ಜೆಡಿಎಸ್ ನಾಯಕರು ನಿಷ್ಠಾವಂತರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಚುನಾವಣೆ ಬೆನ್ನಲ್ಲೇ ಹಲವು ಮುಖಂಡರು ಪಕ್ಷ ತೊರೆಯುತ್ತಿದ್ದು ಜೆಡಿಎಸ್ ಸಂಕಷ್ಟ ಎದುರಿಸುವಂತಾಗಿದೆ.
ರಾಮನಗರ (ಡಿ.07): ಸ್ಥಳೀಯ ಸಂಸ್ಥೆಯಲ್ಲಿ ಅವಕಾಶ ಇದ್ದರೂ ಅಧಿಕಾರ ಕೊಡಿಸಲು ಪ್ರಯತ್ನಿಸಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ನ ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷ ಸೇರಿ ಅಧಿಕಾರ ಅನುಭವಿಸಿದರು. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಜೆಡಿಎಸ್ ವರಿಷ್ಠರು ಮಾಡಲಿಲ್ಲ.
ಈಗ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಹಾಗೂ ಪಕ್ಷದ ಸಂಘಟನೆಗಾಗಿ ಹಗಲಿರಳು ಶ್ರಮಿಸಿದ ಗ್ರಾಮ ಮಟ್ಟದಲ್ಲಿರುವ ಪಕ್ಷದ ಮುಖಂಡರು - ಕಾರ್ಯಕರ್ತರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪೈಪೋಟಿಗೆ ಇಳಿದಿದ್ದಾರೆ. ಇಷ್ಟಾದರೂ ದಳಪತಿಗಳನ್ನು ನಿಷ್ಠಾವಂತರನ್ನು ಉಳಿಸಿಕೊಳ್ಳಲು ಮನಸ್ಸು ಮಾಡದೆ ಮೌನ ವಹಿಸಿದ್ದಾರೆ.
ಕಾಂಗ್ರೆಸ್ - ಬಿಜೆಪಿಯಿಂದ ಜೆಡಿಎಸ್ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅನ್ಯ ಪಕ್ಷದ ಮುಖಂಡರಾಗಲಿ ಅಥವಾ ಕಾರ್ಯಕರ್ತರಾಗಲಿ ಜೆಡಿಎಸ್ ನತ್ತ ಒಲವು ತೋರುತ್ತಿಲ್ಲ. ಇದರ ಅರ್ಥ ಚುನಾವಣೆಗಳಲ್ಲಿ ಅಭಿವೃದ್ಧಿ ಮಾನದಂಡ ಆಗುವುದಿಲ್ಲ ಎನ್ನುತ್ತಾರೆ ಜೆಡಿಎಸ್ ನಾಯಕರೊಬ್ಬರು.
ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದದು, ಮೂರು ಪಕ್ಷದ ನಾಯಕರು ಗ್ರಾಮಗಳಿಗೆ ತೆರಳುತ್ತಿದ್ದಾರೆ. ಇದರಿಂದ ಚುನಾವಣೆ ಹೊತ್ತಿನಲ್ಲಿ ಇನ್ನಷ್ಟುಮುಖಂಡರು - ಕಾರ್ಯಕರ್ತರು ಮೂಲ ಪಕ್ಷ ತೊರೆದು ಇತರೆ ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಸಾಧ್ಯತೆಗಳಿವೆ. ಒಟ್ಟಾರೆ ಕಾಂಗ್ರೆಸ್ - ಬಿಜೆಪಿಯಿಂದ ಜೆಡಿಎಸ್ ಶಕ್ತಿಯನ್ನು ಕುಗ್ಗಿಸುವ ಕಾರ್ಯ ನಡೆಯುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 7, 2020, 1:52 PM IST