Asianet Suvarna News Asianet Suvarna News

ಉಘೇ ವೀರಭೂಮಿಯ ಸಮರಕಲಿಗಳ 'ಸಮರ ಭೈರವಿ' ಬುಕ್ ಬಿಡುಗಡೆ

ಸೈನ್ಯ, ಸೈನಿಕ, ಸಮರಗಳ ಕುರಿತ ರೋಚಕ ಸಂಗತಿಗಳಳನ್ನು ಒಳಗೊಂಡಿರುವ "ಸಮರ ಭೈರವಿ" ತೆರೆಗೆ ಬರಲು ಸಜ್ಜಾಗಿದೆ. ನಮ್ಮ ಸೈನ್ಯ ಮತ್ತು ಸೈನಿಕರ ಹೋರಾಟದ ಸಾಹಸಗಾಥೆಯನ್ನ ಅಂಕಣಕಾರ ಸಂತೋಷ್ ತಮ್ಮಯ್ಯ ಅವರು ಹೊತ್ತು ತಂದಿದ್ದಾರೆ.

journalist santosh thammaiah written Smara Bhairavi Book to be released On August 24th In Bengaluru
Author
Bengaluru, First Published Aug 23, 2019, 3:08 PM IST
  • Facebook
  • Twitter
  • Whatsapp

ಬೆಂಗಳೂರು, (ಆ.23): ನಮ್ಮ ಸೈನ್ಯ ಮತ್ತು ಸೈನಿಕರ ಹೋರಾಟದ ಸಾಹಸಗಾಥೆಯನ್ನ ಅಂಕಣಕಾರ ಸಂತೋಷ್ ಸಂತೋಷ್ ತಮ್ಮಯ್ಯ ಕಟ್ಟಿಕೊಡುತ್ತಿದ್ದಾರೆ. ಅದು "ಸಮರ ಭೈರವಿ"  ಎಂಬ ಪುಸ್ತಕದ ಮೂಲಕ. 

ಇತ್ತೀಚಿನ ದಿನಗಳಲ್ಲಿ ಭೈರಪ್ಪನವರ ಕೃತಿಗಳನ್ನ ಬಿಟ್ಟರೆ, ಸಹನಾ ವಿಜಯ ಕುಮಾರ್ ಅವರ "ಕಶೀರ" ಕಾದಂಬರಿಯಾಗಿತ್ತು. ಇದೀಗ 'ಸಮರ ಭೈರವಿ'.

ಹೌದು...ಸಂತೋಷ್ ತಮ್ಮಯ್ಯ ಅವರು ಸಮರಕಲಿಗಳ ಕುರಿತು ಬರೆದಿರುವ 'ಸಮರ ಭೈರವಿ' ಪುಸ್ತಕ ಇದೇ ಆಗಸ್ಟ್ 24 ರಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. 

ಸಂತೋಷ್ ತಮ್ಮಯ್ಯ ಅವರ 'ಉಘೇ ವೀರಭೂಮಿಗೆ' ಅಂಕಣ ಬರಹ ಅಪಾರ ಜನಪ್ರಿಯವಾಗಿದೆ. ಇದೀಗ  ಸಮರ ಭೈರವಿ ಪುಸ್ತಕದಲ್ಲಿ ಸೈನ್ಯ, ಸೈನಿಕ, ಸಮರಗಳ ಕುರಿತ ರೋಚಕ, ಭಾರತೀಯರು ಹೆಮ್ಮೆ ಪಡುವ ಸಂಗತಿಗಳನ್ನು ತಮ್ಮ ಹರಿತ ಲೇಖನಿಯಲ್ಲಿ, ಭಾವನಾತ್ಮಕ, ಸಂವೇದನಾತ್ಮಕ ಶೈಲಿಯಲ್ಲಿ ಓದುಗನ ಹೃದಯಕ್ಕೆ ತಲುಪುವಂತೆ ಬರೆದಿದ್ದಾರೆ.  

ಕೇಂದ್ರ ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬೆನ್ನುಡಿ ಇರುವ ಈ ಪುಸ್ತಕವನ್ನು ಕೇಂದ್ರ ಸಚಿವ ಹಾಗೂ ಜನರಲ್ ನಿವೃತ್ತ ವಿ.ಕೆ ಸಿಂಗ್ ಬಿಡುಗಡೆ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಮುಖ್ಯ ಅತಿಥಿಗಳಾಗಿದ್ದು, ಸುವರ್ಣ ನ್ಯೂಸ್ ನ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.

ಇನ್ನು ಲೆಫ್ಟಿನೆಂಟ್ ಕರ್ನಲ್ ಪಿ.ಎಸ್ ಗಣಪತಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾರ್ಯಕ್ರಮದ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಈ ಪುಸ್ತರ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ..ನಿಮ್ಮವರನ್ನು ಕರೆತನ್ನಿ.

Follow Us:
Download App:
  • android
  • ios