ಮೖಸೂರು[ಫೆ.11]: ಪಿರಿಯಾಪಟ್ಟಣ ತಾಲೂಕಿನ ನಂದಿನಾಥಪುರ ಪಿಎಸಿಸಿಎಸ್‌ನ ನೂತನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತರು ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಒಟ್ಟು 12ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತರು 7 ಮತ್ತು ಕಾಂಗ್ರೆಸ್‌ ಬೆಂಬಲಿತರು 5 ಮಂದಿ ಆಯ್ಕೆಯಾದರು.

ಜೆಡಿಎಸ್‌ ಬೆಂಬಲಿತರು: ನಂದಿನಾಥಪುರ ಗ್ರಾಮದ ಎಚ್‌.ಡಿ. ರಾಜೇಂದ್ರ, ಪೂನಾಡಹಳ್ಳಿಯ ಪಿ.ವಿ. ಜಲೇಂದ್ರ, ಹುಣಸವಾಡಿ ಗ್ರಾಮದ ಎಚ್‌.ಬಿ. ಗೋವಿಂದೇಗೌಡ, ನವಿಲೂರಿನ ಎನ್‌.ಈ. ರಾಜು, ಆಲನಹಳ್ಳಿಯ ನಾಗಪ್ಪ ಮತ್ತು ಜವರೇಗೌಡ, ನಾರಾಳಾಪುರ ಗ್ರಾಮದ ಎಚ್‌.ಎಚ್‌. ಮಾಲತಿ ಆಯ್ಕೆಯಾದವರು.

ಕೊನೇ ಮತ ಮೊಮ್ಮಗಳಿಗೆ ಒತ್ತಿ ಮೃತಪಟ್ಟ ಶತಾಯುಷಿ!

ಕಾಂಗ್ರೆಸ್‌ ಬೆಂಬಲಿತರು: ಮಲ್ಲಿನಾಥಪುರ ಗ್ರಾಮದ ಎಂ.ಎಸ್‌. ಸ್ವಾಮಿಗೌಡ, ಪುಾನಾಡಹಳ್ಳಿ ಗ್ರಾಮದ ಪಿ.ಜೆ. ಮಂಜುನಾಥ್ ಮತ್ತು ವೆಂಕಟೇಶ್, ಆಲನಹಳ್ಳಿ ಗ್ರಾಮದ ಕೃಷ್ಣೇಗೌಡ, ಹುಣಸವಾಡಿ ಗ್ರಾಮದ ಭಾಗ್ಯ ಆಯ್ಕೆಯಾದವರು.