ಸಾಲಿಗ್ರಾಮ ತಾಲೂಕಿನ ಹಳಿಯೂರು ಜಿಪಂ ಕ್ಷೇತ್ರದ ಸದಸ್ಯ ಸ್ಥಾನದ ಮೀಸಲಾತಿ ವಿಚಾರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಟಿಕೆಟ್‌ಗೆ ಬೇಡಿಕೆ ಇಟ್ಟ ಯುವ ಮುಖಂಡ ಟಿಕೆಟ್ ನೀಡಿದಲ್ಲಿ ಪಕ್ಷದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿಕೆ

ಕೆ.ಆರ್‌. ನಗರ (ಜು.16) : ಸಾಲಿಗ್ರಾಮ ತಾಲೂಕಿನ ಹಳಿಯೂರು ಜಿಪಂ ಕ್ಷೇತ್ರದ ಸದಸ್ಯ ಸ್ಥಾನದ ಮೀಸಲಾತಿ ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ನಾನು ಜೆಡಿಎಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಚುಂಚನಕಟ್ಟೆಹೋಬಳಿ ಯುವ ಜೆಡಿಎಸ್‌ ಮುಖಂಡ ಶ್ರೀರಾಮಪುರ ಸಂತೋಷ್‌ ಹೇಳಿದರು.

ಕುಪ್ಪೆ ಗ್ರಾಪಂ ಆವರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಗ್ರಾಪಂ ಸಿಬ್ಬಂದಿಗೆ ತಮ್ಮ ಜನ್ಮ ದಿನದ ಅಂಗವಾಗಿ ಆಹಾರದ ಕಿಟ್‌ಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು, ಶಾಸಕ ಸಾ.ರಾ. ಮಹೇಶ್‌ ಆಶೀರ್ವಾದದಿಂದ ಪಕ್ಷ ನನಗೆ ಅವಕಾಶ ನೀಡಿದರೆ ಸ್ಪರ್ಧಿಸಲು ಸಿದ್ದ ಎಂದರು.

ಸಂಕ್ರಾಂತಿಗೆ ಜೆಡಿಎಸ್‌ 150 ಅಭ್ಯರ್ಥಿಗಳ ಪಟ್ಟಿ

ಹಳಿಯೂರು ಜಿಪಂ ಕ್ಷೇತ್ರದ ಮತದಾರರು ತಮ್ಮ ಸ್ಪರ್ಧೆಗೆ ಒಲವು ತೋರಿದ್ದು, ಜೆಡಿಎಸ್‌ನಿಂದ ಬಿ. ಫಾರಂ ದೊರೆತರೆ ನಾನು ಗೆಲ್ಲುವ ವಿಶ್ವಾಸವಿದ್ದು, ನನ್ನ ಮನವಿಯನ್ನು ಶಾಸಕ ಸಾ.ರಾ. ಮಹೇಶ್‌ ಅವರು ಮತ್ತು ವರಿಷ್ಠರು ಪರಿಗಣಿಸಬೇಕೆಂದರು.

ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಕಾಂಕ್ಷಿಯಾಗಿದ್ದೇನೆ, ಆದರೆ ನನ್ನನ್ನು ಸೇರಿದಂತೆ ಯಾರಿಗೆ ಅವಕಾಶ ನೀಡಿದರು ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಲು ಬದ್ದನಾಗಿದ್ದೇನೆಂದು ಅವರು ತಿಳಿಸಿದರು.