ಹುಣಸೂರು[ಫೆ.10]: ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಶತಾಯುಷಿಯೊಬ್ಬರು ಮೃತಪಟ್ಟಘಟನೆ ಭಾನು​ವಾ​ರ ಹುಣಸೂರಲ್ಲಿ ನಡೆದಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ ಮೊಮ್ಮಗಳಿಗೆ ಕೊನೇ ಮತದಾನ ಮಾಡಿ ಈ ಹಿರಿಯಜ್ಜಿ ತೀರಿಕೊಂಡಿದ್ದಾರೆ. ಪಟ್ಟಣದ ಸಿಂಗಮ್ಮ (106) ಮೃತರು. ಇವರು ತಮ್ಮ ಮೊಮ್ಮಗಳೊಂದಿ​ಗೆ 3ನೇ ವಾರ್ಡ್‌ನಲ್ಲಿ ಮತ ಚಲಾಯಿಸಲು ಆಗಮಿಸಿದ್ದರು. ಮೊಮ್ಮಗಳಾದ ಗೀತಾ ಶ್ರೀನಿ​ವಾಸ್‌ ಸ್ಪರ್ಧಿಸಿದ್ದರಿಂದ ಖುಷಿಯಿಂದಲೇ ಮತ ಚಲಾಯಿಸಿದ್ದರು.

ಮತದಾನ ಮಾಡಿ ಮನೆಗೆ ಹೋದ ಕೆಲವೇ ಕ್ಷಣದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಒಂದೇ ಕುಟುಂಬದ 106 ಮಂದಿ ಮತದಾನ!

ಚಿಕ್ಕಾಬಳ್ಳಾಪುರ ನಗರಸಭಾ ಚುನಾವಣೆಯಲ್ಲಿ ಒಂದೇ ಕುಟುಂಬದ 106 ಮಂದಿ ಸದಸ್ಯರು ಏಕ ಕಾಲದಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದವರಾದ ರತ್ನಯ್ಯ ಶೆಟ್ಟಿಕುಟುಂಬ ಸದಸ್ಯರು ಪ್ರತಿ ಚುನಾವಣೆಯಲ್ಲೂ ಒಟ್ಟಿಗೇ ಬಂದು ಮತದಾನ ಮಾಡಿ ಅಚ್ಚರಿ ಮೂಡಿಸುತ್ತಾರೆ.