ಚಿಕ್ಕಮಗಳೂರು(ಏ.10): ಲಾಕ್‌ಡೌನ್‌ ಹಿನ್ನಲೆಯಲ್ಲಿ ನಿರ್ಗತಿಕರು, ಬಡವರು, ವಲಸಿಗರು ಹಸಿವಿನಿಂದ ಪರದಾಡುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಾರಲು ಜೆಡಿಎಸ್‌ ನಾಯಕ ವೈ ಎಸ್ ವಿ ದತ್ತಾ ಸೇರಿದಂತೆ ಸಮಾನ ಮನಸ್ಕರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನಗರದ ಶಂಕರಪುರದ ದಲಿತ ಮಹಿಳೆ ಸಾವಿತ್ರಮ್ಮ ಎಂಬವರ ಮನೆಯಲ್ಲಿ ಉಪವಾಸ ಆರಂಭಿಸಿರುವ ಅವರು, ಇಂದು(ಶುಕ್ರವಾರ) ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. 

ಪಕ್ಷಿಗಳ ಪರದಾಟ: ಧಾನ್ಯ ನೀಡಿ ಮಾನವೀಯತೆ ಮೆರೆದ ಸಚಿವ ಅಶೋಕ್‌

ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಬಡಜನರು ಹಸಿವಿನಿಂದ ಸಾಯುತ್ತಿದ್ದಾರೆ. ಈ ಸ್ಥಿತಿಗೆ ನಾವು ಕೂಡ ಪಾಲುದಾರರಾಗಿದ್ದೇವೆ. ಪಶ್ಚಾತಾಪ, ಪ್ರಾಯಶ್ಚಿತದ ಫಲವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ವೈ ಎಸ್ ವಿ ದತ್ತಾ ಅವರಿಗೆ ಮಾಜಿ ಸಚಿವ ಬಿ ಬಿ ನಿಂಗಯ್ಯ , ಜೆಡಿಎಸ್, ಸಿಪಿಐ, ಬಿಎಸ್ ಪಿ ಮುಖಂಡರು ಸಾಥ್ ನೀಡಿದ್ದಾರೆ. 

"