ಮೈಸೂರು (ಸೆ.02): ಕೆ.ಆರ್‌. ನಗರ ತಾಲೂಕಿನ ರೈತರ ಜೀವನಾಡಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಟೆಂಡರ್‌ ಪಡೆಯಲು ಅಸಕ್ತಿ ಹೊಂದಿರುವ ನಿರಾಣಿ ಷುಗರ್ಸ್‌ಗೆ ಟೆಂಡರ್‌ ಹಾಗೂ ದಾಖಲಾತಿಯಲ್ಲಿ ಕೆಲ ಬದಲಾವಣೆ ಬಯಸಿರುವ ಕಾರಣ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ.

ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಅವರಿಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್‌ ಅವರು ಪತ್ರ ಬರೆದಿದ್ದಾರೆ. 

ಸಾರಾ ಮಹೇಶ್‌, ಎಚ್‌. ವಿಶ್ವನಾಥ್ ನಡುವೆ ಮಿತಿ ಮೀರಿದ ಜಟಾಪಟಿ.

ಕಳೆದ 8-9 ವರ್ಷಗಳಿಂದ ಶ್ರೀರಾಮ ಸಕ್ಕರೆ ಕಾರ್ಖಾನೆ ಸ್ಥಗಿತವಾಗಿದ್ದು ಕೆ.ಅರ್‌. ನಗರ ತಾಲೂಕಿನ ಕಬ್ಬು ಬೆಳೆಗಾರರಿಗೆ ಹಾಗೂ ಕಾರ್ಖಾನೆ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ವಿಶ್ವನಾಥ್‌ಗೆ ಎದುರಾಯ್ತು ಮತ್ತೊಂದು ಕಂಟಕ: ಪರಿಷತ್‌ ಸ್ಥಾನ ರದ್ದತಿಗೆ ಶಾಸಕರಿಂದ ಪತ್ರ...

ಆದ್ದರಿಂದ ಕಾರ್ಖಾನೆಯನ್ನು ಮತ್ತೆ ಪ್ರಾರಂಭಿಸಲು ಒಪ್ಪಿರುವ ನಿರಾಣಿ ಷುಗರ್ಸ್‌ ಮುದೋಳ್‌ ಇವರಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ ಪತ್ರದ ಮೂಲಕ ಸಚಿವ ಹೆಬ್ಬಾರ್ ಬಳಿ ಸಾ ರಾ ಮಹೇಶ್ ಮನವಿ ಮಾಡಿದ್ದಾರೆ.