ಕನಕಪುರ (ನ.11): ತಾಲೂಕಿನ ಮರಳವಾಡಿ ಹೋಬಳಿಯ ವಿವಿಧ ಹಳ್ಳಿಗಳಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ… ಕುಮಾರಸ್ವಾಮಿ ​ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಿದರು.

ಶಿವನಹಳ್ಳಿದೊಡ್ಡಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿ​ರುವ ಸೇತುವೆ ಕಾಮ​ಗಾರಿ ವೀಕ್ಷಿಸಿದ ನಿಖಿಲ್‌ ಅವ​ರು, ಆದಷ್ಟುಬೇಗ ಸೇತುವೆ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿ​ಕೊ​ಡು​ವು​ದಾಗಿ ತಿಳಿ​ಸಿ​ದರು.

ನಿಖಿಲ್‌ ಕುಮಾ​ರ​ಸ್ವಾಮಿಗೆ ತರಾಟೆ : ಮರ​ಳ​ವಾಡಿ ಹೋಬ​ಳಿಯ ಕೆಲ ಹಳ್ಳಿ​ಗ​ಳಿಗೆ ಭೇಟಿ ನೀಡಿದ ಸಂದ​ರ್ಭ​ದಲ್ಲಿ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಪಕ್ಷದ ಕಾರ್ಯ​ಕ​ರ್ತರು ಹಾಗೂ ಗ್ರಾಮ​ಸ್ಥರಿಂದ ಪ್ರತಿ​ರೋಧ ಎದು​ರಿ​ಸಿ​ದ​ರು.

ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ ...

ತಮ್ಮ ಯಾವುದೇ ಕೆಲಸಗಳು ಆಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡುತ್ತೀರಿ ಎಂದು ಗ್ರಾಮ​ಸ್ಥರು ತರಾಟೆ ತೆಗೆ​ದು​ಕೊಂಡ​ರು. ಇನ್ನು ಕಾರ್ಯ​ಕ​ರ್ತ​ರು ಶಾಸಕರು ನಮ್ಮವರೇ ಇದ್ದರೂ ಯಾವುದೇ ಪ್ರಯೋಜನವಾಗು​ತ್ತಿಲ್ಲ. 

ಶಾಸಕಿ ನಮ್ಮ ಕೈಗೆ ಸಿಗುತ್ತಿಲ್ಲ. ಅಧಿಕಾರಿಗಳು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಕ್ಷೇತ್ರ​ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೀರಿ ಎಂದು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಮಜಾಯಿಷಿ ನೀಡಿದ ನಿಖಿಲ್, ಇನ್ನು ಮುಂದೆ ಇಂತಹ ಯಾವುದೇ ಘಟನೆಗಳು ನಡೆಯುವುದಿಲ್ಲ .ಮುಂದಿನ ದಿನಗಳಲ್ಲಿ ಕಚೇ​ರಿ​ಯನ್ನು ಸ್ಥಾಪಿಸಿ ಕ್ಷೇತ್ರದ ಜನರನ್ನು ಹಾಗೂ ಕಾರ್ಯ​ಕ​ರ್ತ​ರನ್ನು ದಿನನಿತ್ಯ ಸಂಪರ್ಕಿಸುವ ಪ್ರಯತ್ನ ಮಾಡುತ್ತೇನೆ ಎಂದರು.