Asianet Suvarna News Asianet Suvarna News

ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಅವಹೇಳನ: ವರದಿಗಾರನ ಬಂಧನ

ವಿವಾಹಿತ ಮಹಿಳೆಯೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಾಕಿ, ಮಾನಹಾನಿ ಮಾಡಿದ ಹಿನ್ನೆಲೆಯಲ್ಲಿ ಕಾರ್ಕಳದ ಪತ್ರಿಕಾ ವರದಿಗಾರ ಸಂಪತ್‌ ನಾಯಕ್‌ ಎಂಬಾತನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

Journalist arrested for humiliating woman in social media
Author
Bangalore, First Published Jun 2, 2020, 8:53 AM IST

ಉಡುಪಿ(ಜೂ 02): ವಿವಾಹಿತ ಮಹಿಳೆಯೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಾಕಿ, ಮಾನಹಾನಿ ಮಾಡಿದ ಹಿನ್ನೆಲೆಯಲ್ಲಿ ಕಾರ್ಕಳದ ಪತ್ರಿಕಾ ವರದಿಗಾರ ಸಂಪತ್‌ ನಾಯಕ್‌ ಎಂಬಾತನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳದ ಅನಂತಕೃಷ್ಣ ಶೆಣೈ ಎಂಬವರು ಈ ಕುರಿತು ದೂರು ನೀಡಿದ್ದು, ಮದುವೆಯಾಗಿ ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿರುವ ತಮ್ಮ ಮಗಳ ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಸರಿಸಿ, ತನ್ನ ಹಾಗೂ ಮಗಳ ಮಾನಹಾನಿ ಮಾಡಿದ್ದಾನೆ.

ಉದ್ಯೋಗಿಗಳನ್ನು ವಿಶೇಷ ವಿಮಾನ ಮೂಲಕ ದುಬೈನಿಂದ ಊರು ಸೇರಿಸಿದ ಮಾಲೀಕ

ಇದರಿಂದ ತನ್ನ ಮತ್ತು ತನ್ನ ಪತ್ನಿ ಮಕ್ಕಳಲ್ಲಿ ಮಾನಸಿಕ ಅಶಾಂತಿ ಉಂಟಾಗಿದೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಪತ್‌ ನಾಯಕ್‌ನನ್ನು ಬಂಧಿಸಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಹುದ್ದೆಯಿಂದ ವಜಾ

ಕಾರ್ಕಳ ಕನ್ನಡಪ್ರಭ ಬಿಡಿ ಸುದ್ದಿ ಸಂಗ್ರಾಹಕರಾಗಿದ್ದ ಸಂಪತ್‌ ನಾಯಕ್‌ ಅವರನ್ನು ಈ ಹುದ್ದೆಯಿಂದ ತಕ್ಷಣ ಜಾರಿಗೆ ಬರುವಂತೆ ವಜಾಗೊಳಿಸಲಾಗಿದ್ದು ಇನ್ನು ಮುಂದೆ ಪತ್ರಿಕೆಗೂ ಅವರಿಗೂ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ಪತ್ರಿಕೆಗೆ ಸಂಬಂಧಿಸಿ ಅವರೊಂದಿಗೆ ಯಾರಾದರೂ ವ್ಯವಹರಿಸಿದಲ್ಲಿ ಅದಕ್ಕೆ ಕನ್ನಡಪ್ರಭ ಆಡಳಿತ ಮಂಡಳಿ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ ಎಂದು ಕನ್ನಡಪ್ರಭ ವ್ಯವಸ್ಥಾಪಕರು ತಿಳಿಸಿದ್ದಾರೆ.

Follow Us:
Download App:
  • android
  • ios