mandya : ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆ ಛಿದ್ರ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಭದ್ರಕೋಟೆ ಸಂಪೂರ್ಣ ಛಿದ್ರವಾಗಲಿದೆ ಎಂದು ಮಾಜಿ ಸಂಸದ ಎಲ್ ಆರ್‌. ಶಿವರಾಮೇಗೌಡ  ಭವಿಷ್ಯ ನುಡಿದರು.

JDS Wil Loss  Madduru in Next assembly Election snr

ಮದ್ದೂರು (ನ.02) :  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಭದ್ರಕೋಟೆ ಸಂಪೂರ್ಣ ಛಿದ್ರವಾಗಲಿದೆ ಎಂದು ಮಾಜಿ ಸಂಸದ ಎಲ್ ಆರ್‌. ಶಿವರಾಮೇಗೌಡ  ಭವಿಷ್ಯ ನುಡಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊಪ್ಪ ಹೋಬಳಿ, ಬಿದರಕೋಟೆ, ಕೊಪ್ಪ, ಬಳ್ಳೇಕೆರೆ, ಚೊಟ್ಟನಹಳ್ಳಿ, ಹುರುಗಲವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಜನಸಂಪರ್ಕ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹಿಂದೆ ಮಂಡ್ಯ ಜೆಡಿಎಸ್‌ ಭದ್ರಕೋಟೆಯಾಗಿದ್ದರೂ ಸಹ ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದರೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ನಡೆದ ಎರಡು ಪರಿಷತ್‌ ಚುನಾವಣೆಯಲ್ಲೂ ಜೆಡಿಎಸ್‌ ಅಭ್ಯರ್ಥಿಗಳು ಹೀನಾಯ ಸೋಲು ಕಂಡರು. ಹೀಗಾಗಿ ಜೆಡಿಎಸ… ಕೋಟೆ ಹಂತ ಹಂತವಾಗಿ ಕುಸಿಯುತ್ತಿದೆ ಎಂದರು.

48 ಪರ್ಸೆಂಟ್ ಪಡೆವ ನಾಗಮಂಗಲ ಶಾಸಕ:

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ವಲಸೆ ಹೋಗಿರುವವರು ನನ್ನ ಪ್ರಾಡೆಕ್ಟ್ಗಳು. ಈಗ ಅವರು ತಮ್ಮ ಕೆಲಸ ಮಾಡಿಸಿಕೊಳ್ಳಲು ಬಿಜೆಪಿಯಲ್ಲಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಎಲ್ಲರೂ ನನ್ನ ಪರ ಪ್ರಚಾರ ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಂಸದ ಎಲ್ಆರ್‌. ಶಿವರಾಮೇ ಗೌಡ, ರಾಜ್ಯದಲ್ಲಿ ಬಿಜೆಪಿ ಸರ್ಕಾರ 40 ಪರ್ಸೆಂಚ್‌ ಕಮೀಷನ್‌ ನಡೆಸಿದರೆ, ನಾಗಮಂಗಲ ಶಾಸಕ 48 ಪರ್ಸೆಂಚ್‌ ಪಡೆದು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಲ್ಲಿ ಅವರು ಅಧಿಕ ಮಟ್ಟದ ಕಮೀಷನ್‌ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಈ ವೇಳೆ ಚೇತನ್‌ ಶಿವರಾಮೇಗೌಡ, ಮಂಜೇಶ್‌ಗೌಡ, ಚಂದ್ರಪ್ಪ, ರಮೇಶ್‌, ನಾಗಲಿಂಗಯ್ಯ, ಬೆಟ್ಟೇಗೌಡ, ಪಾಪಣ್ಣ ಇದ್ದರು.

ಜೆಡಿಎಸ್‌ಗೆ ಒಲಿದ ಪಟ್ಟ

ತಾಲೂಕಿನ ಕೈಲಾಂಚ ಹೋಬಳಿಯ ಅಂಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಶಿವಕುಮಾರ್‌ ಹಾಗೂ ಉಪಾಧ್ಯಕ್ಷರಾಗಿ ರಂಜಿತ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 12 ಸ್ಥಾನಗಳ ಪೈಕಿ 11 ಜೆಡಿಎಸ್‌ (JDS)  ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರೆ, 1 ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್‌ ಬೆಂಬಲಿತ ಗೆದ್ದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಜಿ.ಶಿವಕುಮಾರ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಂಜಿತಾ ಅವ​ರನ್ನು ಹೊರತು ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆ​ಲೆ​ಯಲ್ಲಿ ಚುನಾ​ವ​ಣಾ​ಧಿ​ಕಾ​ರಿ ಮದ​ಕರಿ ನಾಯಕ್‌ ಅವಿ​ರೋಧ ಆಯ್ಕೆ ಘೋಷಿ​ಸಿ​ದರು.

