ಅರಸೀಕೆರೆ [ಜ.14]:  ಗಂಡಸಿ ಹೋಬಳಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಗಂಡಸಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ 12 ಮಂದಿ ನಿರ್ದೇಶಕರು ಚುನಾಯಿತರಾಗುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕಾರ ಸಂಘದ 12 ಸ್ಥಾನಗಳಿಗೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡು ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಈ ಪೈಕಿ ಎಲ್ಲ 12 ಸ್ಥಾನಗಳಲ್ಲೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾದ ಜಯಮ್ಮ, ನಂಜಪ್ಪ, ಜಿ.ಎನ್‌ ನಂಜಪ್ಪ, ಪರಮೇಶ್‌, ಮಲ್ಲಿಕಾರ್ಜುನ, ಮಹಮದ್‌ ಅಸೀಫ್‌, ಮಹೇಶ್‌ ಜಿ.ಕೆ., ಮಂಜಣ್ಣ, ಲತಾ, ಜಿ.ಎಂ.ಲಿಂಗರಾಜು, ಶಂಕರಯ್ಯ ಹಾಗೂ ಶಿವಣ್ಣ ಗೆಲುವು ಸಾಧಿಸಿದ್ದು, ಕೆಎಂಎಫ್‌ನ ಹಿರಿಯ ನಿರೀಕ್ಷಕ, ಅಭಿವೃದ್ಧಿ ಅಧಿಕಾರಿ ಹಾಗೂ ಚುನಾಣಾಧಿಕಾರಿ ಅನುಪಮಾ ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಮೂಲಕ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಚುನಾವಣೆ ಚರ್ಚೆಗೆ ತೆರೆ ಎಳೆದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಸುದ್ದಿಗಾರರೊಂದಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಗಂಡಸಿ ಹಾಲು ಉತ್ಪಾದಕರ ಸಂಘ ಮೊದಲಿನಿಂದಲೂ ಜೆಡಿಎಸ್‌ ಆಡಳಿತ ನಡೆಸುತ್ತಾ ಬಂದಿದೆ. ಅಲ್ಲದೇ, ಸಂಘದ ಸರ್ವ ಸದಸ್ಯರ ವಿಶ್ವಾಸಗಳಿಸಿರುವುದರಿಂದ ಚುನಾವಣೆಯಲ್ಲಿ ಹಿನ್ನಡೆಯಾಗಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸ ಇತ್ತು. ಅದರಂತೆ ಮತ್ತೊಮ್ಮೆ ಹಾಲು ಉತ್ಪಾದಕರ ಸಹಕಾರ ಸಂಘ ಜೆಡಿಎಸ್‌ ಬೆಂಬಲಿತ ನಮ್ಮ ಮುಖಂಡರು ಮುನ್ನೆಡೆಸಿಕೊಂಡು ಹೋಗುವ ಅವಕಾಶ ಸಿಕ್ಕಿರುವುದರಿಂದ ಸಂಘದ ಬೆಳವಣೆಗೆ ಜೊತೆಗೆ ಹಾಲು ಉತ್ಪಾದಕರ ಹಿತ ಕಾಯುವಂತ ಯೋಜನೆ ರೂಪಿಸಿಕೊಂಡು ರೈತ ಪರ ಸೇವೆ ಸಲ್ಲಿಸುವಂತೆ ನೂತನ ಸದಸ್ಯರಿಗೆ ಕಿವಿಮಾತು ಹೇಳಿದರು.

ನಾಮಪತ್ರ ಕೇಸ್ ತೀರ್ಪು ಕಾಯ್ದಿರಿಸಿದ ಕೋರ್ಟ್: ಆತಂಕದಲ್ಲಿ ಸಂಸದ ಪ್ರಜ್ವಲ್ ರೇವಣ್ಣ...

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಜಯರಾಂ, ಗಂಡಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜಪ್ಪ, ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಜಿ.ಎನ್‌.ದೇವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್‌, ನಂಜುಂಡಪ್ಪ, ರವಿ, ರೇಣುಕಯ್ಯ ಸೇರಿದಂತೆ ಜೆಡಿಎಸ್‌ ಮುಖಂಡರು ನೂತನ ಸದಸ್ಯರಿಗೆ ಶುಭ ಹಾರೈಸಿದರು.