ವಿಜಯಪುರ (ನ.03):  ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಪಕ್ಷ ವಿರೋಧಿಯಾಗಿಲ್ಲ. ಜನಪರವಾದ ಧ್ವನಿಯಾಗಿದೆ ಎಂದು ಜೆಡಿಎಸ್‌ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.

ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಬೆಂಗಳೂರಿನ ನೆರೆ ಸಂತ್ರಸ್ತರಿಗೆ 25 ಸಾವಿರ ರು. ಹಾಗೂ ಈ ಭಾಗದಲ್ಲಿ ಮನೆ ಕಳೆದುಕೊಂಡವರಿಗೆ 10 ಸಾವಿರ ಪರಿಹಾರ ಧನ ನೀಡಿ ಮಲತಾಯಿ ಧೋರಣೆ ಅನುಸರಿಸಲಾಗಿದೆ. 

ಭರ್ಜರಿ ಕೊಡುಗೆ ಮೂಲಕ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದ ಯತ್ನಾಳ್ ಮನವೊಲಿಕೆಗೆ ಯತ್ನ

ಅದಕ್ಕಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆಡಳಿತ ಪಕ್ಷದವರಾಗಿದ್ದರೂ ಖಂಡಿಸಿ, ವಿರೋಧಿಸಿದ್ದಾರೆ. ಇದು ಅವರ ಜನಪರ ನಿಲುವು ಆಗಿದೆ. ಯತ್ನಾಳ ಅವರ ಹೇಳಿಕೆ ಪಕ್ಷವಿರೋಧಿಯಾಗಿಲ್ಲ. ಇದಕ್ಕೆ ಯತ್ನಾಳರನ್ನು ಉತ್ತರ ಕರ್ನಾಟಕದ ಹುಲಿ. ನ್ಯಾಯಕ್ಕಾಗಿ ಅವರು ಸದಾ ಧ್ವನಿ ಎತ್ತುತ್ತಾರೆ. ಇದನ್ನು ಜನಪರವಾದ ಧ್ವನಿಯಾಗಿದೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಶಾಸಕ ದೇವಾನಂದ ಹೇಳಿದರು.