರ ಸ್ಥಾನ ಭಾರತ ಪಡೆಯಬೇಕು: ಸಚಿವೆ ಶೋಭಾ

ನಮ್ಮ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಪಕ್ಕದ ಚೀನಾ ದೇಶದ ಕೈವಶದಲ್ಲಿದ್ದು, ನಾವು ನೀವು ಮನಸ್ಸು ಮಾಡಿದರೆ ಅದನ್ನು ವಾಪಸ್ಸು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

India should be at the top of the business world says shobha karandlaje rav
Author
First Published Jan 9, 2023, 12:29 PM IST

ಬೆಂಗಳೂರು ಪೀಣ್ಯ(ಜ.9): ನಮ್ಮ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಪಕ್ಕದ ಚೀನಾ ದೇಶದ ಕೈವಶದಲ್ಲಿದ್ದು, ನಾವು ನೀವು ಮನಸ್ಸು ಮಾಡಿದರೆ ಅದನ್ನು ವಾಪಸ್ಸು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ(Dasarahalli Assembly Constituency)ದಲ್ಲಿ ನಡೆದ ಸ್ವದೇಶಿ ಮೇಳ(swadeshi mela)ದ ಕೊನೆಯ ದಿನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಾವು ಈಗಾಗಲೇ 75ನೇ ಸುವರ್ಣ ಮಹೋತ್ಸವ(Suvarna mahotsav)ವನ್ನು ಆಚರಸಿಕೊಂಡಿದ್ದೇವೆ. ಭಾರತ ನೂರನೇ ವರ್ಷದ ಆಚರಣೆ ಮಾಡುವಷ್ಟರಲ್ಲಿ ಒಪನ್‌ ಫಾರ್‌ ಗ್ಲೋಬಲ್‌(Open for globle) ಮಾಡಲು ನಾವೇನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು ಅದಕ್ಕೆ ಪೂರಕವೆಂಬಂತೆ ಆರ್ಥಿಕತೆ, ಆಹಾರ ಉತ್ಪಾದನೆ, ತಂತ್ರಜ್ಞಾನದಲ್ಲಿ ನಾವು ನಂಬರ್‌ ಒನ್‌ ಸ್ಥಾನಕ್ಕೆ ಹೋಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಸ್ವದೇಶಿ ಮೇಳದಲ್ಲಿ ಮಾಜಿ ಶಾಸಕ ಎಸ್‌.ಮುನಿರಾಜು, ಸ್ವದೇಶಿ ಜಾಗರಣಾ ಮಂಚ್‌ ರಾಷ್ಟ್ರೀಯ ಸಂಯೋಜಕ ಆರ್‌.ಸುಂದರಂ, ಸ್ವದೇಶೀ ಮೇಳ ಸಂಯೋಜಕರಾದ ಭರತ್‌ ಸೌಂದರ್ಯ, ವಸಂತಕುಮಾರ್‌, ಕೆ.ಜಗದೀಶ್‌, ಎನ್‌.ಲೋಕೇಶ್‌ ಗೌಡ ಇದ್ದರು.

 

ನರೇಂದ್ರ ಮೋದಿ ಸರ್ಕಾರದ ಹಣ ಸಿದ್ದರಾಮಯ್ಯರದ್ದು ಹೆಸರು: ಶೋಭಾ ಕೆರಂದ್ಲಾಜೆ ಕಿಡಿ

Follow Us:
Download App:
  • android
  • ios