Asianet Suvarna News Asianet Suvarna News

'ಜೆಡಿಎಸ್‌ನಿಂದ ಸ್ವತಂತ್ರ ಸ್ಪರ್ಧೆ : 123 ಸ್ಥಾನ ಖಚಿತ '

  • ಕಾಂಗ್ರೆಸ್‌ ಜೊತೆ ಕೈ ಜೋಡಿಸಿದ್ದರಿಂದ ಜೆಡಿಎಸ್‌ ಶಕ್ತಿ ಕುಂದಿದೆ
  •  ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್‌ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದ್ದು, 123 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸ
JDS will win 123 seats in Next assembly election Says HD kumaraswamy snr
Author
Bengaluru, First Published Oct 25, 2021, 11:35 AM IST
  • Facebook
  • Twitter
  • Whatsapp

 ಮೈಸೂರು (ಅ.25):  ಕಾಂಗ್ರೆಸ್‌ (Congress) ಜೊತೆ ಕೈ ಜೋಡಿಸಿದ್ದರಿಂದ ಜೆಡಿಎಸ್‌ (JDS) ಶಕ್ತಿ ಕುಂದಿದೆ. ಮುಂದಿನ ಸಾರ್ವತ್ರಿಕ ಚುನಾವಣೆ (Election) ವೇಳೆ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್‌ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದ್ದು, 123 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD kumaraswamy) ಹೇಳಿದರು.

ಮೈಸೂರು (Mysuru) ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಾವು 2023ರ ಚುನಾವಣೆಯಲ್ಲಿ (Assembly Election) ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ. ಉತ್ತರ ಕರ್ನಾಟಕ (North karnataka) ಭಾಗದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಪ್ರಧಾನಿಗಳು ಸ್ವಚ್ಛ ಭಾರತ್‌ (Swach Bharath) ಎಂದು ಹೇಳುತ್ತಾರೆ. ಆದರೆ ಅಲ್ಲಿ ಈಗಲೂ ಬಯಲು ವಿಸರ್ಜನೆ ಇದೆ. ಉಪ ಚುನಾವಣೆಯಲ್ಲಿ (By election) ಯಾವುದೇ ಪಕ್ಷ ಗೆದ್ದರು, ಸಾರ್ವತ್ರಿಕ ಚುನಾವಣೆ ಫಲಿತಾಂಶ ಬೇರೆಯದೇ ಆಗಿರುತ್ತದೆ. ಗುಂಡ್ಲುಪೇಟೆ ಮತ್ತು ನಂಜನಗೂಡು (Nanjanagudu) ಕ್ಷೇತ್ರದ ಉಪ ಚುನಾವಣೆ ಇದಕ್ಕೆ ಸ್ಪಷ್ಟಉದಾಹರಣೆ ಎಂದರು.

'ಕಾಂಗ್ರೆಸ್ ಅಂದರೆ ಬೇರೆಯವರನ್ನು ಹೈಜಾಕ್ ಮಾಡುವ ಪಾರ್ಟಿ'

ಈಗ ನಾವು ಕಡಿಮೆ ಸಂಖ್ಯೆಯಲ್ಲಿರಬಹುದು. ಆದರೆ ನಾವು ಪರಿಶ್ರಮ ಪಟ್ಟರೆ, ಏನು ಬೇಕಾದರೂ ಸಾಧಿಸಬಹುದು. ಶ್ರಮದ ಫಲ ದೊರೆಯುತ್ತದೆ. ಉದಾಹರಣೆಗೆ ಬಿಜೆಪಿ (BJP) 2 ಸ್ಥಾನದಲ್ಲಿತ್ತು, ನಂತರ 18, ಬಳಿಕ 85 ಆಮೇಲೆ 300ಕ್ಕೂ ಹೆಚ್ಚು ಸ್ಥಾನಗಳಿಸಿದೆ. ಅಂತೆಯೇ ಜೆಡಿಎಸ್‌  (JDS)ಕೂಡ 123 ಕ್ಷೇತ್ರದಲ್ಲಿ ಗೆಲ್ಲುತ್ತದೆ. ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ. ಪಕ್ಷ ಬಿಡುವ ತೀರ್ಮಾನ ಮಾಡಿದ್ದವರು ಹಿಂದಿರುಗಿ ಬರುವ ವಿಶ್ವಾಸವಿದ್ದು, ಅಂತಹ ಸೂಚನೆ ಕಂಡುಬರುತ್ತಿದೆ. ನಾವು ಯಾರನ್ನೂ ಬಲವಂತವಾಗಿ ಇರಿಸಿಯೂ ಕೊಳ್ಳುವುದಿಲ್ಲ, ಹೋಗುವವರನ್ನು ಉಳಿಸಿಕೊಳ್ಳುವುದೂ ಇಲ್ಲ ಎಂದು ಅವರು ಹೇಳಿದರು.

ಉಪ ಚುನಾವಣೆಯನ್ನು ನಾವು ಲೆಕ್ಕಕ್ಕೆ ಇಟ್ಟಿರಲಿಲ್ಲ. ಆದರೆ ಎಚ್‌.ಡಿ. ದೇವೇಗೌಡರು (HD Devegowda) ಮಾಡಿದ ಕೆಲಸ ಮತ್ತು ನನ್ನ ಅವಧಿಯಲ್ಲಿ ಸಾಲ ಮನ್ನಾ (Loan waiving) ಮಾಡಿದ್ದನ್ನು ಅಲ್ಲಿನ ಜನ ಪ್ರೀತಿಯಿಂದ ನೆನೆಸಿಕೊಳ್ಳುತ್ತಿದ್ದಾರೆ. ಸಿಂದಗಿಯಲ್ಲಿ (Sindagi) ಗೆಲ್ಲುವ ವಿಶ್ವಾಸವಿದೆ. ಹಾನಗಲ್‌ನಲ್ಲಿ (hanagal) ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವಾಗಲೇ ಭೀರಕ ಮಳೆಯಾಗುತ್ತಿದೆ, ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ವಿಧಾನಸೌಧದ ಕಚೇರಿಗಳು ಬಾಗಿಲು ಹಾಕಿವೆ. ಎಲ್ಲಾ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬೂತ್‌ಗೆ ಒಬೊಬ್ಬರು ಸಚಿವರನ್ನು ನೇಮಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ (Congress) ಪಕ್ಷಗಳು ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿವೆ ಎಂದು ಅವರು ವಿವರಿಸಿದರು.

ಆದರೆ ಸಿಂದಗಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮತ್ತು ಕಾರ್ಯಕರ್ತರನ್ನು ಹೈಜಾಕ್‌ ಮಾಡಿದರೂ ಮತದಾರರು ಜೆಡಿಎಸ್‌ ಪರವಾಗಿದ್ದಾರೆ. ನಾವು ಎರಡೂ ಕ್ಷೇತ್ರದಲ್ಲಿ ಪದವೀಧರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಜೆಡಿಎಸ್‌, ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡಿದೆ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಜೆಡಿಎಸ್‌ನಲ್ಲಿ ದೊಡ್ಡ ಮಟ್ಟದ ನಾಯಕರು ಇಲ್ಲದಿದ್ದರೂ ಕಾರ್ಯಕರ್ತರ ಪಡೆಯೇ ಇದೆ. ಸರ್ಕಾರದ ಕಾರ್ಯವೈಖರಿಯನ್ನು ದಾಖಲೆ ಸಮೇತ ಹೇಳಿದ್ದೇನೆ ಎಂದರು.

Follow Us:
Download App:
  • android
  • ios