'ಕುಮಾರಸ್ವಾಮಿಗೆ ಮಾಹಿತಿ ಕೊರತೆ ಇದೆ, ನಾನು ದ್ರೋಹ ಮಾಡಿಲ್ಲ'
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವುದಿಲ್ಲ| ನನಗೆ ಚುನಾವಣೆ ನಡೆಸಲು ಶಕ್ತಿಯಿಲ್ಲ| ನೀವು ಯಾರನ್ನಾದರೂ ಅಭ್ಯರ್ಥಿಯಾಗಿ ಮಾಡಿಕೊಳ್ಳಿ, ಅವರಿಗೆ ನನ್ನ ಬೆಂಬಲವಿದೆ: ಶಾಸಕ ಎಸ್.ಆರ್.ಶ್ರೀನಿವಾಸ್|
ತುಮಕೂರು(ಡಿ.23): ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದರು ಎಂದು ತಮ್ಮ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಿಗೆ ಮಾಹಿತಿ ಕೊರತೆಯಿದೆ, ನಾನು ಯಾರಿಗೂ ದ್ರೋಹ ಮಾಡಿದವನಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಯಾರೋ ಹೇಳಿದ ಮಾತು ಕೇಳಿದ್ದಾರೆ. ಅವರು ಸಿಎಂ ಆಗಲು ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದೇನೆ. ಇಷ್ಟಿದ್ದರೂ ಅವರು ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ ಎಂದಿದ್ದಾರೆ.
'ಕುಮಾರಸ್ವಾಮಿ ಒಳಒಪ್ಪಂದಗಳ ಪ್ರಿನ್ಸಿಪಾಲ್'
ಜೆಡಿಎಸ್‌ನಿಂದ ಸ್ಪರ್ಧಿಸಲ್ಲ:
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಶ್ರೀನಿವಾಸ್ ಅವರು ಸ್ಪಷ್ಟಪಡಿಸಿದ್ದಾರೆ. ನನಗೆ ಚುನಾವಣೆ ನಡೆಸಲು ಶಕ್ತಿಯಿಲ್ಲ. ನೀವು ಯಾರನ್ನಾದರೂ ಅಭ್ಯರ್ಥಿಯಾಗಿ ಮಾಡಿಕೊಳ್ಳಿ, ಅವರಿಗೆ ನನ್ನ ಬೆಂಬಲವಿದೆ ಎಂದು ಈಗಲೂ ಹೇಳಿ ಬಂದಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ, ನಾನು ಕೃಷ್ಣಪ್ಪ ಅವರ ಬೆನ್ನಿಗೆ ಚೂರಿಗೆ ಹಾಕಿಲ್ಲ. ನಾನು ಅಥವಾ ನಮ್ಮ ಕುಟುಂಬ ಹೋಗಿ ಮತ ನೀಡಬೇಡಿ ಎಂದಿದ್ದರೆ ನಮ್ಮ ಮನೆ ಹಾಳಾಗಲಿ. ಕೃಷ್ಣಪ್ಪ ಯೋಗ್ಯತೆ ಉಳಿಸಿಕೊಳ್ಳದೆ ಸೋತರೆ ಅದಕ್ಕೆ ನಾನು ಹೊಣೆಯಲ್ಲ ಎಂದು ಕುಟುಕಿದರು.