ನೂತನ ಅಧ್ಯಕ್ಷ (President)  - ಉಪಾ​ಧ್ಯ​ಕ್ಷ​ರನ್ನು ಅಭಿ​ನಂದಿ​ಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಪಿ.ಅಶ್ವಥ್‌, ಯಾವ ಸಹಕಾರ ಸಂಘಗಳು ರೈತಸ್ನೇಹಿಯಾಗಿ ಕೆಲಸ ಮಾಡುತ್ವೆಯೋ ಅಂತಹ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತವೆ. ಸಹಕಾರ ಸಂಘಗಳನ್ನು ರೈತರು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಬೆಳೆ ಸಾಲ ಸೇರಿದಂತೆ ಹಲವು ಸೌಲಭ್ಯ ಪಡೆಯಬಹುದು. ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಮುಂದೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ದೊರೆಯುತ್ತದೆ. ನೂತನ ಆಡಳಿತ ಮಂಡಳಿ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆ ಸೇರಿದಂತೆ ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಸಾಲ, ಹೈನುಗಾರಿಕೆ ಸಾಲ ನೀಡಿ ಸಂಘವನ್ನು ಇನ್ನಷ್ಟುರೈತಸ್ನೇಹಿಯಾಗಿ ಮಾಡಬೇಕು ಎಂದು ಕರೆ ನೀಡಿದರು.

ನೂತನ ಅಧ್ಯಕ್ಷ ಜಿ. ಶಿವಕುಮಾರ್‌ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸಲಾಗುತ್ತದೆ ಎಂದರು.

ನೂತನ ಅಧ್ಯಕ್ಷ ಜಿ.ಶಿವಕುಮಾರ್‌ ಮತ್ತು ಉಪಾಧ್ಯಕ್ಷೆ ರಂಜಿತಾ ಸೇರಿದಂತೆ ನಿರ್ದೇಶಕರಾದ ಕೆ. ಶಿವರಾಜು, ಪವಿತ್ರ ಎಸ್‌.ಮಹೇಶ್‌, ವರದರಾಜು, ಮಹದೇವಯ್ಯ, ದೇವರಾಜು, ಪಿ. ರಾಮಚಂದ್ರ, ಡಿ. ನಾಗರಾಜು, ಮರಿಸ್ವಾಮಿ, ಚಲುವರಾಜು ಅವರನ್ನು ಸಂಘದ ಆವರಣದಲ್ಲಿ ಜೆಡಿಎಸ್‌ ಮುಖಂಡರು ಅಭಿನಂದಿಸಿದರು.

ಜೆಡಿಎಸ್‌ ಮುಖಂಡ ಕವಣಾಪುರ ಕೆ.ಶಿವಲಿಂಗಯ್ಯ, ಗಿರೀಶ್‌, ಚನ್ನಂಕೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಸ್‌.ಮಹೇಶ್‌, ಉಪಾಧ್ಯಕ್ಷ ವಡ್ಡರಹಳ್ಳಿ ವೆಂಕಟೇಶ್‌, ತಮ್ಮಯ್ಯ, ಕರಿಯಪ್ಪ, ಆರ್‌.ನಾಗೇಶ್‌, ಬಸವರಾಜು, ಎ.ತಮ್ಮಣ್ಣ, ಗೌಡಯ್ಯ, ಕೃಷ್ಣಪ್ಪ, ಎ.ಎನ್‌.ಕೃಷ್ಣಶೆಟ್ಟಿ, ಎ.ಶಿವಣ್ಣ, ಚಂದ್ರಶೇಖರ್‌, ಆನಂದಗಿರಿ, ಎಸ್‌.ಸಿದ್ದರಾಮಯ್ಯ, ಕೆ.ಎಸ್‌. ಗುರುಲಿಂಗಯ್ಯ, ಸದಾಶಿವಯ್ಯ, ಬಿ.ಚಂದ್ರಶೇಖರ್‌, ಸಂಘದ ಸಿಇಒ ಕಾಂತರಾಜು, ಡೇರಿ ಕಾರ್ಯದರ್ಶಿ ಯೋಗಾನಂದ ​ಹಾ​ಜ​ರಿದ್ದರು.

Latest Videos
Follow Us:
Download App:
  • android
  • ios